ಕರ್ನಾಟಕ

ರಾಜ್ಯದ 22 ಜಿಲ್ಲೆಯಲ್ಲಿ 2.47 ಲಕ್ಷ ಮನೆ ಸರ್ವನಾಶ: ಪರಿಹಾರ ಶೂನ್ಯ

Pinterest LinkedIn Tumblr


ರಾಜ್ಯದಲ್ಲಿ ಪ್ರವಾಹ ಬಂದು ರಾಜ್ಯ ಅಕ್ಷರಶಃ ತತ್ತರಿಸಿ ಹೋಗಿದೆ. ಪ್ರವಾಹ ಬಂದು 2 ತಿಂಗಳಾಗಿದೆ. ಉಕ್ಕಿ ಹರಿದ ಉತ್ತರದ ನದಿಗಳು ಜನ ಪ್ರಾಣದ ಜೊತೆ ಮನೆ ಮಠವನ್ನೂ ಕೊಚ್ಚಿಕೊಂಡು ಹೋಗಿದ್ದವು. ಮನೆ- ಜಮೀನು ಕಳೆದುಕೊಂಡ ಲಕ್ಷಾಂತರ ಜನರು, ಸರ್ಕಾರ ತೆರೆದ ಸಾಂತ್ವನ ಕೇಂದ್ರಗಳಲ್ಲಿ ತುತ್ತು ಅನ್ನಕ್ಕೂ ಪರದಾಡಿದ್ದರು.

ಸಾವಿನ ದವಡೆಯಲ್ಲಿ ಸಿಲುಕಿದ್ದ ಸಾವಿರಾರು ಜನರನ್ನು ಬದುಕಿಸಿದ್ದು ಬಿಟ್ಟರೆ, ರಾಜ್ಯ ಸರ್ಕಾರದಿಂದ ಯಾವ ಪರಿಹಾರ ಕಾರ್ಯವೂ ನಡೆದಿಲ್ಲ. ಸಂತ್ರಸ್ತರು ಕಣ್ಣೀರಲ್ಲೇ ಕೈತೊಳೆಯುತ್ತಿದ್ದರೂ ಅರ್ಧ ಹೊಟ್ಟೆಯಲ್ಲೇ ನೂರಾರು ಜನರನ್ನು ಸಂತ್ರಸ್ತರ ಕೇಂದ್ರ ತೊರೆಯುವಂತೆ ಅಧಿಕಾರಿಗಳು ಆದೇಶಿಸಿದ್ದರು.

ಸಂತ್ರಸ್ತರ ಕೇಂದ್ರದಲ್ಲೇ ಯಾರೋ ತಂದುಕೊಟ್ಟ ಒಣ ಮಂಡಕ್ಕಿ ತಿಂದು ಬದುಕಿದವರಿಗೂ ಲೆಕ್ಕವಿಲ್ಲ. ಈಗಲೂ, ನೂರಾರು ಕುಟುಂಬಗಳು ರಸ್ತೆಬದಿಯಲ್ಲೋ ಶಾಲಾ ಮೈದಾನಗಳಲ್ಲೋ ಟೆಂಟ್ ಹಾಕ್ಕೊಂಡು ಜೀವನ ನಡೆಸ್ತಿದ್ದಾರೆ. ಈಗಲೂ ಅನ್ನ-ಆಹಾರ ಇಲ್ಲದೆ ಜನ ಪರದಾಡ್ತಿದ್ದಾರೆ. ಇಷ್ಟೆಲ್ಲಾ ಆದರೂ ಸರ್ಕಾರಗಳು ಮಾತ್ರ ಜನರಿಗೆ ಸ್ಪಂದಿಸಿಲ್ಲ ಯಾಕೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುತ್ತಿದೆ.

ಇನ್ನು ಹಿಂದೆಂದೂ ಕಂಡು-ಕೇಳರಿಯದ ಪ್ರವಾಹಕ್ಕೆ ರಾಜ್ಯದ 22 ಜಿಲ್ಲೆಗಳು ತತ್ತರಿಸಿ ಹೋಗಿವೆ. 103 ತಾಲೂಕುಗಳಲ್ಲಿ 2.47 ಲಕ್ಷ ಮನೆಗಳು ಸರ್ವನಾಶವಾಗಿದ್ದು,6,664 ಶಾಲೆಗಳು, 3,422 ಅಂಗನವಾಡಿ ಕೇಂದ್ರಗಳಿಗೂ ಹಾನಿಯಾಗಿದೆ. 302 ಆಸ್ಪತ್ರೆಗಳು, ಲೆಕ್ಕವಿಲ್ಲದಷ್ಟು ಸೇತುವೆಗಳಿಗೂ ಹಾನಿಯಾಗಿದ್ದು, ಇನ್ನೂ ಹಲವೆಡೆ ರಸ್ತೆ ಸಂಪರ್ಕವೇ ಸರಿಯಾಗಿಲ್ಲ. ಸರ್ಕಾರ ಮಾಡಿರೋ ನಷ್ಟದ ಅಂದಾಜೇ 35 ಸಾವಿರ ಕೋಟಿಯಾಗಿದ್ದು, ನೆರೆ ಬಂದು 2 ತಿಂಗಳಾದ್ರೂ ಕೇಂದ್ರದಿಂದ ಬಿಡಿಗಾಸಿನ ಪರಿಹಾರವೇ ಸಿಕ್ಕಿಲ್ಲ.

Comments are closed.