
ಇಂಪಾಲ್ : ಕೆಲವರಿಗೆ ಪರಿಸರದ ಮೇಲೆ ಅತಿಯಾದ ಆಸಕ್ತಿ ಹಾಗೂ ಪ್ರೀತಿ. ನಮ್ಮತನಕ್ಕಾಗಿ ಪರಿಸರದ ವಿನಾಶವನ್ನು ಮಾಡುತ್ತಿರುವ ಇಂದಿನ ಕಾಲದಲ್ಲಿ ಗಿಡ ಮರಗಳ ಸಂರಕ್ಷಣೆಯನ್ನು ಮಾಡುವ ಅಪರೂಪದ ಪರಿಸರ ಪ್ರೇಮಿಗಳು ಇಂದಿಗೂ ಇದ್ದಾರೆ ಅನ್ನುವುದ್ದಕ್ಕೆ ಇಂಪಾಲ್ ನ ಮೊಯಿರಾಂಗ್ಥೆಮ್ ಲೋಯಿಯಾ ಅವರೇ ಸಾಕ್ಷಿ.
ಇಂಪಾಲ್ ನ ಉರಿಪೋಕ್ ಖೈಡೆಮ್ ಲೈಕೈ ಪ್ರದೇಶದ ಲೋಯಿಯಾ ತನ್ನ ಕೈಯಲ್ಲಿದ್ದ ಕೆಲಸವನ್ನು ಬಿಟ್ಟು, 300 ಎಕರೆಯ ಜಾಗದಲ್ಲಿ ಗಿಡಗಳನ್ನು ನೆಡುವ ಕಾಯಕವನ್ನು ಕಳೆದ 18 ವರ್ಷಗಳಿಂದ ಮಾಡುತ್ತಿದ್ದಾರೆ. ಮಣಿಪುರದ ಲಂಗೋಲ್ ಬೆಟ್ಟ-ಶ್ರೇಣಿಯಲ್ಲಿ ಇವರು ಬೆಳೆದ ಗಿಡಗಳು ಇಂದು ಬೃಹತ್ ಕಾಡಾಗಿ ಬೆಳೆದಿದೆ. ಈಗ ಲೋಯಿಯಾ ಬೆಳೆಸಿದ ಕಾಡನ್ನು ಪುನ್‌ಶಿಲೋಕ್ ಅರಣ್ಯ ಎಂದು ಗುರುತಿಸಲಾಗುತ್ತದೆ. ಈ ಅರಣ್ಯದಲ್ಲಿ ಸುಮಾರು 250ಕ್ಕೂ ಹೆಚ್ಚು ಜಾತಿಯ ಗಿಡ ಮರಗಳಿದ್ದು, 25 ಕ್ಕೂ ಹೆಚ್ಚು ಬಗೆಯ ಬಿದಿರಿನ ಮರಗಳು ಬೆಳೆದು ನಿಂತಿವೆ. ತಾನು ಬೆಳೆಸಿದ ಗಿಡ ಮರಗಳ ಸೌಂದರ್ಯವನ್ನು ಹೆಚ್ಚಿಸಲು ಪ್ರಾಣಿ- ಪಕ್ಷಿಗಳ ಪ್ರಭೇದ ಹಾಗೂ ವಿವಿಧ ಹಾವುಗಳು ಬರುತ್ತವೆ ಎನ್ನುತ್ತಾರೆ ಲೋಯಿಯಾ.
ಲೋಯಿಯಾ ನೆಟ್ಟು ಬೆಳೆಸಿದ ಗಿಡಮರಗಳನ್ನು ಈವರೆಗೆ ಕಾಪಾಡಿಕೊಂಡು ಬರುವುದು ಸುಲಭವಾಗಿಲ್ಲ. ಹಲವು ಬಾರಿ ಮರಗಳ್ಳರು ಹಾಗೂ ಬೇಟೆಗಾರರು ನುಸುಳಿಕೊಂಡು ಅಕ್ರಮವಾಗಿ ಮರ ಕಟಾವು ಮಾಡಲು ಬಂದಾಗ ಅವೆಲ್ಲವನ್ನೂ ಎದುರಿಸಿ ಲೋಯಿಯಾ ತನ್ನ ಪ್ರೀತಿಯ ಗಿಡ-ಮರಗಳನ್ನು ಬೆಳೆಸುತ್ತಿದ್ದರಂತೆ ಲೋಯಿಯಾ. ಪರಿಸರ ಸಂರಕ್ಷಣೆಯ ಬಗ್ಗೆ ಜನರಿಗೆ ಅರಿವು ಮೂಡಿಸುವ ಪ್ರಯತನ್ನವನ್ನೂ ಲೋಯಿಯಾ ಮಾಡುತ್ತಿದ್ದಾರೆ.ಇವರ ಈ ಪರಿಸೆ ಪ್ರೇಮಕ್ಕೆ ಈಗ ಎಲ್ಲೆಡೆಯೂ ಶ್ಲಾಘನೆಯ ಮಾತುಗಳು ಕೇಳಿ ಬರುತ್ತಿದೆ.
Comments are closed.