ಕರ್ನಾಟಕ

ಮಲೆನಾಡಿನಲ್ಲಿ ಮುಂದುವರಿದ ವರುಣನ ಆರ್ಭಟ: ಹೊಸನಗರ – ಶಿವಮೊಗ್ಗ ‌ಸಂಪರ್ಕ‌ ಬಂದ್

Pinterest LinkedIn Tumblr


ಶಿವಮೊಗ್ಗ: ಜಿಲ್ಲೆ ಸೇರಿದಂತೆ ಮಲೆನಾಡಿನಾಧ್ಯಂತ ಭಾರಿ ಮಳೆ ಮುಂದುವರಿದಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ಸೂಡೂರು ಗೇಟ್ ಸೇತುವೆ ಮುಳುಗಡೆಯಾಗಿದ್ದು, ಹೊಸನಗರ – ಶಿವಮೊಗ್ಗ ‌ರಸ್ತೆ ಸಂಪರ್ಕ‌ ಸ್ಥಗಿತವಾಗಿದೆ. ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗ- ಭದ್ರಾವತಿ ರೋಡ್ ನಲ್ಲಿ ರಸ್ತೆ ಸಂಚಾರ ಕಡಿತಗೊಳಿಸಲಾಗಿದೆ.

ತೀರ್ಥಹಳ್ಳಿ ತಾಲೂಕಿನಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ತುಂಗಾ ಜಲಾಶಯಕ್ಕೆ 1 ಲಕ್ಷದ 15 ಸಾವಿರ ಕ್ಯುಸೆಕ್ ಒಳ ಹರಿವು ನೀರು ಬರುತ್ತಿದೆ. ಅಷ್ಟೇ‌ ಪ್ರಮಾಣದ ‌ನೀರನ್ನ ನದಿಗೆ ಬಿಡಲಾಗುತ್ತಿದೆ. ತುಂಗಾ ನದಿ ಆಪಾಯ ಮಟ್ಟ ಮೀರಿ ಹರಿಯುತ್ತಿರುವುದರಿಂದ ನದಿಯ ಅಕ್ಕಪಕ್ಕದಲ್ಲಿರುವ ಗ್ರಾಮಗಳಿಗೆ ಎಚ್ಚರಿಕೆ ನೀಡಲಾಗಿದೆ.

ಹಳೇ ಶಿವಮೊಗ್ಗ ಬಹುತೇಕ ಜಲಾವೃತ.
ವಿದ್ಯಾನಗರ, ಜೆಪಿಎನ್ ಕಾಲೇಜ್, ವಂದನಾ ಟಾಕೀಸ್, ಮಂಜುನಾಥ ಟಾಕೀಸ್, ಸಿದ್ದಯ್ಯ ರಸ್ತೆ ಕುಂಬಾರಗುಂಡಿ, ವಿಜಯಲಕ್ಷ್ಮಿ ಟಾಕೀಸ್ , ಜಗದಾಂಬಾ ಏರಿಯಾ. ನ್ಯೂ ಮಂಡ್ಲಿ ಸೇರಿದಂತೆ ನದಿ ಪಕ್ಕದಲ್ಲಿರುವ ಏರಿಯಾಗಳು ಬಹುತೇಕ ಜಲಾವೃತವಾಗಿದೆ. ಅಶ್ವಥ ನಗರ, ಕೃಷಿ ನಗರ, ಡಾಲರ್ಸ್ ಕಾಲೋನಿಯಲ್ಲು ಕೆಲವು ಮನೆಗಳಿಗೆ ಮಳೆ ನೀರು ನುಗ್ಗಿದೆ.

Comments are closed.