ಕರ್ನಾಟಕ

ಫೋನ್ ಕದ್ದಾಲಿಕೆ ಆರೋಪ ಇದೀಗ ಬಿಜೆಪಿಗೆ ತಿರುಗುಬಾಣ

Pinterest LinkedIn Tumblr


ಬೆಂಗಳೂರು: ಫೋನ್ ಕದ್ದಾಲಿಕೆ ಆರೋಪ ಇದೀಗ ಬಿಜೆಪಿಗೆ ತಿರುಗುಬಾಣವಾಗಿದೆ. ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ನಮ್ಮ ಫೋನ್ ಟ್ರ್ಯಾಪ್ ಮಾಡಿದ್ದರು ಅಂತ ಬಿಜೆಪಿಯವರು ಆರೋಪಿಸಿದರೆ, ಕಾಂಗ್ರೆಸ್​ ನಾಯಕರು ಕೇಂದ್ರ ಸರ್ಕಾರ ನಮ್ಮ ಫೋನ್ ಈಗಲೂ ಟ್ಯಾಪಿಂಗ್ ಮಾಡ್ತಿದೆ ಅಂತ ಗಂಭೀರ ಆಪಾದನೆ ಮಾಡಿದ್ದಾರೆ.

ಪೊಲೀಸ್‌ ಅಧಿಕಾರಿಗಳಿಂದ ಬೆಳಕಿಗೆ ಬಂದ ಫೋನ್ ಕದ್ದಾಲಿಕೆ ಪ್ರಕರಣ ದಿನೇ ದಿನೇ ಹಲವು ತಿರುವು ಪಡೆದುಕೊಳ್ತಿದೆ. ಕುಮಾರಸ್ವಾಮಿ ಕಡೆ ಬಿಜೆಪಿಯವರು ಬೆರಳು ಮಾಡಿರುವ ನಡುವೆಯೇ ಕೇಂದ್ರದ ಮೇಲೆ ಕಾಂಗ್ರೆಸ್, ಜೆಡಿಎಸ್ ನಾಯಕರು ಪ್ರತ್ಯಾರೋಪ ಮಾಡಿದ್ದಾರೆ. ಇದೀಗ ಜೆಡಿಎಸ್‌ ನಾಯಕ ಸಿ.ಎಸ್.ಪುಟ್ಟರಾಜು ಆರೋಪ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್‌ ಕೊಟ್ಟಿದೆ.

ಮಂಡ್ಯದಲ್ಲಿ ಮಾತನಾಡಿರೋ ಪುಟ್ಟರಾಜು, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯದ ಕೆಲವು ಬಿಜೆಪಿ ನಾಯಕರು ನನ್ನ ಕುಟುಂಬದ ಫೋನ್ ಟ್ಯಾಪ್ ಮಾಡಿದ್ದರು. ಇದರಿಂದ ನಾನು ಮತ್ತು ನನ್ನ ಕುಟುಂಬ ಚಿತ್ರಹಿಂಸೆಗೆ ಒಳಗಾಗಿದ್ದೇವು ಎಂದು ಹೊಸ ಬಾಂಬ್‌ ಸಿಡಿಸಿದ್ದಾರೆ. ಇದರೊಂದಿಗೆ ಬಿಜೆಪಿ ಮಾಡಿದ್ದ ಆರೋಪ ಅವರಿಗೆ ತಿರುಗುಬಾಣವಾಗಿದೆ.

ಜೆಡಿಎಸ್‌ ನಾಯಕರ ಆರೋಪ ನಡುವೆಯೇ ಕಾಂಗ್ರೆಸ್‌ ನಾಯಕರು ಕೂಡ ಕೇಂದ್ರದತ್ತ ಬೆರಳು ಮಾಡಿದ್ದಾರೆ. ಈಗಲೂ ಕೇಂದ್ರ ಸರ್ಕಾರ ನಮ್ಮ ಫೋನ್ ಕದ್ದಾಲಿಕೆ ಮಾಡ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‌ ಗಂಭೀರ ಆರೋಪ ಮಾಡಿದ್ದಾರೆ.

ಬಿಜೆಪಿಯವರು ಏನು ಮಾಡಿದ್ದಾರೆ ಅಂತ ಗೊತ್ತಿಗೆ ಎಂದು ಡಿ. ಕೆ ಶಿವಕುಮಾರ್ ಗುಡುಗಿದ್ದಾರೆ. ನಾನು ಎರಡು ಬಾರಿ ಗೃಹ ಸಚಿವನಾಗಿದ್ದೆ. ಆದರೆ, ಫೋನ್ ಕದ್ದಾಲಿಕೆ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ತನಿಖೆಯಾಗಲಿ ಎಂದಿದ್ದಾರೆ ಮಾಜಿ ಡಿಸಿಎಂ ಪರಮೇಶ್ವರ್‌ ಹೇಳಿದ್ದಾರೆ.

ರಾಜ್ಯದಲ್ಲಿ ಭೀಕರ ಬರ ಹಾಗೂ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಇದೆ. ಸಂಪುಟ ರಚನೆ ಕೂಡ ಆಗಿಲ್ಲ. ನಿರೀಕ್ಷಿತ ಮಟ್ಟದಲ್ಲಿ ಪ್ರವಾಹಪೀಡಿತರಿಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಹೀಗಾಗಿ, ಇದನ್ನೇ ಕಾಂಗ್ರೆಸ್​ ನಾಯಕರು ಬಳಸಿಕೊಂಡು ಪದೇ ಪದೇ ಬಿಎಸ್​ವೈ ವಿರುದ್ಧ ಗದಾಪ್ರಹಾರ ನಡೆಸುತ್ತಿದರು. ಹೀಗಾಗಿ, ದಾರಿ ತಪ್ಪಿಸುವ ಹುನ್ನಾರದಿಂದ ಬಿಜೆಪಿ ನಾಯಕರು ಫೋನ್ ಟ್ಯಾಪಿಂಗ್ ಮುನ್ನಲೆಗೆ ತಂದಿದ್ದಾರೆ ಎಂಬ ಆರೋಪವೂ ಇದೆ. ಈ ಆರೋಪ ಹೊರಹಾಕಿ ವಿಷಯ ಡೈವರ್ಟ್ ಮಾಡೋಕೆ ನೋಡಿದರು. ಆದರೆ, ಇದೀಗ ಅವರಿಗೆ ಮುಳುವಾಗುವ ಸಾಧ್ಯತೆ ಎದುರಾಗಿದೆ. ತನಿಖೆ ಮಾಡಿಸಿದರೆ ಆಪರೇಷನ್ ಕಮಲ ಬೆಳಕಿಗೆ ಬರೋದು ಗ್ಯಾರಂಟಿ.

Comments are closed.