ಕರ್ನಾಟಕ

ಕೆಫೆ ಕಾಫಿ ಡೇ ಮಾಲಿಕತ್ವದ ಮೇಲೆ ಕಣ್ಣಿಟ್ಟಿರುವ ಕೋಕಾ ಕೋಲಾ ಕಂಪನಿ.?

Pinterest LinkedIn Tumblr


ಜೂನ್ ತಿಂಗಳಲ್ಲಿ ಸಿದ್ದಾರ್ಥರವರು ನಿಗೂಢವಾಗಿ ಸಾವಿಗೀಡಾಗಿದ್ದರು. ತಾವು ಸಾಯುವುದಕ್ಕೂ ಮುನ್ನ ಸಾಲದ ಹೊರೆಯನ್ನು ಕಡಿಮೆ ಮಾಡಿಕೊಳ್ಳುವ ಸಲುವಾಗಿ ಕೋಕಾ ಕೋಲಾ ಕಂಪನಿಗೆ ಕೆಲವೊಂದಷ್ಟು ಷೇರ್ ಗಳನ್ನು ಮಾರಾಟ ಮಾಡಲು ಯೋಚಿಸಿದ್ದರು. ಮಾರಟ ಮಾಡಿ ಬಂದ ಹಣದಿಂದ ಸಾಲ ಮರುಪಾವತಿಸುವ ಉದ್ದೇಶ ಅವರದಾಗಿತ್ತು. ಆದರೆ ಕೊಂಚ ಪ್ರಮಾಣದ ಷೇರುಗಳ ಬದಲಿಗೆ ಮಾಲೀಕತ್ವದ ಮೇಲೆಯೇ ಕೋಕಾ ಕೋಲಾ ಕಣ್ಣಿಟ್ಟಿದ್ದರಿಂದ ಮಾತುಕತೆ ನಿಂತುಹೋಗಿತ್ತು.

ಆದರೀಗಾ ಸಿದ್ಧಾರ್ಥ ಅವರು ನಿಧನರಾಗಿರುವುದರಿಂದ ಮತ್ತೊಮ್ಮೆ ಕೆಫೆ ಕಾಫಿ ಡೇ ಕಂಪನಿಯು ಕೋಕಾ ಕೋಲಾ ಕಂಪನಿಯ ಜೊತೆ ಮಾತುಕತೆ ಪುನಾರಂಭಿಸುವ ಸಾಧ್ಯತೆ ಇದೆ. ಎಂಬ ಸುದ್ದಿ ಹರಿದಾಡುತ್ತಿದೆ.

ಅಷ್ಟಲ್ಲದೆ ಈ ಹಿಂದೆ ಬೆಂಗಳೂರಿನ ಗ್ಲೋಬಲ್‌ ವಿಲೇಜ್‌ ಟೆಕ್‌ ಪಾರ್ಕ್ ಅನ್ನು ಬ್ಲಾಕ್‌ಸ್ಟೋನ್‌ ಗ್ರೂಪ್‌ಗೆ ಕಾಫಿ ಡೇ ಸುಮಾರು 3000 ಕೋಟಿ ರೂ ಗೆ ಮಾರಾಟ ಮಾಡಿದ್ದು, ಅದರೊಂದಿಗೆ ಸಿದ್ದಾರ್ಥ್​ ರವರು ಸ್ಥಾಪಿಸಿದ್ದ ಸರಕು ಸಾಗಣೆ ಕಂಪನಿ ಸಿಕಲ್‌ ಲಾಜಿಸ್ಟಿಕ್‌ನ ಕೆಲವೊಂದು ಆಸ್ತಿಗಳನ್ನೂ ಮಾರಾಟ ಮಾಡಲು ಕಾಫಿ ಡೇ ಯೋಚಿಸುತ್ತಿದೆ ಎಂದು ಹೇಳಲಾಗುತ್ತಿದೆ.

Comments are closed.