ಕರ್ನಾಟಕ

ನನ್ನ ಮಗನ 3ನೇ ಪುಣ್ಯ ತಿಥಿಗೆ ಬಂದಿದ್ದೇನೆ – ಸಿದ್ದರಾಮಯ್ಯ

Pinterest LinkedIn Tumblr


ಮೈಸೂರು: ನಾನು ನನ್ನ ಮಗನ ಮೂರನೇ ವರ್ಷದ ಪುಣ್ಯ ತಿಥಿಗೆ ಬಂದಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ನನ್ನ ಮಗನ ಮೂರನೇ ವರ್ಷದ ಪುಣ್ಯ ತಿಥಿಗೆ ಬಂದಿದ್ದೇನೆ, ಅಲ್ಲಿಯ ಪೂಜೆಯ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿದೆ. ಯಡಿಯೂರಪ್ಪ ನಾಳೆ ವಿಶ್ವಾಸಮತ ಯಾಚನೆ ವಿಚಾರವಾಗಿ ಹೊಸ ಬಾಂಬ್ ಸಿಡಿಸಿದ್ದಾರೆ. ಬಿಜೆಪಿಯವರೇ ಯಡಿಯೂರಪ್ಪ ವಿರುದ್ದ ಮತ ಹಾಕಬಹುದು.? ಈ ಬಗ್ಗೆ ನನಗೆ ಮಾಹಿತಿಯೂ ಇಲ್ಲ, ನಿರೀಕ್ಷೆಯೂ ಇಲ್ಲ, ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.

ಕೆಎಂಎಫ್ ರೇವಣ್ಣ ಪಾಲಿಟಿಕ್ಸ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಬಿ.ಫಾರಂ ಪಡೆದು ಗೆದ್ದವ್ರೇ ಮುಂಬೈನಲ್ಲಿ ಕುಳಿತಿದ್ದಾರೆ. ಇನ್ನು ಕೇವಲ ಪಕ್ಷದ ಬೆಂಬಲಿತ ಸದಸ್ಯರು ಹೋದರೆ ಏನ್ ಹೇಳೋದು. ಕೆಎಂಎಫ್ ವಿಚಾರದಲ್ಲಿ ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಅಂತ ಇಲ್ಲ, ಯಾಕೆ ಹೋಗಿದ್ದಾರೆಂದು ಬಳಿಕ ಮಾಹಿತಿ ಪಡೆಯುತ್ತೇನೆ. ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಭೀಮಾ ನಾಯ್ಕ್ ಆಕಾಂಕ್ಷಿಯಾಗಿದ್ದಾನೆ. ನಾನು ಕೆಎಂಎಫ್ ವಿಚಾರದಲ್ಲಿ ಸರಿಯಾಗಿ ಗಮನ ಕೊಟ್ಟಿಲ್ಲ, ಮಾಜಿ ಸಚಿವ ರೇವಣ್ಣ ಹೈದರಾಬಾದ್​ಗೆ ಕರೆದುಕೊಂಡು ಹೋಗಿರೋದು ಗೊತ್ತಿಲ್ಲ ಎಂದರು.

ಅತೃಪ್ತರಿಂದ ಕರೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಅದರಲ್ಲಿ ಇಬ್ಬರು ಕರೆ ಮಾಡಿದ್ದರು ಅಂತಾ ಹೇಳಿದ್ದೇನೆ. ಪದೇ ಪದೇ ಆ ವಿಚಾರ ಪ್ರಸ್ತಾಪ ಬೇಡ ಕರೆ ಮಾಡಿಲ್ಲ ಅಂತಾ ಹೇಳಿರುವವರು ನನಗೆ ಕರೆ ಮಾಡಿಲ್ಲ ಎಂದರು.

ಇವತ್ತು ಸ್ಪೀಕರ್ ಪ್ರೆಸ್ ಮೀಟ್ ಮಾಡ್ತಾರೆಂಬ ವಿಚಾರ ಪ್ರೆಸ್ ಮೀಟ್ ಕರೆದರಾ ? ಏಕೆ ಕರೆದರು.? ಎಂದು ಮಾಧ್ಯಮದವರನ್ನೇ ಸಿದ್ದರಾಮಯ್ಯ ಪ್ರಶ್ನಿಸಿದರು, ನಾನು ಇಲ್ಲಿದ್ದೀನಿ ನಮಗೇನು ಗೊತ್ತು.? ಅವರು ಏಕೆ ಮಾಧ್ಯಮಗೋಷ್ಠಿ ಕರೆದಿದ್ದಾರೆ ನನಗೆ ಗೊತ್ತಿಲ್ಲ, ನಿಮಗೇನಾದರೂ ಗೊತ್ತಾ.? ಉಪಚುನಾವಣೆಯಲ್ಲಿ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಬಗ್ಗೆ ಮುಂದೆ ನೋಡೋಣ ಎಂದರು.

Comments are closed.