ಅಂತರಾಷ್ಟ್ರೀಯ

4 ಅಧಿಕಾರಿಗಳನ್ನು ಚಾಕುವಿನಿಂದ ಇರಿದು ಕೊಂದ ಪ್ಯಾರಿಸ್​ ಪೊಲೀಸ್

Pinterest LinkedIn Tumblr


ಪ್ಯಾರಿಸ್: ಪ್ಯಾರಿಸ್​ನ ಪೊಲೀಸ್ ಹೆಡ್​ಕ್ವಾಟ್ರಸ್​ನಲ್ಲಿ ವ್ಯಕ್ತಿಯೊಬ್ಬ ನಾಲ್ವರು ಅಧಿಕಾರಿಗಳಿಗೆ ಚಾಕುವಿನಿಂದ ಇರಿದು ಹತ್ಯೆಗೈದ ಹೃದಯವಿದ್ರಾವಕ ಘಟನೆ ಇಂದು ನಡೆದಿದೆ. ಬಳಿಕ ಹತ್ಯೆಕೋರನನ್ನು ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ.

ಪ್ಯಾರಿಸ್​ನ ಐತಿಹಾಸಿಕ ಕೇಂದ್ರದಲ್ಲಿ ಮಧ್ಯಾಹ್ನದ ಊಟದ ಸಮಯದಲ್ಲಿ ಈ ದಾಳಿ ನಡೆದಿದೆ. ಸಾಮಾನ್ಯವಾಗಿ ಈ ಸ್ಥಳ ಪ್ರವಾಸಿಗರು ಮತ್ತು ಡಜನ್​ಗೂ ಹೆಚ್ಚು ಪೊಲೀಸ್​ ಜನ ಸಮೂಹದಿಂದ ತುಂಬಿರುತ್ತದೆ. ಮತ್ತು ತುರ್ತು ವಾಹನಗಳು ಸ್ಥಳದಲ್ಲಿರುತ್ತವೆ ಎಂದು ಎಎಫ್​ಪಿ ವರದಿ ಮಾಡಿದೆ.

ದಾಳಿಕೋರ ವ್ಯಕ್ತಿ ಆಡಳಿತ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಆದರೆ, ಈತನ ಈ ರಾಕ್ಷಸಿ ಕೃತ್ಯಕ್ಕೆ ಕಾರಣ ಏನು ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸ್ ಮುಖ್ಯಕಚೇರಿಯಲ್ಲಿ ದಾಳಿ ನಡೆದ ಬಳಿಕ ಎಚ್ಚೆತ್ತ ಪೊಲೀಸರು ಧ್ವನಿವರ್ಧಕದ ಮೂಲಕ ಸುತ್ತಮುತ್ತಲಿನ ಪ್ರದೇಶದ ಜನರಿಗೆ ಎಚ್ಚರಿಕೆಯ ಸಂದೇಶ ನೀಡಲಾಯಿತು. ಹಾಗೂ ಎಲ್ಲೆಡೆ ನಾಕಾಬಂಧಿಯನ್ನು ಹಾಕಿ, ಹತ್ಯೆಕೋರನನ್ನು ಗುಂಡಿಕ್ಕಿ ಹತ್ಯೆಗೈಯ್ಯುವಲ್ಲಿ ಯಶಸ್ವಿಯಾದರು.

ಪ್ಯಾರಿಸ್​ನ ಆಂತರಿಕ ಸಚಿವ ಕ್ರಿಸ್ಟೋಪಿ ಕ್ಯಾಸ್ಟನರ್​ ಅವರು ಇಂದು ಟರ್ಕಿಗೆ ಪ್ರವಾಸ ಕೈಗೊಳ್ಳಬೇಕಿತ್ತು. ಆದರೆ, ಈ ದಾಳಿ ಬಳಿಕ ಅವರು ತಮ್ಮ ಪ್ರವಾಸವನ್ನು ಮೊಟಕುಗೊಳಿಸಿದ್ದಾರೆ.

Comments are closed.