
ಗೋಕುಲಾಷ್ಟಮಿಯಂದು ‘ಗೋಕುಲ ಪಾಲಕನೇ’ ಎಂದು ಕುಣಿಯುತ್ತಾ ಯುವಜನತೆಯೆ ಎದೆಯಲ್ಲಿ ಕಚಕುಳಿ ಇಟ್ಟ ಕೃಷ್ಣ ವೇಷಧಾರಿ ವೈಷ್ಣವಿ ಅದೆಷ್ಟು ವೈರಲ್ ಆಗ್ಬಿಟ್ಲು ಗೊತ್ತಲ್ವಾ! ಯಾರ ಡಿಪಿಯಲ್ಲಿ ನೋಡಿದ್ರೂ ಅವಳದ್ದೇ ವಿಡಿಯೋ, ಅವಳದ್ದೇ ಫೋಟೋ.
ಕೇರಳದ ಗುರುವಾಯೂರು ದೇವಸ್ಥಾನಲ್ಲಿ ಕೃಷ್ಣ ವೇಷ ಧರಿಸಿ ಕುಣಿಯುತ್ತಾ ಮೊಸರಿನ ಕುಡಿಕೆ ಒಡೆದ ವೈಷ್ಣವಿಯ ಹೆಜ್ಜೆಗಳು, ಎಕ್ಸ್ಪ್ರೆಷನ್ಗಳಿಗೆ ಮಾರು ಹೋಗದವರೇ ಇಲ್ಲ. ಆನಂತ್ರ ಅದೇ ಹಾಡಿಗೆ, ಅವಳದ್ದೇ ಅಭಿನಯ ಮಾಡುತ್ತಾ ಬಂದ ಟಿಕ್ ಟಾಕ್ ಗಳೆಷ್ಟೋ!
ಚಿಕ್ಕಮಗಳೂರಿನ ಯುವಕರಿಗೂ ಈ ಹಾಡು ನೋಡಿ ಅದೆಷ್ಟು ನಶೆ ಏರಿತು ಅಂದ್ರೆ? ಚೌತಿ ಬಂದಾಗ, ಅವರೂ ಒಂದು ಬಿಯರ್ ಬಾಟಲ್ ಹಿಡ್ಕೊಂಡು ಟಿಕ್ ಟಾಕ್ ಮಾಡಿದ್ರು. ಮೊಸರಿನ ಕುಡಿಕೆಯ ಬದಲಿಗೆ ಬಿಯರ್ ಬಾಟಲ್ ಒಡೆದಂತೆ ಅಭಿನಯಿಸಿದ ಟಿಕ್ ಟಾಕ್ ಕೂಡಾ ವೈರಲ್ ಆಗಿತ್ತು. ಇದರಿಂದ ಕೋಪಗೊಂಡ, ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಬಜರಂಗದಳದ ಯುವಕರು ಟಿಕ್ ಟಾಕ್ ವೀರರ ವಿಳಾಸ ಪತ್ತೆ ಮಾಡಿದ್ದಾರೆ.
ಮೂಲತ: ದಕ್ಷಿಣ ಕ್ನನಡ ಜಿಲ್ಲೆಯ ಮೂಡುಬಿದಿರೆಯ ಹುಡುಗನೊಬ್ಬ ತಂಡದಲ್ಲಿದ್ದು, ಅವನಿಗೆ ಎಚ್ಚರಿಕೆ ನೀಡಿ, ಠಾಣೆಗೆ ದೂರು ನೀಡಲು ಮುಂದಾದ್ರು. ಇದರಿಂದ ಕಸಿವಿಸಿಕೊಂಡ ಈ ತರುಣರು ಕ್ಷಮೆ ಕೇಳುವ ವೀಡಿಯೋ ಮಾಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಕೂಡಾ ವೈರಲ್ ಆಗ್ತಿದೆ.
Comments are closed.