ಕರ್ನಾಟಕ

ಪುತ್ರನ ಸಾವಿನ ಸುದ್ದಿ ಸಿದ್ದಾರ್ಥ್ ತಂದೆಗೇ ಗೊತ್ತಿಲ್ಲ..!

Pinterest LinkedIn Tumblr


ಮೈಸೂರು: ಕೆಫೆ ಕಾಫಿಡೇ ಮಾಲೀಕ ಸಿದ್ದಾರ್ಥ್ ತಂದೆ ಗಂಗಯ್ಯ ಹೆಗಡೆ ಕೋಮಾದಲ್ಲಿದ್ದು, ಮೈಸೂರಿನ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಕಳೆದ 3-4 ತಿಂಗಳಿಂದ ಸಿದ್ದಾರ್ಥ್ ತಂದೆ ಗಂಗಯ್ಯ ಹೆಗಡೆ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದು, ಕೋಮಾದಲ್ಲಿದ್ದಾರೆ. ಅವರಿಗೆ ಮೈಸೂರಿನ ಗೋಪಾಲಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಈ ಬಗ್ಗೆ ಮಾಹಿತಿ ಕೇಳಿದವರಿಗೆ ಅವರು ಡಿಸ್ಚಾರ್ಜ್ ಆಗಿದ್ದಾರೆನ್ನಲಾಗುತ್ತಿತ್ತು. ಆದ್ರೆ ಗಂಗಯ್ಯ 3-4 ತಿಂಗಳಿಂದ ಕೋಮಾದಲ್ಲಿದ್ದು, ಇನ್ನು ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನು ಗಂಗಯ್ಯ ಹೆಗಡೆಯವರಿಗೆ ಚಿಕಿತ್ಸೆ ಮುಂದುವರೆದಿದ್ದು, ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ಈ ಕಾರಣಕ್ಕಾಗಿ ಸಿದ್ದಾರ್ಥ್ ಅಂತ್ಯಕ್ರಿಯೆಯಲ್ಲಿ ಗಂಗಯ್ಯನವರು ಭಾಗವಹಿಸುವುದಿಲ್ಲ. ಇನ್ನೊಂದು ಸಂಗತಿಯೆಂದರೆ ಕೋಮಾದಲ್ಲಿರುವ ಕಾರಣ ತಂದೆಗೆ ಮಗ ಸಿದ್ದಾರ್ಥ್ ನಿಧನ ಸುದ್ದಿ ಗೊತ್ತೇ ಇಲ್ಲ.

Comments are closed.