ಕರ್ನಾಟಕ

ಮೊಬೈಲ್‌ ಆ್ಯಪ್‌ ಮೂಲಕ ಮತದಾರರ ಗುರುತುಚೀಟಿ ತಿದ್ದುಪಡಿ ಮಾಡಿ

Pinterest LinkedIn Tumblr


ಬೆಂಗಳೂರು: ಮತದಾರರ ಗುರುತುಚೀಟಿಯಲ್ಲಿ ಭಾವಚಿತ್ರವನ್ನು ಬದಲಾಯಿಸಲು, ಮತದಾರರ ಪಟ್ಟಿಯಲ್ಲಿ ತಿದ್ದುಪಡಿಗಳಿದ್ದರೆ ಸರಿಪಡಿಸಿಕೊಳ್ಳಲು ಚುನಾವಣಾ ಆಯೋಗ ಮತದಾರರ ಸಹಾಯವಾಣಿ ಮೊಬೈಲ್‌ ಆ್ಯಪ್‌ ( ವೋಟರ್‌ ಹೆಲ್ಫ್ಲೈನ್‌ ಆ್ಯಪ್‌) ಸಿದ್ಧಪಡಿಸಿದೆ.

ಅ. 15ರ ವರೆಗೆ ಈ ಅವಕಾಶವನು ° ಆಯೋಗ ಕಲ್ಪಿಸಿದೆ. ಮತದಾರರ ಪಟ್ಟಿಯಲ್ಲಿ ಜನ್ಮ ದಿನಾಂಕ, ವಿಳಾಸ ತಪ್ಪಾಗಿದ್ದರೆ, ವಿಳಾಸ ಬದಲಾವಣೆಯಾಗಿದ್ದರೆ, ಗುರುತು ಚೀಟಯಲ್ಲಿ ತನ್ನ ಹಿಂದಿನ ಭಾವಚಿತ್ರದ ಬದಲು ಹೊಸ ಭಾವಚಿತ್ರವನ್ನು ಹಾಕುವುದು ಮುಂತಾದ ಕಾರ್ಯಗಳನ್ನು ಈ ಆ್ಯಪ್‌ ಮೂಲಕ ಮಾಡಬಹುದಾಗಿದೆ.

ಆ್ಯಂಡ್ರಾಯ್ಡ ಮೊಬೈಲ್‌ನಲ್ಲಿ ಪ್ಲೇಸ್ಟೋರ್‌ಗೆ ಹೋಗಿ ವೋಟರ್‌ ಹೆಲ್ಪ್#ಲೈನ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಆದ ಬಳಿಕ ಅದರಲ್ಲಿ ಬರುವ ಕೆಲವು ಸೂಚನೆಗಳನ್ನು ಪಾಲಿಸಬೇಕು. ಆ್ಯಪ್‌ನಲ್ಲಿರುವ ಇವಿಪಿ ವಿಭಾಗವನ್ನು ಒತ್ತಿ ಮೊಬೈಲ್‌ ಸಂಖ್ಯೆಯನ್ನು ನಮೂದಿಸಬೇಕು. ಇದಾದ ಬಳಿಕ ಮೊಬೈಲ್‌ ಒಟಿಪಿ ಸಂದೇಶ ಬರುತ್ತದೆ. ಅದನ್ನು ನಮೂದಿಸಿದಾಗ ವೋಟರ್‌ ಐಡಿ ಸಂಖ್ಯೆಗೆ ಮೊಬೈಲ್‌ ಸಂಖ್ಯೆಯನ್ನು ಜೋಡಣೆ ಮಾಡುವ ಸೂಚನೆ ಬರುತ್ತದೆ. ಒಪ್ಪಿಗೆ ಸೂಚಿಸಿದ ಬಳಿಕ ಅಗತ್ಯ ವಿವರಗಳನ್ನು ನಮೂದಿಸಿ ಮತದಾರರ ಪಟ್ಟಿಯಲ್ಲಿ ಮತದಾರ ತನ್ನ ಹೆಸರನ್ನು ಹುಡುಕಿದರೆ ಭಾವಚಿತ್ರ ಸಹಿತ ಮಾಹಿತಿ ಲಭ್ಯವಾಗಲಿದೆ.

ಭಾವಚಿತ್ರ, ಹೆಸರು, ವಯಸ್ಸು, ಲಿಂಗ, ತಂದೆ, ಪತಿಯ ಹೆಸರು ವಿಳಾಸದ ಮಾಹಿತಿ ಸಿಗಲಿದ್ದು ಎಲ್ಲ ವಿವರದ ಮುಂದೆ ಪೆನ್ಸಿಲ್‌ ಗುರುತಿನ ಐಕಾನ್‌ ಇರುತ್ತದೆ. ಬದಲಾವಣೆ ಮಾಡಲು ಇರುವುದನ್ನು ಆಯ್ಕೆ ಮಾಡಿಕೊಂಡು ಪೂರಕ ದಾಖಲೆಗಳನ್ನು ಅಪ್‌ಲೋಡ್‌ ಮಾಡಬೇಕು. ಇದಾದ ಕೂಡಲೇ ಗುರುತು ಚೀಟಿಯಲ್ಲಿ ಮತದಾರರ ಬಯಸುವ ಬದಲಾವಣೆಗಳು ಆಗಲಿವೆ.

ಮತದಾರರ ಪಟ್ಟಿಯಲ್ಲಿ ಕುಟುಂಬದವರ ಹೆಸರು ಬೇರೆ ಬೇರೆ ಮತಗಟ್ಟೆಯಲ್ಲಿ ದಾಖಲಾಗಿದ್ದರೆ ಅದನ್ನು ಕೂಡ ಸರಿಪಡಿಸಲು ಅವಕಾಶವಿದೆ. ಮೊಬೈಲ್‌ ಆ್ಯಪ್‌ನಲ್ಲಿ ಫ್ಯಾಮಿಲಿ ಗ್ರೂಪಿಂಗ್‌ಗೆಗೆ ಅವಕಾಶ ನೀಡಲಾಗಿದ್ದು ಬೇರೆ ಬೇರೆ ಮತಗಟ್ಟೆಗಳಲ್ಲಿರುವ ಕುಟುಂಬದ ಸದಸ್ಯರನ್ನು ಒಂದೇ ಮತಗಟ್ಟೆಯಲ್ಲಿ ಸೇರ್ಪಡೆ ಮಾಡಬಹುದು.

ಆ್ಯಪ್‌ ಹಾಗೂ ಅದರ ಬಳಕೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಜಿಲ್ಲಾ ಮತದಾರರ ಸಹಾಯವಾಣಿ ಕೇಂದ್ರ ಅಥವಾ ತಹಶೀಲ್ದಾರ್‌ ಕಚೇರಿಗಳನ್ನು ಸಂಪರ್ಕಿಸಬಹುದು. ಮತದಾರರ ಸಹಾಯವಾಣಿ 1950ಕ್ಕೆ ಕರೆ ಮಾಡಿಯೂ ಪಡೆದುಕೊಳ್ಳಬಹುದು.

Comments are closed.