ಕರ್ನಾಟಕ

ಸಂಸದರನ್ನು ನೆರೆ ಪರಿಹಾರ ವಿಷಯದಲ್ಲಿ ಟೀಕಿಸುವುದು ಸರಿಯಲ್ಲ: ಸುಮಲತಾ ಅಂಬರೀಷ್

Pinterest LinkedIn Tumblr


ಮೈಸೂರು(ಅ. 04): ಸಂಸದರು ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡುತ್ತಿಲ್ಲ ಅನ್ನುವುದು ಸರಿಯಲ್ಲ. ಪ್ರಶ್ನೆ ಮಾಡುವುದೆಂದರೆ ಸಾರ್ವಜನಿಕ ವೇದಿಕೆಯಲ್ಲಿ ಮಾತನಾಡಬೇಕು ಅಂತನೂ ಇಲ್ಲ. ನಮ್ಮ ಪ್ರಯತ್ನಗಳನ್ನು ನಾವು ಮಾಡುತ್ತಿದ್ದೇನೆ ಎಂದು ಪಕ್ಷೇತರ ಸಂಸದೆ ಸುಮಲತಾ ಅಂಬರೀಷ್ ಹೇಳಿದರು. ರಾಜ್ಯದ ಸಂಸದರು ಕೇಂದ್ರದಿಂದ ನೆರೆ ಪರಿಹಾರ ತರುವಲ್ಲಿ ವಿಫಲರಾಗಿದ್ಧಾರೆ ಎಂಬ ಟೀಕೆಗೆ ಸುಮಲತಾ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.

ನೆರೆ ಪರಿಹಾರ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಚಿವಾಲಯದೊಂದಿಗೆ ಸಂಪರ್ಕದಲ್ಲಿದ್ದೇವೆ. ಪತ್ರ ಬರೆಯುವ ಮೂಲಕ ಮನವಿ ಮಾಡುವುದು ವಾಡಿಕೆ. ನಾನು ನೇರವಾಗಿ ಫೋನ್ ಮಾಡಿ ನೆರೆ ಪರಿಹಾರದ ಬಗ್ಗೆ ಮಾತನಾಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ತಾಂತ್ರಿಕ ಕಾರಣಗಳಿಂದ ಕೇಂದ್ರ ಸರ್ಕಾರ ವರದಿಯನ್ನು ತಿರಸ್ಕಾರ ಮಾಡಿರಬಹುದು. ಆದರೆ ಪರಿಹಾರವನ್ನೇ ಕೊಡದೇ ಇರಲು ಸಾಧ್ಯವಿಲ್ಲ. ಹೀಗಾಗಿ ಕೇಂದ್ರ ಅತಿ ಶೀಘ್ರದಲ್ಲೇ ಪರಿಹಾರ ಬಿಡುಗಡೆ ಮಾಡಲಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ಸಮರ್ಥಿಸಿಕೊಂಡಿದ್ದಾರೆ.

ಕೇಂದ್ರದಿಂದ ಹಣ ಬಿಡುಗಡೆಯಾಗಿಲ್ಲ : ಸಚಿವ ಈಶ್ವರಪ್ಪ

ರಾಜ್ಯದಲ್ಲಿ ಬರ ಪರಿಸ್ಥಿತಿ ಬಂದಾಗ ಹಿಂದಿನ ಸರ್ಕಾರದ ಒಬ್ಬ ಸಚಿವರುಗಳೂ ಸಂತ್ರಸ್ತ ಜಿಲ್ಲೆಗಳಿಗೆ ಭೇಟಿ ನೀಡಲಿಲ್ಲ. ಪ್ರವಾಸವನ್ನಾದರೂ ಮಾಡಿ ಅಂದಿದ್ವಿ. ಆದರೆ ಅವರು ಅದನ್ನೂ ಮಾಡಲಿಲ್ಲ. ನಾವು ನೆರೆ ಸಂತ್ರಸ್ತರಿಗೆ ಸಹಾಯ ಮಾಡುತ್ತಾ ಇದ್ದೇವೆ.
ಆದರೆ ಕೇಂದ್ರದಿಂದ ಹಣ ಬಿಡುಗಡೆಯಾಗದಿದ್ದರೂ ನಾವು ಕೆಲಸವನ್ನು ಮಾಡುತ್ತಾ ಇದ್ದೇವೆ. ಒಂದೆರಡು ದಿನದಲ್ಲಿ ಹಣ ಬಿಡುಗಡೆಯಾಗಲಿದೆ. ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ವಿರೋಧ ಪಕ್ಷವಾಗಿ ಕೆಲಸ ಮಾಡಲು ಅವರು ವಿಫಲರಾಗಿದ್ದಾರೆ.
ಅವರ ವೈಫಲ್ಯವನ್ನು ಮುಚ್ಚಿಕೊಳ್ಳಲು ಟೀಕೆ ಮಾಡುತ್ತಿದ್ದಾರೆ ಎಂದು ಸಚಿವ ಈಶ್ವರಪ್ಪ ಆರೋಪಿಸಿದ್ಧಾರೆ.

ನಮ್ಮ ರಾಜ್ಯಕ್ಕೆ ಮಾತ್ರವಲ್ಲದೆ ಇತರ 12 ರಾಜ್ಯಗಳಿಗೂ ಪರಿಹಾರ ಹಣ ಬಿಡುಗಡೆಯಾಗಿಲ್ಲ. ಸಿಎಂ ಯಡಿಯೂರಪ್ಪ ಅವರನ್ನೇ ಟಾರ್ಗೆಟ್ ಮಾಡಿದ್ದರೆ ಕರ್ನಾಟಕ ಬಿಟ್ಟು ಉಳಿದ ರಾಜ್ಯಗಳಿಗಾದರೂ ಹಣ ಬಿಡುಗಡೆಯಾಗಬೇಕಿತ್ತು. ಇದು ಕೇವಲ ಟೀಕೆ ಮಾಡಲು ಮಾಡುತ್ತಿರುವ ಕೆಲಸ. ರಾಜಕೀಯ ಮಾಡಲಿ, ಆದರೆ ನೆರೆ ವಿಚಾರವಾಗಿ ರಾಜಕೀಯ ಮಾಡುವುದು ಸರಿಯಲ್ಲ. ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಟೀಕೆ ಮಾಡಲಿ. ನಾವು ನಮ್ಮ ವಿಫಲತೆಯನ್ನು ತಿದ್ದುಕೊಳ್ಳುತ್ತೇವೆ. ಆದ್ರೆ ಸುಮ್ನನೆ ಟೀಕೆಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ಧಾರೆ.

Comments are closed.