ಕರ್ನಾಟಕ

ರೆಬೆಲ್ ಸ್ಟಾರ್ ಅಂಬರೀಶ್ ಸಹೋದರ ಆನಂದ್ ಕುಮಾರ್ ನಿಧನ

Pinterest LinkedIn Tumblr


ಮೈಸೂರು: ರೆಬೆಲ್ ಸ್ಟಾರ್ ಅಂಬರೀಶ್ ಅವರ ಸಹೋದರ ಎಂ ಎಚ್ ಆನಂದ್ ಕುಮಾರ್ ಅವರು ಶನಿವಾರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಆನಂದ್ ಕುಮಾರ್ ಅವರು ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು.

ಆನಂದ್ ಕುಮಾರ್ ಅವರು ಪತ್ನಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ. ಓರ್ವ ಮಗ ಅಮೇರಿಕಾದಲ್ಲಿ ನೆಲೆಸಿರುವುದರಿಂದ ಅಂತ್ಯಕ್ರಿಯೆ ಸೋಮವಾರ ಮೈಸೂರಿನಲ್ಲಿ ನಡೆಯಲಿದೆ.

ಅಂಬರೀಶ್ ಅವರ ಮತ್ತೊಬ್ಬ ಸಹೋದರ ಡಾ. ಹರೀಶ್ ಅವರು 2017ರ ನವೆಂಬರ್ 24ರಂದು ಮೃತರಾಗಿದ್ದರು. 2018ರಲ್ಲಿ ಅದೇ ದಿನಾಂಕದಂದು ಅಂಬರೀಶ್ ಅವರು ನಿಧನರಾಗಿದ್ದರು.

Comments are closed.