ಕರ್ನಾಟಕ

ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ: ಯಡಿಯೂರಪ್ಪ ವಿರುದ್ಧ ನಳೀನ್ ಕುಮಾರ್ ಕಟೀಲ್ ಮುನಿಸು..?!

Pinterest LinkedIn Tumblr


ಬೆಂಗಳೂರು: ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದ್ದು, ನಳೀನ್ ಕುಮಾರ್ ಕಟೀಲ್ ಮತ್ತು ಯಡಿಯೂರಪ್ಪ ನಡುವಿನ ಮುನಿಸು ಹೊರಬಿದ್ದಿದೆ.

ನಳೀನ್ ಕುಮಾರ್ ಕಟೀಲ್‌ಗೆ ಪಕ್ಷದಲ್ಲಿ ಮಾನ್ಯತೆ ಇಲ್ಲವಾಗಿದ್ದು, ಸಿಎಂ ಯಡಿಯೂರಪ್ಪ ನಡುವಳಿಕೆ ಬಗ್ಗೆ ನಳೀನ್ ಕುಮಾರ್ ಬೇಸರ ಹೊರಹಾಕಿದ್ದಾರೆ. ಎಲ್ಲವನ್ನೂ ಸಿಎಂ ಯಡಿಯೂರಪ್ಪರೇ ಮಾಡ್ತಾರೆ. ನನ್ನನ್ನು ಏನ್ ಕೇಳೋದು ಎನ್ನುವ ಭಾವನೆ ಸಿಎಂಗೆ ಬಂದಿದೆ ಎಂದು ಕಟೀಲ್ ಮುನಿಸಿಕೊಂಡಿದ್ದಾರೆನ್ನಲಾಗಿದೆ.

ಅಸಮಾಧಾನಗೊಂಡವರನ್ನು ಸಮಾಧಾನ ಮಾಡೋಕ್ಕೆ ಮೇಯರ್ ಚುನಾವಣಾ ಆಯ್ಕೆ ಸಮಿತಿಯನ್ನು ಸಿಎಂ ರಚಿಸಿದ್ದಾರೆ. ಹಾಗಾದ್ರೆ ನನ್ನ ಕೆಲಸವೇನು..? ನನ್ನ ಅವಶ್ಯಕತೆ ಏನಿದೆ ಎಂದು ನಳೀನ್ ಕುಮಾರ್‌ಗೆ ಬೇಸವಾಗಿದೆ. ಈ ಕಾರಣವನ್ನು ತಿಳಿದ ಆಪ್ತರು ನಳೀನ್‌ಗೆ ಕೆಲ ಸಲಹೆ ನೀಡಿದ್ದಾರೆ. ಸಿಎಂ ಏನಾದ್ರೂ ಮಾಡಲಿ. ನೀವೇ ಮುಂದಾಗಿ ಗೊಂದಲ ಬಗೆಹರಿಸಿ. ಅಸಮಾಧಾನಗೊಂಡವರನ್ನು ಕರೆದು ಸಭೆ ಮಾಡಿ ಎಂದು ಕೆಲ ಆಪ್ತರು ಸಲಹೆ ನೀಡಿದ್ದಾರೆ.

ಅಲ್ಲದೇ, ನಳೀನ್ ಕುಮಾರ್ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರೂ, ಕೆಲ ತೀರ್ಮಾನ ತೆಗೆದುಕೊಳ್ಳಲು ಸಿಎಂ ಯಡಿಯೂರಪ್ಪ ಅರ್ಜೆಂಟ್ ಮಾಡ್ತಿದ್ದಾರೆ. ಪಕ್ಷ ಮತ್ತು ಸರ್ಕಾರ ಎರಡನ್ನೂ ಹಿಡಿತದಲ್ಲಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆಂದು ನಳೀನ್‌ಗೆ ಅಸಮಾಧಾನವಿದೆ ಎನ್ನಲಾಗಿದೆ. ಇನ್ನು ಈ ವಿಚಾರ ಹೈಕಮಾಂಡ್ ಹಂತಕ್ಕೆ ಹೋಗುವ ಸಾಧ್ಯತೆ ಇದೆ.

Comments are closed.