
ಬೆಂಗಳೂರು: ದುಬಾರಿ ದಂಡದಿಂದ ಕಂಗಾಲಾಗಿರುವ ವಾಹನ ಸವಾರರಿಗೆ ನಗರ ಸಂಚಾರಿ ಪೊಲೀಸರು ಶುಲ್ಕದಿಂದ ತಪ್ಪಿಸಿಕೊಳ್ಳಲು ಹೊಸ ಉಪಾಯ ಸೂಚಿಸಿದ್ದಾರೆ.
ಹೊಸ ನಿಯಮ ಜಾರಿಯಾದ ನಂತರ ಕೆಲವು ವಾಹನ ಸವಾರರಲ್ಲಿ ಗೊಂದಲಗಳು ಉಂಟಾಗಿದ್ದು, ಇದಕ್ಕೆ ಸ್ವತಃ ನಗರ ಆಯುಕ್ತ ಭಾಸ್ಕರ್ ರಾವ್ ಅವರು ಕೇಂದ್ರ ರಸ್ತೆ ಸಾರಿಗೆ ಸುತ್ತೋಲೆಯನ್ನು ಟ್ವೀಟ್ ಮಾಡಿದ್ದು ಅಲ್ಲಿರುವ ಪ್ರಮುಖ ಅಂಶಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ವಾಹನದ ಮೂಲ ದಾಖಲೆಗಳನ್ನು ಯಾವಾಗಲೂ ಇಟ್ಟುಕೊಂಡಿರಬೇಕು ಎಂದೇನಿಲ್ಲ, ಆದರೆ ಅವುಗಳ ಸಾಫ್ಟ್ ಕಾಪಿಯನ್ನು ತೋರಿಸಿದರೂ ಸಾಕು.
ಈ ಹಿಂದೆ ವಾಹನ ಚಾಲನೆ ವೇಳೆ ಡಿಎಲ್, ಆರ್‌ಸಿ ಪ್ರಮಾಣ ಪತ್ರಗಳ ಮೂಲ ಪ್ರತಿಯನ್ನೇ ಹೊಂದಿರಬೇಕೆಂಬ ನಿಯಮವಿತ್ತು. ಆದರೆ ಕೇಂದ್ರ ಸರ್ಕಾರ ಡಿಜಿಟಲ್ ಇಂಡಿಯಾ ಯೋಜನೆಯಡಿ ಪರಿಚಯಿಸಿರುವ ಡಿಜಿ ಲಾಕರ್ ಆ್ಯಪ್‌ನಲ್ಲಿಯೇ ನಿಮ್ಮ ವಾಹನಗಳ ದಾಖಲೆಗಳನ್ನು ಹೊಂದಿರಲು ಅವಕಾಶ ನೀಡಲಾಗಿದ್ದು, ಈ ಹಿನ್ನಲೆಯಲ್ಲಿ ವಾಹನ ಸವಾರರು ಡಿಜಿ ಲಾಕರ್ ಹೊಂದಿದ್ದರೆ ದಾಖಲೆಗಳು ಮೂಲ ಪ್ರತಿಯನ್ನೇ ಹೊಂದಿರಬೇಕಿಲ್ಲ.
ಅಲ್ಲದೆ ಮೋಟಾರ್ ವಾಹನ ಕಾಯ್ದೆ 1988ರ ಪ್ರಕಾರ ವಾಹನ ತಪಾಸಣೆ ವೇಳೆ ಡಿಜಿ ಲಾಕರ್ ಅಥವಾ ಎಮ್‌ಪರಿವಾಹನ್ ಆ್ಯಪ್ ಮೂಲಕವೂ ವಾಹನ ದಾಖಲೆಗಳನ್ನು ಮಾನ್ಯತೆ ಮಾಡಬಹುದು ಎಂದು ಮಾಹಿಯ ಸಾರಾಂಶದಲ್ಲಿ ಸ್ಪಷ್ಟಪಡಿಸಿದ್ದಾರೆ.
Comments are closed.