ಕರ್ನಾಟಕ

ಇಡಿ ಅಧಿಕಾರಿಗಳಿಂದ ಡಿ.ಕೆ. ಸುರೇಶ್​ ವಿಚಾರಣೆ

Pinterest LinkedIn Tumblr


ನವದೆಹಲಿ (ಅ. 3): ಅಕ್ರಮ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಡಿಕೆಶಿ ಆಸ್ತಿ ಏರಿಕೆ ಸಂಬಂಧ ತೀವ್ರ ಅನುಮಾನ ವ್ಯಕ್ತಪಡಿಸಿರುವ ಇ.ಡಿ. ಡಿಕೆಶಿ ಸಂಬಂಧಿಕರು, ಆತ್ಮೀಯರನ್ನು ವಿಚಾರಣೆ ಒಳಪಡಿಸುತ್ತಿದೆ. ಡಿಕೆಶಿ ಮಗಳು ಐಶ್ವರ್ಯ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿಚಾರಣೆಯನ್ನೂ ನಡೆಸಿರುವ ಅಧಿಕಾರಿಗಳು ಇಂದು ಡಿಕೆಶಿ ಸಹೋದರ ಹಾಗೂ ಸಂಸದ ಡಿ.ಕೆ. ಸುರೇಶ್ ಅವರನ್ನು ದಿನವಿಡೀ ವಿಚಾರಣೆ ನಡೆಸಿದ್ದಾರೆ.

ಬೆಳಗ್ಗೆಯೇ ನವದೆಹಲಿಯ ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದ ಡಿ.ಕೆ ಸುರೇಶ್ ಇದೀಗ ಹೊರಬಂದಿದ್ದಾರೆ. ಡಿ.ಕೆ. ಸುರೇಶ್ ಆಸ್ತಿ ಬಗ್ಗೆ ವಿಚಾರಣೆ ನಡೆಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಬಳಿ 27 ಆಸ್ತಿಗಳಿವೆ ಎಂದು ಸುರೇಶ್ ಒಪ್ಪಿಕೊಂಡಿದ್ದಾರೆ. ಐಟಿ, ಚುನಾವಣಾ ಆಯೋಗಕ್ಕೆ ಈ ಬಗ್ಗೆ ತಿಳಿಸಿದ್ದೀರಾ? ಎಂಬ ಇಡಿ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಲು ಡಿಕೆ ಸುರೇಶ್ ತಡಬಡಾಯಿಸಿದ್ದಾರೆ ಎನ್ನಲಾಗಿದೆ. ಬಳಿಕ, 27 ಆಸ್ತಿಗಳಲ್ಲಿ ಒಂದೊಂದರ ಬಗ್ಗೆಯೂ ಪ್ರಶ್ನೆ ಕೇಳಲಾಗಿದೆ. ನಾಳೆಯೂ ವಿಚಾರಣೆಗೆ ಬರುವಂತೆ ಡಿಕೆ ಸುರೇಶ್ ಅವರಿಗೆ ಸೂಚನೆ ನೀಡಲಾಗಿದೆ.

ದೆಹಲಿಯ ಲೋಕನಾಯಕ ರಸ್ತೆಯಲ್ಲಿರುವ ಇಡಿ ಕಚೇರಿಯಲ್ಲಿ ಬೆಳಗ್ಗೆಯಿಂದ ನಡೆದ ಡಿಕೆ ಸುರೇಶ್ ವಿಚಾರಣೆ ಇಂದು ಸಂಜೆ ವೇಳೆಗೆ ಅಂತ್ಯಗೊಂಡಿದೆ. ನಾಳೆಯೂ ವಿಚಾರಣೆ ಮುಂದುವರೆಯಲಿದ್ದು, ಬೆಳಗ್ಗೆ 11 ಗಂಟೆಗೆ ಮತ್ತೆ ವಿಚಾರಣೆಗೆ ಹಾಜರಾಗಲಿದ್ದಾರೆ.

ನವದೆಹಲಿಯ ಫ್ಲಾಟ್​ನಲ್ಲಿ ಸಿಕ್ಕಿದ ಹಣದ ಬಗ್ಗೆ ವಿಚಾರಣೆಗೆ ಅ. 7ರೊಳಗೆ ಹಾಜರಾಗಬೇಕೆಂದು ಇಡಿ ಅಧಿಕಾರಿಗಳು ಸಂಸದ ಡಿಕೆ ಸುರೇಶ್​ಗೆ ನೋಟಿಸ್ ನೀಡಿದ್ದರು. ಮನಿ ಲಾಂಡರಿಂಗ್ ಪ್ರಕರಣದಲ್ಲಿ 1 ತಿಂಗಳಿಂದ ಮಾಜಿ ಸಚಿವ ಡಿಕೆ ಶಿವಕುಮಾರ್ ವಿಚಾರಣೆ ನಡೆಸಲಾಗುತ್ತಿದೆ. ಇನ್ನೂ ಅ. 14ರವರೆಗೆ ಡಿಕೆಶಿ ತಿಹಾರ್​ ಜೈಲಿನಲ್ಲೇ ಇರಬೇಕಾಗಿದೆ.

Comments are closed.