ಕರ್ನಾಟಕ

ಕಂಠಪೂರ್ತಿ ಕುಡಿದು…ತಿಂದು… ಬಿಲ್​ ಕೇಳಿದ ಕ್ಯಾಷಿಯರ್​ ಹತ್ಯೆ!

Pinterest LinkedIn Tumblr


ಬೆಂಗಳೂರು: ನಗರದ ಇಟ್ಟಮಡುವಿನಲ್ಲಿರುವ ಬಾರ್​ವೊಂದರ ಕ್ಯಾಷಿಯರ್​ನನ್ನು ದುಷ್ಕರ್ಮಿಗಳು ಬುಧವಾರ ತಡರಾತ್ರಿ ರಸ್ತೆ ತುಂಬಾ ಅಟ್ಟಾಡಿಸಿ ಚೂರಿಯಿಂದ ಇರಿದು ಕೊಂದಿದ್ದಾರೆ.

ಕುಣಿಗಲ್​ನ ಮನವಳ್ಳಿ ಗ್ರಾಮದ ವೆಂಕಟೇಶ್​ (35) ಹತ್ಯೆಯಾದವ. ಇಟ್ಟಮಡುವಿನ ಮಂಜುನಾಥ್​ ಬಾರ್​ಗೆ ಬಂದಿದ್ದ ದುಷ್ಕರ್ಮಿಗಳು ಕಂಠಮಟ್ಟ ಕುಡಿದು, ಹೊಟ್ಟೆ ತುಂಬಾ ತಿಂದು ಬಿಲ್​ ಕೊಡದೆ ಹೊರನಡೆದಿದ್ದರು. ತಕ್ಷಣವೇ ಅವರನ್ನು ತಡೆದ ವೆಂಕಟೇಶ್​ ಬಿಲ್​​ ಕೊಡುವಂತೆ ಒತ್ತಾಯಿಸಿದ್ದ. ಇದಕ್ಕೆ ದುಷ್ಕರ್ಮಿಗಳು ಆಕ್ಷೇಪಿಸಿದ್ದಲ್ಲದೆ, ಆತನೊಂದಿಗೆ ಜಗಳ ತೆಗೆದಿದ್ದರು.

ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸುವ ಹಂತ ತಲುಪಿತ್ತು. ರಸ್ತೆ ತುಂಬಾ ವೆಂಕಟೇಶನನ್ನು ಅಟ್ಟಾಡಿಸಿದ ದುಷ್ಕರ್ಮಿಗಳು ಕೆಳಬಿದ್ದವನನ್ನು ಮನಬಂದಂತೆ ಚೂರಿಯಿಂದ ಇರಿದು ಕೊಂದು ಪರಾರಿಯಾಗಿದ್ದಾರೆ. ಚೆನ್ನಮ್ಮಕೆರೆ ಅಚ್ಚುಕಟ್ಟು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

Comments are closed.