ಕರ್ನಾಟಕ

ಮೊಬೈಲ್ ಸಂಖ್ಯೆ ಸೇವ್ ಆಗದೇ ಇದ್ದರೂ ವಾಟ್ಸ್ಅಪ್ ಮೆಸೇಜ್ ಮಾಡುವುದು ಹೇಗೆ?

Pinterest LinkedIn Tumblr


ಬೆಂಗಳೂರು: ವಾಟ್ಸ್ಅಪ್ ಜಗತ್ತಿನ ಅತೀ ದೊಡ್ಡ ಮೆಸೆಜಿಂಗ್ ಆ್ಯಪ್ ಆಗಿದೆ. ಇಂದು ಜಗತ್ತಿನಾದ್ಯಂತ ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ಈ ಸಂಸ್ಥೆ ಆಗಾಧವಾಗಿ ಇಂದು ಬೆಳೆದಿದೆ. ನಮ್ಮ ದೈನಂದಿನ ಬಳಕೆಯಲ್ಲಿ ಅತೀ ಕಡಿಮೆ ಬಳಕೆ ಎಂದರೆ ಕನಿಷ್ಟ 5ರಿಂದ 10 ಮಂದಿಗೆ ನಾವು ಸಂದೇಶ ಕಳುಹಿಸುತ್ತೇವೆ. ದಿನದಿಂದ ದಿನಕ್ಕೆ ಇದರ ಬಳಕೆದಾರರೂ ಹೆಚ್ಚಾಗುತ್ತಿದ್ದಾರೆ.

ಈ ಆ್ಯಪ್‌ನಲ್ಲಿ ನಾವು ಒಂದು ಹೊಸ ಮೊಬೈಲ್ ನಂಬರ್ ಅಥವಾ ನಮ್ಮಲ್ಲಿ ಸೇವ್ ಮಾಡಿಕೊಳ್ಳದ ಮೊಬೈಲ್ ಸಂಖ್ಯೆಗೆ ಸಂದೇಶ ಕಳುಹಿಸಲು ಬಹಳಷ್ಟು ಸಂದರ್ಭ ಆಗುವುದಿಲ್ಲ. ಈ ಆ್ಯಪ್ನಲ್ಲಿ ನಾವು ಸಂದೇಶ ಕಳುಹಿಸಬೇಕಾದರೆ ನಮ್ಮ ಕಾಂಟ್ಯಾಕ್ಟ್ನಲ್ಲಿ ಅವರ ಹೆಸರು ಇದ್ದು, ವಾಟ್ಸ್ಅಪ್ನಲ್ಲಿ ಅಪ್ ಟು ಡೇಟ್ ಆಗಿದ್ದರೆ ಮಾತ್ರ ಕಳುಹಿಸಬಹುದಾಗಿತ್ತು.

ಆದರೆ ಈಗ ನಮ್ಮಲ್ಲಿ ಮೊಬೈಲ್ ಸಂಖ್ಯೆ ಸೇವ್ ಆಗದೇ ಇದ್ದರೂ ಅವರಿಗೆ ಮೆಸೇಜ್ ಕಳುಹಿಸಬಹುದಾಗಿದೆ. ಯಾರದೋ ಒಂದು ಸಂಖ್ಯೆ ನೀವು ಒಮ್ಮೆ ಮಾತ್ರ ಮೆಸೇಜ್ ಮಾಡುವುದಾದರೆ ಅಥವಾ ಆ ಸಂಖ್ಯೆಯನ್ನು ಸೇವ್ ಮಾಡಿಕೊಳ್ಳುವ ಅನಿವಾರ್ಯತೆ ಇಲ್ಲದೇ ಇದ್ದರೆ ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ.

ಹಂತ 1: ನಿಮ್ಮ ಸ್ಮಾರ್ಟ್ ಫೋನ್ ನ ಬ್ರೌಸರ್ ಒಪನ್ ಮಾಡಿ, ‘‘https://api.WhatsApp.com/send?phone=number’ ಎಂದು ಟೈಪ್ ಮಾಡಿ.‘

ಹಂತ 2: ನೀವು ಮೇಲೆ ಟೈಪ್ ಮಾಡಿದ ಲಿಂಕ್ ಅಲ್ಲಿ “ number’’ ಜಾಗದಲ್ಲಿ ನೀವು ಮೆಸೇಜ್ ಮಾಡಲಿಚ್ಚಿಸುವವರ ಸಂಖ್ಯೆಯನ್ನು +91 (ರಾಷ್ಟ್ರದ ಕೋಡ್ ಬಳಸಿ)ನಮೂದಿಸಿ.

ಹಂತ 3: ಬಳಿಕ ಬ್ರೌಸ್ ಮಾಡಲು ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ. ಈಗ ಹೊಸ ಚಾಟ್ ಬಾಕ್ಸ್ ತೆರೆದುಕೊಳ್ಳುತ್ತದೆ.

ಹಂತ 4: ಆಗ ನೇರವಾಗಿ ಅವರಿಗೆ ಮೆಸೇಜ್ ಕಳುಹಿಸುವಲ್ಲಿಗೆ ಕೊಂಡೊಯ್ಯತ್ತದೆ. (ನಿಮ್ಮ ಮೊಬೈಲ್‌ ನಲ್ಲಿ ವಾಟ್ಸ್ಅಪ್ ಇದ್ದರೆ ಆ ಖಾತೆಯಿಂದ ಮೆಸೇಜ್ ಕಳುಹಿಸಬಹುದಾಗಿದೆ.)

Comments are closed.