ಕರ್ನಾಟಕ

ಸಿದ್ದಾರ್ಥ ಮೃತದೇಹ ಮೊದಲು ಪತ್ತೆ ಹಚ್ಚಿದ್ದು ಯಾರು?

Pinterest LinkedIn Tumblr

ಕಳೆದ ಸೋಮವಾರ ಸಂಜೆಯಿಂದ ನಾಪತ್ತೆಯಾಗಿದ್ದ ಕಾಫಿ ಡೇ ಮಾಲೀಕ ವಿಜಿ ಸಿದ್ದಾರ್ಥ್ ಅವರ ಮೃತದೇಹಕ್ಕಾಗಿ ಮುಳುಗು ತಜ್ಞರು,ತಂತ್ರಜ್ಞರು ಹುಡುಕಾಟ ನಡೆಸಿದ್ದರೂ ಕೊನೆಗೆ ಮೃತದೇಹ ಸಿಕ್ಕಿದ್ದು ಮಾತ್ರ ಮೀನುಗಾರರಿಗೆ. ಹೌದು ರಿತೇಶ್​ ಎಂಬ ಮೀನುಗಾರ ಸಿದ್ದಾರ್ಥ ಮೃತದೇಹ ಪತ್ತೆ ಮಾಡಿದ್ದು, ಆ ಅನುಭವವನ್ನು ಅವರು ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ.

ಸೋಮವಾರ ನೇತ್ರಾವತಿ ನದಿ ಬಳಿಯಿಂದ ಸಿದ್ದಾರ್ಥ ನಾಪತ್ತೆಯಾಗಿದ್ದಾರೆ ಎಂದು ಊಹಿಸಲಾಗಿತ್ತಾದರೂ, ಸಿದ್ದಾರ್ಥ ಮೃತದೇಹ, ಸೇತುವೆಯ ಬಳಿ ಅಲ್ಲ, ಬದಲಿಗೆ ಆ ಜಾಗದಿಂದ 4 ಕಿಲೋಮೀಟರ್ ದೂರದಲ್ಲಿನ ಹೋಯಿಗೆ ಬಜಾರ್ ಎಂಬ ಸ್ಥಳದಲ್ಲಿ ನೀರಿನಲ್ಲಿ ತೇಲುತ್ತಿತ್ತು.

ಬೆಳ್ಳಂಬೆಳಗ್ಗೆ ಮೀನುಗಾರಿಕೆಗೆ ತೆರಳಿದ್ದ ರಿತೇಶ್​​ಗೆ ಈ ಮೃತದೇಹ ಕಾಣಿಸಿದ್ದು, ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ಧೈರ್ಯ ಮಾಡಿ ಸಿದ್ದಾರ್ಥ ಮೃತದೇಹವನ್ನು ರಿತೇಶ್​ ತಮ್ಮ ತಂಡದ ಸಹಾಯದಿಂದ ದಡಕ್ಕೆ ತಂದಿದ್ದಾರೆ. ಈ ವೇಳೆ ರಿತೇಶ್ ಅವರಿಗೆ ಸಿದ್ದಾರ್ಥ ಇನ್ನು ಸಿದ್ದಾರ್ಥ್ ಅವರು ನದಿಗೆ ಬೀಳುವಾಗ ಶರ್ಟ್ ಅನ್ನು ತೆಗೆದು ನೀರಿಗೆ ಬಿದ್ದಿದ್ದು. ಕಪ್ಪು ಬಣ್ಣದ ಪ್ಯಾಂಟ್ ಹಾಗೂ ಕಪ್ಪು ಶೂಗಳನ್ನು ಧರಿಸಿದ್ದರು.

ಇನ್ನು ಸಿದ್ದಾರ್ಥ್ ದೇಹವನ್ನು ಪತ್ತೆ ಮಾಡಿದ ರಿತೇಶ್,ಪ್ರಾಣೇಶ್ ,ಶರತಿ..ಇವರು ಬೆಳಿಗ್ಗೆ ಮೃತದೇಹವನ್ನು ಕಂಡು ದಡಕ್ಕೆ ತಂದಿದ್ದಾರೆ. ಇವರು ಹೇಳುವ ಪ್ರಕಾರ ಯಾರದರೂ ನೀರಿನಲ್ಲಿ ಮುಳುಗಿ ಸತ್ತರೆ 24 ಗಂಟೆಯಾಗಲೇ ಬೇಕು.. ಆನಂತರವಷ್ಟೇ ದೇಹ ಸಿಗುವುದು‌. ನದಿ ನೀರು ಕಡಿಮೆ ಇದ್ದರೆ ನಿನ್ನೆಯೇ ನೀರಿನಲ್ಲಿ ಮುಳುಗಿ ದೇಹವನ್ನು ಪತ್ತೆ ಮಾಡಬಹುದಿತ್ತು.. ಆದರೆ ನೀರು ಹೆಚ್ಚಾಗಿತ್ತು ಅದಕ್ಕೆ ಯಾರೂ ಕೂಡ ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ.. ಇಂದು ದೇಹ ಊದಿಕೊಂಡು ಮೇಲೆ ತೇಲಿ ಬಂದಿದೆ ಎಂಬ ಮಾಹಿತಿ ನೀಡಿದ್ದಾರೆ.

ಸಿದ್ದಾರ್ಥ್ ಅವರ ಜೇಬಿನಲ್ಲಿ ಅವರ ಮೊಬೈಲ್ ಸಿಕ್ಕಿದೆ.. ಅಷ್ಟೇ ಅಲ್ಲದೆ ವಾಚು ಉಂಗುರ ಹಾಗೂ ಶೂ ಎಲ್ಲವೂ ಸಿದ್ದಾರ್ಥ್ ಅವರ ಮೈಮೇಲೆಯೇ ಇತ್ತು. ಇದನ್ನು ನೋಡಿದ್ರೆ ಸಿದ್ದಾರ್ಥ ಸಾವಿಗೆ ಮೊದಲೇ ಸಿದ್ಧವಾಗಿ ಬಂದು ಕೇವಲ ಮೊಬೈಲ್​ ಮಾತ್ರ ಕೊಂಡೊಯ್ದಿದ್ದರು ಎನ್ನಲಾಗುತ್ತಿದೆ.

ರಿತೇಶ್ ಸೋಮವಾರ ಕೂಡ ಸಿದ್ದಾರ್ಥ ಪತ್ತೆಯ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಆದರೆ ಆ ವೇಳೆ ಸಿದ್ದಾರ್ಥ ದೇಹ ಪತ್ತೆಯಾಗಿರಲಿಲ್ಲ. ಇಂದು ಮುಂಜಾನೆ ಅವರು ಮೀನುಗಾರಿಕೆಗೆ ತೆರಳಿದ ವೇಳೆ ಪತ್ತೆಯಾಗಿದ್ದು, ರಿತೇಶ್ ತಂಡ ಧೈರ್ಯ ಹಾಗೂ ಸಾಹಸದಿಂದ ಶವವನ್ನು ದಡಕ್ಕೆ ತಂದು ಪೊಲೀಸರಿಗೆ ಮಾಹಿತಿ ನೀಡಿ ನೆರವಾಗಿದ್ದಾರೆ.

Comments are closed.