ಕರ್ನಾಟಕ

ಅನ್ನಭಾಗ್ಯ ಯೋಜನೆಗೆ ಬಿಜೆಪಿ ಸರ್ಕಾರದಿಂದ ಕತ್ತರಿ?

Pinterest LinkedIn Tumblr


ಬೆಂಗಳೂರು: ಪ್ರಧಾನ ಮಂತ್ರಿ ಕಿಸಾನ್​​ ಸಮ್ಮಾನ್ ಯೋಜನೆಗೆ ಸರ್ಕಾರ ಆರ್ಥಿಕ ಬರ ಉಂಟಾಗಿರುವ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜಾರಿಗೆ ತಂದಿದ್ದ ಕನಸಿನ ಅನ್ನಭಾಗ್ಯ ಯೋಜನೆಗೆ ಕತ್ತರಿಹಾಕಲು ಬಿಜೆಪಿ ಸರ್ಕಾರ ತೀರ್ಮಾನ ಮಾಡಿದೆ.

ರಾಜ್ಯದಲ್ಲಿ ಕಮಲ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರು 4 ಸಾವಿರ ಘೋಷಣೆ ಮಾಡಿದ್ದಾರೆ, ಕೇಂದ್ರದ ಆರು ಸಾವಿರಕ್ಕೆ ರಾಜ್ಯದ 4 ಸಾವಿರ ಹೆಚ್ಚುವರಿಯಾಗಿ ಹಣವು ಕೂಡ ಸೇರಿದೆ.

ಸದ್ಯ ಈ ಘೋಷಣೆಯಿಂದಾಗಿ ಸರ್ಕಾರದ ಮೇಲೆ 2200 ಕೋಟಿ ರೂಪಾಯಿ ಹೊರೆ ಆಗಲಿದೆ, ಹೀಗಾಗಿ ಆರ್ಥಿಕ ಇಲಾಖೆಯೂ ಈ ಹೊರೆಯನ್ನು ಸರಿದೂಗಿಸುವುದು ಕಷ್ಟವೆಂದಿದ್ದು, ಯೋಜನೆ ಜಾರಿ ಆಗಲೇಬೇಕೆಂದರೆ ಅನ್ನಭಾಗ್ಯಕ್ಕೆ ಯೋಜನೆಗೆ ಕತ್ತರಿ ಹಾಕಬೇಕಾದ ಅಗತ್ಯವಿದೆ ಎಂದು ಹಣಕಾಸು ಇಲಾಖೆ ಸಿಎಂಗೆ ತಿಳಿಸಿತ್ತು.

ಇನ್ನು 2 ಕೆ.ಜಿ ಅಕ್ಕಿ, 1 ಕೆ.ಜಿ ಬೆಳೆ ಕಡಿತ ಮಾಡಿದರೆ 500 ಕೋಟಿ ಉಳಿತಾಯವಾಗಲಿದೆ, ಆಗ ಸ್ವಲ್ಪ ಮಟ್ಟಿಗಾದರು ನಿಮ್ಮ ಯೋಜನೆ ಸರಿದೂಗಿಸಬಹುದು ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಸಲಹೆ ನೀಡಿದ್ದಾರೆ. ಹಿಂದೆ ವಿತರಣೆ ಮಾಡುತ್ತಿದ್ದ 7 ಕೆ.ಜಿ ಅಕ್ಕಿಯಲ್ಲಿ 2 ಕೆ.ಜಿ ಕಡಿತಗೊಳಿಸಿ 5 ಕೆ.ಜಿ ನೀಡುವ ಸಾಧ್ಯತೆ ಇದೆ.

Comments are closed.