ಕರ್ನಾಟಕ

ಶೀಘ್ರದಲ್ಲೇ ಹಾಲು, ಮೊಸರು, ಬೆಣ್ಣೆ, ಪನೀರ್ ಇವೆಲ್ಲವೂ ಜನಸಾಮಾನ್ಯರಿಗೆ ಅತ್ಯಂತ ಅಗ್ಗದ ದರದಲ್ಲಿ ಲಭ್ಯ

Pinterest LinkedIn Tumblr

ಶೀಘ್ರದಲ್ಲೇ ಆಮದು ಮಾಡಿಕೊಂಡ ಹಾಲು, ಮೊಸರು, ಬೆಣ್ಣೆ, ಪನೀರ್ ಇವೆಲ್ಲವೂ ಜನಸಾಮಾನ್ಯರಿಗೆ ಲಭ್ಯವಾಗಲಿದೆ, ಅದು ಕೂಡ ಅತ್ಯಂತ ಅಗ್ಗದ ದರದಲ್ಲಿ. ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಕುರಿತ ಸಭೆಯಲ್ಲಿ 16 ದೇಶಗಳೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ಚರ್ಚೆ ನಡೆದಿದೆ.

ಈ ವಿಚಾರದಲ್ಲಿ ಒಮ್ಮತಾಭಿಪ್ರಾಯಗಳಿಲ್ಲ. ಒಪ್ಪಂದ ಮಾಡಿಕೊಂಡಲ್ಲಿ ದೇಶೀಯ ಉದ್ಯಮಗಳಿಗೆ ನಷ್ಟವಾಗುತ್ತದೆ ಅನ್ನೋದು ಕೆಲವರು ಆತಂಕ. ಇನ್ನು ಕೆಲವರು ಒಪ್ಪಂದ ಮಾಡಿಕೊಳ್ಳಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚೀನಾ, ಜಪಾನ್, ಆಸ್ಟ್ರೇಲಿಯಾ, ಥೈಲ್ಯಾಂಡ್, ಸಿಂಗಾಪುರ, ವಿಯೆಟ್ನಾಂ ಮತ್ತು ಫಿಲಿಪೈನ್ಸ್ ಸೇರಿದಂತೆ ಒಟ್ಟು 16 ದೇಶಗಳು ಪರಸ್ಪರ ವ್ಯವಹಾರ ಸಂಬಂಧದ ಬಗ್ಗೆ ಒಪ್ಪಂದ ಮಾಡಿಕೊಳ್ಳಲಿವೆ.

ಈ ದೇಶಗಳಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲಿನ ಇಂಪೋರ್ಟ್ ಡ್ಯೂಟಿಯನ್ನು ಸರ್ಕಾರ ಕಡಿತಗೊಳಿಸಬೇಕಾಗುತ್ತದೆ. ಇದರಿಂದಾಗಿ ಜನರಿಗೆ ಅತ್ಯಂತ ಅಗ್ಗದ ದರದಲ್ಲಿ ವಸ್ತುಗಳು ದೊರೆಯಲಿವೆ. ಅದೇ ರೀತಿ ಭಾರತದ ವಸ್ತುಗಳು ಕೂಡ ಇತರೆ ದೇಶಗಳಿಗೆ ಕಡಿಮೆ ಬೆಲೆಯಲ್ಲಿ ರಫ್ತಾಗಲಿವೆ.

ಇದರಿಂದ ಭಾರತಕ್ಕೆ ಆಗುವ ಲಾಭವೆಂದ್ರೆ ಇಲ್ಲಿ ತಯಾರಾದ ಪದಾರ್ಥಗಳು ಹೆಚ್ಹೆಚ್ಚು ಪ್ರಮಾಣದಲ್ಲಿ ಇತರ ದೇಶಗಳಿಗೆ ರಫ್ತಾಗಲಿವೆ. ಅದರ ಜೊತೆಗೆ ಆಮದು ಮಾಡಿಕೊಂಡ ಹಾಲು, ಮೊಸರು, ಬೆಣ್ಣೆ, ಪನೀರ್ ಇವೆಲ್ಲವೂ ಅಗ್ಗದ ಬೆಲೆಯಲ್ಲಿ ದೊರೆಯುತ್ತವೆ. ಹಾಗೂ ಎಂಜಿನಿಯರಿಂಗ್ ವಸ್ತುಗಳು ಕೂಡ ಕಡಿಮೆ ಬೆಲೆಗೆ ಸಿಗಲಿವೆ.

Comments are closed.