ಕರ್ನಾಟಕ

ಮುಸಲ್ಮಾನರ ಬಕ್ರೀದ್‌ ಹಬ್ಬ ಆಚರಣೆಗೆ ರಕ್ಷಣೆ ಒದಗಿಸುವಂತೆ ಸಿಎಂಗೆ ಮುಸಲ್ಮಾನ ಶಾಸಕರ ಮನವಿ

Pinterest LinkedIn Tumblr


ಬೆಂಗಳೂರು: ಪವಿತ್ರ ಬಕ್ರೀದ್‌ ಹಬ್ಬವನ್ನು ನಾಡಿನಾದ್ಯಂತ ಆಚರಿಸಲಾಗುತ್ತಿದ್ದು, ಈ ಸಂಬಂಧ ರಕ್ಷಣೆ ನೀಡುವಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಮುಸಲ್ಮಾನ ಶಾಸಕರು ಮವನಿ ಮಾಡಿದ್ದಾರೆ.

ಆಗಸ್ಟ್‌ 12ರಂದು ಬಕ್ರೀದ್‌ ಹಬ್ಬ ಆಚರಿಸಲಾಗುತ್ತಿದೆ. ಸಾಮರ್ಥ್ಯಕ್ಕನುಗುಣವಾಗಿ ಪ್ರಾಣಿ ಬಲಿ ಕೊಡುವ ಪದ್ಧತಿ ಜಾರಿಲ್ಲಿದೆ. ಹೀಗಾಗಿ ಹಬ್ಬದ ಸಂದರ್ಭದಲ್ಲಿ ವಾಹನಗಳಲ್ಲಿ ಪ್ರಾಣಿ ಸಾಗಣೆಗೆ ಅಡಚಣೆಯಾಗದಂತೆ ರಕ್ಷಣೆ ನೀಡಲು ಪೊಲೀಸ್‌ ಮತ್ತು ಜಿಲ್ಲಾಡಳಿತಕ್ಕೆ ಸೂಚಿಸಬೇಕೆಂದು ಶಾಸಕರು ಮನವಿ ಮಾಡಿದ್ದಾರೆ.

ಕಾಂಗ್ರೆಸ್‌ ಶಾಸಕ ತನ್ವೀರ್ ಸೇಠ್‌ ಈ ಮನವಿ ಪತ್ರ ಬರೆದಿದ್ದಾರೆ.

ಶಾಸಕರಾದ ಸಿಎಂ ಇಬ್ರಾಹಿಂ, ರಹೀಂ ಖಾನ್‌, ಎನ್‌ಎ ಹ್ಯಾರಿಸ್‌, ನಜೀರ್ ಅಹಮದ್‌, ಅಬ್ದುಲ್ ಜಬ್ಬಾರ್‌ ಸೇರಿದಂತೆ ಹಲವು ಶಾಸಕರು ಸಹಿ ಹಾಕಿದ್ದಾರೆ.

ಮುಸಲ್ಮಾನ ಶಾಸಕರ ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ, ಸೂಕ್ತ ರಕ್ಷಣೆ, ಭದ್ರತೆ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಕೂಡಲೇ ಪೊಲೀಸ್‌ ಇಲಾಖೆ ಸೂಚನೆ ನೀಡಿದ್ದಾರೆ.

Comments are closed.