ಕರ್ನಾಟಕ

‘ದೇವೇಗೌಡರಿಗೆ ವಯಸ್ಸಿನ ಸಮಸ್ಯೆ ಇದೆ’

Pinterest LinkedIn Tumblr


ಹಾಸನ: ಮಾಜಿ ಪ್ರಧಾನಿ ದೇವೇಗೌಡರಿಗೆ ವಯಸ್ಸಿನ ಸಮಸ್ಯೆ ಇದೆ, ಒಂದು ವರ್ಷ ಎರಡು ತಿಂಗಳು ಅಧಿಕಾರ ಅನುಭವಿಸಿ ಈ ರೀತಿ ಮಾತನಾಡುವುದು ಶೋಭೆ ತರುವುದಿಲ್ಲ ಎಂದು ಮಾಜಿ ಶಾಸಕ ಸಿ. ಎಸ್ ಪುಟ್ಟೇಗೌಡ ವಾಗ್ದಾಳಿ ನಡೆಸಿದ್ದಾರೆ.

ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮೇಲೆ ದೇವೇಗೌಡರ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು. ದೇವೇಗೌಡರು ಒಬ್ಬ ಪಲಾಯನವಾದಿ, ಸಿದ್ದರಾಮಯ್ಯ ಹೇಳಿರುವುದು ನೂರಕ್ಕೆ ನೂರು ಸತ್ಯ ಎಂದು ಪುಟ್ಟೇಗೌಡ ನುಡಿದರು.

ದೇವೇಗೌಡ ಹಾಗೂ ಸಿದ್ದರಾಮಯ್ಯ ಒಂದೇ ಗರಡಿಯಲ್ಲಿ ಬೆಳೆದವರು, ಯಾರನ್ನೋ ಮೆಚ್ಚಿಸುವುದಕ್ಕೆ ದೇವೇಗೌಡರು ಪಲಾಯನವಾದ ಮಾಡುತ್ತಿದ್ದಾರೆ, ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲರನ್ನು ಸಮನ್ವಯ ಮಾಡುವುದರಲ್ಲಿ ಕುಮಾರಸ್ವಾಮಿಯವರು ಸೋತರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದಾದರು ಖಾತೆಗೆ ಕೈ ಹಾಕಿದ್ದಾರಾ ಹೇಳಿ ಎಂದು ಪ್ರಶ್ನೆ ಮಾಡಿದರು.

ನಂತರ ಮಾಜಿ ಸಚಿವ ರೇವಣ್ಣ ವಿಚಾರವಾಗಿ ಮಾತನಾಡಿದ ಅವರು, ನಾನು ರೇವಣ್ಣನ ಮನೆಗೆ ಹೋಗಲ್ಲ, ನನ್ನ ಮನೆಗೆ ಅವರು ಬರೋಲ್ಲ ಎಂದು ಮಾಜಿ ಶಾಸಕ ಸಿ. ಎಸ್ ಪುಟ್ಟೇಗೌಡ ತಿಳಿಸಿದರು.

ಇನ್ನೂ ನಾಮ ನಿರ್ದೇಷನ ಸ್ಥಾನಕ್ಕೆ ನಮ್ಮ ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿಯನ್ನು ಚಂಡು ಆಡಿಸಿದಂತೆ ಆಡಿಸಿದರು ಜೆಡಿಎಸ್​​ನವರು ಎಂದು ಇದೇ ವೇಳೆ ಜೆಡಿಎಸ್ ವಿರುದ್ದ ಹಾಸನದಲ್ಲಿ ಮಾಜಿ ಶಾಸಕ ಸಿ. ಎಸ್ ಪುಟ್ಟೇಗೌಡ ವಾಗ್ದಾಳಿ ನಡೆಸಿದರು.

Comments are closed.