ಕರ್ನಾಟಕ

ಸಿದ್ದರಾಮಯ್ಯ ವಿಷಯ ದೊಡ್ಡದೇನಲ್ಲ, ನಾನು ಸೋತಿದ್ದರೂ ಸುಮ್ಮನೆ ಕುಳಿತಿಲ್ಲ: ದೇವೇಗೌಡ

Pinterest LinkedIn Tumblr


ಹಾಸನ: ಇಂದು ಹೊಳೆನರಸೀಪುರಕ್ಕೆ ಬಂದಿದ್ದ ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡರು, ಬೆಟ್ಟದ ರಂಗನಾಥಸ್ವಾಮಿ ದರ್ಶನ ಪಡೆದ ಬಳಿಕ ರಾಜಕೀಯದ ಬಗ್ಗೆ ಮಾರ್ಮಿಕವಾಗಿ ಮಾತನಾಡಿದ್ದಾರೆ.

ಹೊಳೆನರಸೀಪುರದಲ್ಲಿ ಪುತ್ರ ರೇವಣ್ಣ ಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸಿದ್ದರಾಮಯ್ಯ ವಿಷಯ ದೊಡ್ಡದೇನಲ್ಲ. ಅವರು ಹೇಳಿದರೆ ಜನರು ಒಪ್ಪಬೇಕಲ್ಲ..? ಅವರ ಟೀಕೆಗೆಲ್ಲ ಮುಂದಿನ ದಿನಗಳಲ್ಲಿ ಉತ್ತರ ಕೊಡ್ತೀನಿ ಅಂದರು. ರಾಜ್ಯದ ಜನ್ರಿಗೆ ಗೊತ್ತು ರೀ, ಯಾರು ಸರ್ಕಾರ ಬಿಳಿಸಿದ್ದು ಅಂತ..? ಅಂತನೂ ಇದೇ ವೇಳೆ ಹೇಳಿದರು.

ಮೈತ್ರಿ ಬಗ್ಗೆ ಏನನ್ನೂ ಸ್ಪಷ್ಟವಾಗಿ ಹೇಳದ ಅವರು, ಸೋನಿಯಾ ಗಾಂಧಿ ಈಗಾಗಲೇ ದೇಶದಲ್ಲಿ ಜಾತ್ಯತೀತ ಪಕ್ಷ ಒಗ್ಗೂಡಿಸಲು ಮುಂದಾಗಿದ್ದಾರೆ. ಹಾಗಾಗಿ, ಅವರು ಮೈತ್ರಿ ಬಗ್ಗೆ ಒತ್ತು ಕೊಟ್ಟರೆ ಮಾತ್ರ ಯೋಚನೆ ಮಾಡುತ್ತೇನೆ ಎಂದರು.

ನಾನು ಸೋತಿದ್ದರೂ ಸುಮ್ಮನೆ ಕುಳಿತಿಲ್ಲ ಎಂದ ಅವರು, ರಾಜ್ಯದಲ್ಲಿ ಮತ್ತೆ ಜೆಡಿಎಸ್ ಸದೃಢಗೊಳಿಸ್ತೀನಿ. ಬೂತ್‌ ಮಟ್ಟದ ಕಾರ್ಯಕರ್ತರನ್ನೆಲ್ಲಾ ಒಟ್ಟುಗೂಡಿಸ್ತೀನಿ. ನನ್ನ ಮುಂದಿನ ಟಾರ್ಗೆಟ್‌ ಬೈಎಲೆಕ್ಷನ್‌ ಎಂದರು.

ಆದರೆ, ಕಾಂಗ್ರೆಸ್ -ಜೆಡಿಎಸ್ ಕಿತ್ತಾಟಕ್ಕೆ ಬಿಜೆಪಿ ವ್ಯಂಗ್ಯ ಮಾಡ್ತಿದ್ದೆ. ಅವರದ್ದೇನೂ ಹೊಸದೇನಲ್ಲ. ಮೊದಲಿಂದಲೂ ಕಾಂಗ್ರೆಸ್, ಜೆಡಿಎಸ್ ಡ್ರಾಮಾ ಕಂಪನಿಗಳು. ಅಧಿಕಾರ ಬಂದಾಗ ಒಂದಾಗ್ತಾರೆ, ನಂತರ ಬೈದಾಡ್ತಾರೆ ಅಂತ ಲೇವಡಿ ಮಾಡಿದರು.

ಒಟ್ಟಿನಲ್ಲಿ ನಿನ್ನೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ್ದ ಆರೋಪಗಳಿಗೆ ಇಂದು ದೇವೇಗೌಡರಿಂದ ಉತ್ತರ ಸಿಗುತ್ತೆ ಎಂದು ಕಾದಿದ್ದ ಜನರು ಹಾಗೂ ಪಕ್ಷದ ಕಾರ್ಯಕರ್ತರಿಗೆ ನಿರಾಸೆ ಆಗಿದೆ.

Comments are closed.