ಕರ್ನಾಟಕ

ಅಸಮಾಧಾನಗೊಂಡಿರುವ ರಾಮದಾಸ್​ರನ್ನು ನಾನು ಮನವೊಲಿಸುತ್ತೇನೆ: ವಿ. ಸೋಮಣ್ಣ

Pinterest LinkedIn Tumblr


ಮೈಸೂರು: ಶಾಸಕ ರಾಮದಾಸ್​ಗೆ ಅಸಮಾಧಾನ ಇರುವುದು ನಿಜ ಗಜಪಡೆ ಸ್ವಾಗತಕ್ಕೆ ಅವರನ್ನು ಆಹ್ವಾನಿಸಲು ಬೆಳಗ್ಗೆಯಿಂದ ದೂರವಾಣಿ ಮಾಡುತ್ತಿದ್ದೇನೆ ಆದರೆ ಅವರು ನನ್ನ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ನೂತನ ಸಚಿವ ವಿ. ಸೋಮಣ್ಣ ಅವರು ಸೋಮವಾರ ಹೇಳಿದರು.

ನಗರದಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಬರುವದಿನಗಳಲ್ಲಿ ಅವರನ್ನು ಖುದ್ದಾಗಿ ಭೇಟಿ ಮಾಡುತ್ತೇವೆ. ಅ. 28ರಂದು ಮತ್ತೆ ಮೈಸೂರಿಗೆ ಬರುತ್ತೇನೆ ಆಗ ಖುದ್ದಾಗಿ ಭೇಟಿ ಮಾಡಿ ಶಾಸಕ ರಾಮದಾಸ್ ಮನವೊಲಿಸುತ್ತೇವೆ. ಇದು ವರ್ಷಕ್ಕೊಮ್ಮೆ ಬರುವ ನಾಡ ಮೈಸೂರು ಹಬ್ಬ, ಹೀಗಾಗಿ ಎಲ್ಲರು ಒಟ್ಟಾಗಿ ಹಬ್ಬ ಆಚರಿಸಬೇಕು ಎಂಬುದು ನಮ್ಮ ಆಸೆ ಎಂದರು.

ಇನ್ನು ರಾಮದಾಸ್ ಅವರು ಮುನಿಸು ಬಿಟ್ಟು ಮುಂದಿನ ಕಾರ್ಯಕ್ರಮಗಳಿಗೆ ಬರುವ ವಿಶ್ವಾಸ ಇದೆ ಎಂದ ಅವರು, ನನಗೆ ಖಾತೆ ಹಂಚಿಕೆ ಬಗ್ಗೆ ಕಾಳಜಿಯೂ ಇಲ್ಲ ಆಸಕ್ತಿಯು ಇಲ್ಲ. ಪಕ್ಷವು ಯಾವುದೇ ಖಾತೆ ಕೊಟ್ಟರು ನಿಭಾಯಿಸುತ್ತೇನೆ. ಖಾತೆ ವಿಚಾರ ಸಿಎಂಗೆ ಬಿಟ್ಟದ್ದು, ಡಿಸಿಎಂ ವಿಚಾರವು ಅವರಿಗೆ ಸೇರಿದ್ದು ಎಂದು ಹೇಳಿ ವಿ.ಸೋಮಣ್ಣ ಜಾರಿಕೊಂಡರು.

ಇದೇ ವೇಳೆಯಲ್ಲಿ ದಸರಾದ ಎಲ್ಲ ಆಹ್ವಾನ ಪತ್ರಿಕೆಯಲ್ಲೂ ಮಹಾರಾಜರ ಭಾವಚಿತ್ರ ಇರುವುದು ಕಡ್ಡಾಯ. ಆ ಮಹಾರಾಜರ ಪರಂಪರೆ ಇಲ್ಲದೆ ನಾಡಹಬ್ಬ ದಸರಾ ಇಲ್ಲ. ಮಹಾರಾಜರನ್ನು ಗೌರವಿಸುವುದು ನಮ್ಮ ಕರ್ತವ್ಯ. ಹೀಗಾಗಿ ಆಹ್ವಾನ ಪತ್ರಿಕೆ ಅವರ ಭಾವಚಿತ್ರ ಹಾಕಿ ಗೌರವ ನೀಡಲು ಆದೇಶಿಸಿದ್ದೇನೆ ಎಂದು ಮೈಸೂರು ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದರು.

Comments are closed.