ಕರ್ನಾಟಕ

ರೈತರಿಂದ ಯಡಿಯೂರಪ್ಪ ಕಾರಿಗೆ ಮುತ್ತಿಗೆ ಯತ್ನ

Pinterest LinkedIn Tumblr


ಬೆಳಗಾವಿ: ನೆರೆ ಸಂತ್ರಸ್ತರ ನೋವು ಆಲಿಸಲು ಜಿಲ್ಲೆಗೆ ಬಂದಿರುವ ಮುಖ್ಯಮಂತ್ರಿಗಳಿಗೆ ರೈತರ ಪ್ರತಿಭಟನೆಯ ಬಿಸಿ ತಟ್ಟಿದ್ದು, ಯಡಿಯೂರಪ್ಪ ಅವರ ಬೆಂಗಾವಲು ವಾಹನಕ್ಕೆ ಅಡ್ಡ ಮಲಗಲು ಮುಂದಾದ ರೈತರನ್ನು ವಶಕ್ಕೆ ಪಡೆದುಕೊಳ್ಳಲಾಯಿತು.

ಮುಖ್ಯಮಂತ್ರಿಗೆ ಘೇರಾವ್ ಹಾಕಲು ಬಂದ ರೈತರನ್ನು ತಡೆದ ಪೊಲೀಸರು, ಅತಿಥಿ ಗೃಹದ ಗೇಟ್ ಬಳಿ ಎಲ್ಲ ರೈತರನ್ನು ವಶಕ್ಕೆ ಪಡೆದು ಕೊಳ್ಳಲಾಯಿತು. ರಸ್ತೆ ಮಧ್ಯದಲ್ಲಿ ಮಲಗಿ ಪ್ರತಿಭಟನೆ ಮಾಡುತ್ತಿದ್ದ ರೈತರು ಸಿಎಂ ಕಾರು‌ ಹೋಗುತ್ತಿದ್ದಂತೆ ಸಿಎಂ ಗೆ ಧಿಕ್ಕಾರ ಕೂಗಿದ ರೈತರು, ಬೆಳೆ ಪರಿಹಾರಕ್ಕಾಗಿ ಆಗ್ರಹಿಸಿದರು.

ಹದಿನೈದಕ್ಕೂ ಅಧಿಕ ರೈತರನ್ನು ವಶಕ್ಕೆ ಪಡೆದ ಪೊಲೀಸರು ಠಾಣೆಗೆ ಕರೆದೊಯ್ದರು. ಎಪಿಎಂಸಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರೂ ಠಾಣೆ ಒಳಗೆ ಇದ್ದುಕೊಂಡು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಡಿಸಿಎಂ ಲಕ್ಷ್ಮಣ ಸವದಿ ವಿರುದ್ಧ ಧಿಕ್ಕಾರ ಕೂಗಿದರು. ರೈತರ ಪರವಾಗಿದ್ದ ಇಪ್ಪತ್ತೈದು ಸಂಸದರು ಸತ್ತಿದ್ದಾರೆ ಎಂದು ಬೊಬ್ಬೆ ಹೊಡೆದು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ರೈತರನ್ನು ಬಿಡುಗಡೆ ಮಾಡಲಾಯಿತು.

Comments are closed.