ಕರ್ನಾಟಕ

ಮೋದಿಯಷ್ಟೇ ಯಡಿಯೂರಪ್ಪ ಸಹ ಪವರ್ ಫುಲ್: ಕಾಂಗ್ರೆಸ್ ಮುಖಂಡ ರಾಜಣ್ಣ

Pinterest LinkedIn Tumblr


ತುಮಕೂರು: ಕರ್ನಾಟಕದ ನೂತನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೂ ಸಹ ಪ್ರಧಾನಿ ನರೇಂದ್ರ ಮೋದಿಯವರಷ್ಟೇ ಪವರ್ ಫುಲ್ ಲೀಡರ್ ಆಗಿದ್ದಾರೆಂದು ಕಾಂಗ್ರೆಸ್ ಮುಖಂಡ ಮಾಜಿ ಶಾಸಕ ಕೆ.ಎನ್ ರಾಜಣ್ಣ ಹೇಳಿದ್ದಾರೆ.

ಈ ಮೂಲಕ ಬಿಎಸ್‍ವೈ ಅವರ ಪರ ಬ್ಯಾಟ್ ಮಾಡಿದ್ದಾರೆ. ಭಾನುವಾರ ತುಮಕೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ರಾಜಣ್ಣ ಕೇಂದ್ರ ಸರ್ಕಾರದಲ್ಲಿ ಮೋದಿ ಅವರ ಪ್ರಭಾವ ಹೇಗಿದೆಯೋ ಅದೇ ರೀತಿ ಕರ್ನಾಟಕದಲ್ಲಿ ಯಡಿಯೂರಪ್ಪ ಅವರೂ ಪ್ರಭಾವಶಾಲಿ ನಾಯಕರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

“ಯಡಿಯೂರಪ್ಪ ಇದೀಗ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ರಾಜ್ಯದ ಜನರಿಗೆ ವೃದ್ಧಾಪ್ಯ ವೇತನ , ವಿಕಲಚೇತನ , ರೈತರ ಸಾಲ ಮನ್ನಾ ಸೇರಿ ಅನೇಕ ಬಗೆಯ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಬೇಕೆಂದು ನಾನವರಲ್ಲಿ ಒತ್ತಾಯಿಸುತ್ತೇನೆ”

ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷನಾಗಿ ನಾನೂ ಸಹ ಯಡಿಯೂರಪ್ಪ ಅವರ ಪ್ರಮಾಣವಚನ ಸ್ವೀಕಾರ ಸಮಾರಂಬಕ್ಕೆ ತೆರಳಿದ್ದೆ.ಇದಕ್ಕಾಗಿ ಯಾರೂ ನನ್ನನ್ನು ಪ್ರಶ್ನಿಸಬಾರದು ಎಂದು ರಾಜಣ್ಣ ಹೇಳಿದ್ದಾರೆ.

ರಾಜ್ಯದಲ್ಲಿ ಹಲವಾರು ಗಂಭೀರ ಸಮಸ್ಯೆಗಳಿದ್ದು ಯಡಿಯೂರಪ್ಪ ಜನರ ಒಳಿತಿಗಾಗಿ ಕೆಲಸ ಮಾಡುತ್ತಾರೆ ಎಂಬ ಭರವಸೆ ಇದೆ ಎಂದು ಅವರು ಹೇಳಿದ್ದಾರೆ.

Comments are closed.