ಕರ್ನಾಟಕ

ಸ್ವಾಮೀಜಿಗಳಿಂದ ಒತ್ತಡ; ಯಡಿಯೂರಪ್ಪಗೆ ಸವಾಲು

Pinterest LinkedIn Tumblr


ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಸರ್ಕಾರ ರಚನೆಗೆ ಸಜ್ಜಾಗ್ತಿದ್ದಾರೆ. ಆದರೆ ಈ ನಡುವೆಯೇ ರಾಜ್ಯದ ವಿವಿಧೆಡೆಯಿಂದ, ವಿವಿಧ ಸಮಾಜ, ಸಮುದಾಯಗಳಿಂದ ಸಚಿವ ಸ್ಥಾನಕ್ಕಾಗಿ ಒತ್ತಾಯವೂ ಕೇಳಿಬರಲು ಆರಂಭಿಸಿದೆ.

ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಉಡುಪಿ, ಕಲುಬುರಗಿ, ರಾಯಚೂರು ಹೀಗೆ. ವಿವಿಧೆಡೆಯಿಂದ ಸಚಿವ ಸ್ಥಾನಕ್ಕೆ ಭಾರೀ ಒತ್ತಾಯ ವ್ಯಕ್ತವಾಗಿದೆ.

ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಪರ ಯಾದವ ಸಂಘ ಮತ್ತು ಯಾದವ ಸಮುದಾಯದ ಸ್ವಾಮೀಜಿ ಬ್ಯಾಟ್ ಬೀಸಿದ್ದಾರೆ. ಚಿತ್ರದುರ್ಗ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲಾ ಯಾದವ ಸಂಘಗಳು ಆಗ್ರಹಿಸಿವೆ. ಯಾದವ ಸಮುದಾಯದ ಏಕೈಕ ಶಾಸಕಿ ಪೂರ್ಣಿಮಾಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯ ಮಾಡ್ತಿವೆ.

ಕೊಟ್ಟ ಮಾತು ಉಳಿಸಿಕೊಳ್ಳಲು ಯಡಿಯೂರಪ್ಪಗೆ ಸವಾಲು

ಇತ್ತ, ಚಿತ್ರದುರ್ಗದ ಗೊಲ್ಲ ಸಮುದಾಯದ ಮುಖಂಡರು ಶ್ರೀಕೃಷ್ಣ ಯಾದವ ಗುರುಪೀಠದ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ನೇತೃತ್ವದಲ್ಲಿ ನಿಯೋಗ ತೆರಳಲು ಸಜ್ಜಾಗಿದ್ದಾರೆ. ಯಡಿಯೂರಪ್ಪ ಕೊಟ್ಟ ಮಾತಿನಂತೆ ನಡೆದುಕೊಳ್ಳುಂತೆ ಎಂದು ಶ್ರೀಕೃಷ್ಣ ಯಾದಾವಾನಂದ ಸ್ವಾಮೀಜಿ ಹೇಳಿದ್ದಾರೆ.

Comments are closed.