ಕರ್ನಾಟಕ

ಸಿದ್ದಾರ್ಥ ಆತ್ಮಹತ್ಯೆಗೂ ಮೊದಲು ನಡೆದಿದ್ದೇನು?

Pinterest LinkedIn Tumblr


ಬೆಂಗಳೂರು: ಕೇಫೆ ಕಾಫಿ ಡೇ ಮೂಲಕ ಸಾವಿರಾರು ಯುವಕರಿಗೆ ಉದ್ಯೋಗ ನೀಡಿದ್ದ ಉದ್ಯಮಿ ವಿಜಿ ಸಿದ್ದಾರ್ಥ್ ನಾಪತ್ತೆ ಇಡೀ ದೇಶದಲ್ಲೇ ಸಂಚನ ಸೃಷ್ಟಿಸಿತ್ತು. ಅದರಲೂ ಸಾವಿರಾರು ಕೋಟಿ ಒಡೆಯ ಅನಾಮತ್ ಆಗಿ ನಾಪತ್ತೆಯಾಗಿದ್ದು ದಿಗ್ಬ್ರಮೆ ಮತ್ತು ಸಿಡಿಲುಬಂಡಿದಂತಾಗಿತ್ತು.

ಸೋಮವಾರ ಬೆಳಗ್ಗೆ ಬೆಂಗಳೂರಿನಿಂದ ಕಾರಿನಿಂದ ಹೊರಟಿದ್ದ ಸಿದ್ದಾರ್ಥ ರಸ್ತೆ ಮಾರ್ಗವಾಗಿಯೇ ಮಂಗಳೂರು ತಲುಪಿದ್ದರು. ದಾರಿಯುದ್ದಕ್ಕೂ ಹತ್ತಾರು ಕರೆಗಳನ್ನು ಸಿದ್ದಾರ್ಥ ಮಾಡುತ್ತಿದ್ದರು. ಕರೆ ಮಾಡಿ ಎಲ್ಲರಿಗೂ ನನ್ನ ಕ್ಷಮಿಸಿ ಎಂದಷ್ಟೇ ಹೇಳಿ ಕರೆ ಕಟ್ ಮಾಡುತ್ತಿದ್ದರು.

ಬೆಂಗಳೂರಿನಿಂದ ಸಕಲೇಶಪುರಕ್ಕೆ ಕಾರಿನಲ್ಲಿ ಹೊರಟೆವು. ಸಕಲೇಶಪುರ ಸಮೀಪಿಸುತ್ತಿದ್ದಂತೆ ಮಂಗಳೂರಿಗೆ ತೆರಳಲು ಸೂಚಿಸಿದರು. ಮಂಗಳೂರು ಸರ್ಕಲ್ ಬಿಟ್ಟು ಮುಂದೆ ಹೋದ ನಂತರ ದೊಡ್ಡ ಸೇತುವೆ ಸಿಕ್ಕಿತು. ಅದರ ಬಳಿಗೆ ಬಂದಾಗ ಕಾರಿನಿಂದ ಇಳಿದ ಅವರು, ಸೇತುವೆಯ ಕೊನೆಗೆ ಹೋಗಿ ನಿಲ್ಲುವಂತೆಯೂ. ತಾವು ನಡೆದುಕೊಂಡು ಬರುವುದಾಗಿ ತಿಳಿಸಿದರು.

ನಂತರ ನನ್ನ ಬಳಿ ಬಂದು ಕಾರಿನಲ್ಲೇ ಇರು. ಅಂತ ಹೇಳಿ ಹಿಂದಕ್ಕೆ ಹೋದರು. ಒಂದು ಗಂಟೆ ಕಳೆದರೂ ಬರೆದೆ ಇದ್ದದ್ದರಿಂದ ನಾನು ಅವರ ಮೊಬೈಲ್ ಗೆ ಕರೆ ಮಾಡಿದೆ. ಆಗ ಮೊಬೈಲ್ ಸ್ವಿಚ್ ಆಫ್ ಅಂತ ಬಂತು, ಕೂಡಲೇ ಸಿದ್ದಾರ್ಥ ಅವರ ಪುತ್ರ ಅಮಾರ್ತೃ ಹೆಗ್ಡೆ ಅವರಿಗೆ ತಿಳಿಸಿದೆ. ಅವರು ಸಲಹೆ ಮೇರೆಗೆ ನಾನು ಪೊಲೀಸರಿಗೆ ದೂರು ನೀಡಿದೆ ಅಂತ ಸಿದ್ದಾರ್ಥ ಅವರ ಕಾರು ಚಾಲಕ ಬಸವರಾಜ ಪಾಟೀಲ್ ತಿಳಿಸಿದ್ದಾರೆ.

ಇನ್ನು ದಾರಿಯೂದ್ದಕ್ಕೂ ಸಿದ್ದಾರ್ಥ ಅವರು 15 ರಿಂದ 20 ಮಂದಿಗೂ ದೂರವಾಣಿ ಕರೆ ಮಾಡಿದ್ದರು. ಇಂಗ್ಲಿಷ್ ನಲ್ಲಿ ಮಾತನಾಡುತ್ತಿದ್ದರಿಂದ ನನಗೆ ಅರ್ಥವಾಗುತ್ತಿರಲಿಲ್ಲ. ಆದರೆ ತುಂಬಾ ಜನರಿಗೆ ಅವರು ಐ ಅ್ಯಮ್ ಸಾರಿ ಎಂದು ಹೇಳುತ್ತಿದ್ದರು ಎಂದು ಚಾಲಕ ಹೇಳಿದ್ದಾರೆ.

ಸೋಮವಾರ ರಾತ್ರಿ ಘಟನೆ ನಡೆದಿದ್ದು ಬುಧವಾರ ಬೆಳಗ್ಗೆ ಅವರ ಮೃತದೇಹ ಪತ್ತೆಯಾಗಿತ್ತು.

Comments are closed.