ಕರ್ನಾಟಕ

ಶಾಸಕ ಚರಂತಿಮಠರ ಕಾಲಿಗೆ ಬಿದ್ದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ

Pinterest LinkedIn Tumblr


ಬಾಗಲಕೋಟೆ : ರಾಜ್ಯದ ಲೋಕೋಪಯೋಗಿ, ಸಮಾಜಕಲ್ಯಾಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು, ಬಾಗಲಕೋಟೆ ಶಾಸಕ ಡಾ.ವೀರಣ್ಣ ಚರಂತಿಮಠ ಅವರ ಕಾಲಿಗೆ ಬಿದ್ದು, ನಿಮ್ಮ ಆಶೀರ್ವಾದ ಇರಲಿ ಎಂದು ಕೇಳಿಕೊಂಡ ಪ್ರಸಂಗ ಶನಿವಾರ ಜಿಲ್ಲಾಡಳಿತ ಭವನದಲ್ಲಿ ನಡೆಯಿತು.

ಖಾತೆ ಹಂಚಿಕೆ ಹಾಗೂ ಉಪ ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಪ್ರವಾಹ ಪರಿಸ್ಥಿತಿ ನಿರ್ವಹಣೆ ಕುರಿತ ಸಭೆ ನಡೆಸಲು ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ್ದ ಕಾರಜೋಳ ಅವರನ್ನು ಶಾಸಕ ಡಾಣಚರಂತಿಮಠ ಹೂಗುಚ್ಛ ನೀಡಿ ಸ್ವಾಗತಿಸಿದರು. ಈ ವೇಳೆ, ಡಿಸಿಎಂ ಕಾರಜೋಳರು ತಮ್ಮ ಕಾಲಲ್ಲಿದ್ದ ಚಪ್ಪಲಿ ಕಳೆದು, ಚರಂತಿಮಠರ ಕಾಲಿಗೆ ಬಿದ್ದರು. ಇದು ಡಿಸಿ ಆಫೀಸ್ರ. ಬ್ಯಾಡ್ರಿ ಅಂದ್ರು. ನೀವು ಸ್ವಾಮಿಗಳು, ನಿಮ್ಮ ಆಶೀರ್ವಾದ ನಮಗೆ ಇರಬೇಕು ಎಂದು ನಗುತ್ತಲೇ ಕಾಲಿಗೆರಗಿದರು.

೨ನೇ ಬಾರಿಯೂ ಪ್ರತಿಭಟನೆ ಸ್ವಾಗತ :
ಬಿಜೆಪಿ ಸರ್ಕಾರ ಅಽಕಾರಕ್ಕೆ ಬಂದ ಬಳಿಕ ಖಾತೆರಹಿತ ಸಚಿವರಾಗಿದ್ದ ಕಾರಜೋಳರು, ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ್ದಾಗ ರೈತರ ಪ್ರತಿಭಟನೆಯೇ ಸ್ವಾಗತಿಸಿತ್ತು. ಶನಿವಾರ ಕೂಡ ಕಾರಜೋಳರು ಡಿಸಿ ಕಚೇರಿಗೆ ಉಪ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಬಂದಾಗಲೂ ಜಿಲ್ಲೆಯ ರೈತರು ಹಾಗೂ ಕರವೇ ಕಾರ್ಯಕರ್ತರು ಪ್ರತ್ಯೇಕ ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆಗಳೇ ಸ್ವಾಗತ ನೀಡಿದವು.

Comments are closed.