ಕರ್ನಾಟಕ

ಉಪಮುಖ್ಯಮಂತ್ರಿ ಹುದ್ದೆ ಕುರಿತು ಶ್ರೀ ರಾಮುಲು ಈ ರೀತಿ ಹೇಳಿದ್ದೇಕೆ..?

Pinterest LinkedIn Tumblr


ಬಳ್ಳಾರಿ: ಕಳೆದ 14 ತಿಂಗಳುಗಳಿಂದ ಇದ್ದ ಭ್ರಷ್ಟ ಸರಕಾರ ಪತನ ಆಗಿದೆ, ನಮಗೆ ಬಹುಮತ ಸಿಕ್ಕಿದೆ, ಸದನದಲ್ಲಿ ನಾವು ಗೆದ್ದಿದ್ದೇವೆ ಎಂದು ಶಾಸಕ ಶ್ರೀರಾಮುಲು ಅವರು ಹೇಳಿದರು.

ಬಳ್ಳಾರಿಯ ಮೋಳಕಾಲ್ಮೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ಇಂದು ಪ್ರಮಾಣ ವಚನ ಸ್ವೀಕಾರ ಮಾಡ್ತಾರೆ. ಅವರ ಪ್ರಮಾಣ ಸಮಾರಂಭದಲ್ಲಿ ನಾವು ಎಲ್ಲಾ ಶಾಸಕರು ತೆರಳುತ್ತಿದ್ದೇವೆ. ಜನರ ನಿರೀಕ್ಷೆ ತಕ್ಕಂತೆ, ಸ್ವಚ್ವ ಆಡಳಿತ , ಪ್ರಮಾಣಿಕ ಆಡಳಿತ, ನೀಡಲು ನಾವು ಬದ್ದರಾಗಿದ್ದೇವೆ ಎಂದರು.

ಇನ್ನೂ ನಮ್ಮ ನಾಡಿನ ಜನತೆಗೆ ಭದ್ರತೆ ನೀಡಲು ಯಡಿಯೂರಪ್ಪ ಸಿಎಂ ಅಗ್ತಿದ್ದಾರೆ. 40 ವರ್ಷಗಳ ಕಾಲ ರಾಜ್ಯಕ್ಕಾಗಿ ಯಡಿಯೂರಪ್ಪ ದುಡಿದಿದ್ದಾರೆ. ಅವರ ಶ್ರಮಕ್ಕೆ ಫಲ ಸಿಕ್ಕಿದೆ. ರಾಜ್ಯದ ಜನರಿಗೆ ಉತ್ತಮ ಆಡಳಿತ ನೀಡಲಿ ಎಂದು ಹಾರೈಸುವೆ. ಯಡಿಯೂರಪ್ಪ ಅವರ ಮೇಲೆ ಈ ನಾಡಿನ ಜನರ ಆಶಿರ್ವಾದ ಇರಲಿ ಅವರ ಪ್ರಯಾಣ ಉತ್ತುಂಗಕ್ಕೆ ಸಾಗಲಿ ಎಂದು ರಾಮುಲು ಹಾರೈಸಿದರು.

ಬೇರೆ, ಬೇರೆ ಕಾರಣಗಳಿಂದ ಸರ್ಕಾರ ರಚನೆ ತಡವಾಗಿದೆ. ಡಿಸಿಎಂ ಹುದ್ದೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ಜನರು ನನ್ನನ್ನು ಗುರುತಿಸಿದ್ದಾರೆ. ಸ್ಥಾನಮಾನಕ್ಕಾಗಿ ದುಡಿಯೋನಲ್ಲ ಪಕ್ಷಕ್ಕಾಗಿ ದುಡಿಯೋನು ಪಕ್ಷದ ನಿರ್ಣಯಕ್ಕೆ ನಾನು ಬದ್ಧ, ಪಕ್ಷ ನನಗೆ ಅಧಿಕಾರ ನೀಡಿದ್ರೇ, ಪಕ್ಷದ ತಿರ್ಮಾನ ದೇವರ ಇಚ್ಚೆಯಂತೆ ನಡೆಯಲಿ. ನಮಗೆ ಪಕ್ಷ ಮುಖ್ಯ, ಹುದ್ದೆಯಲ್ಲ. ಜನರ ಭಾವನೆಗೆ ನಾನು ಬೆಲೆ ಕೊಡುವೆ, ಆದರೆ ಪಕ್ಷದ ನಿರ್ಣಯ ಅಂತಿಮ ಎಂದು ಹೇಳಿದರು.

ಮೂರು ಜನ ಶಾಸಕರ ಅನರ್ಹತೆ ವಿಚಾರದಲ್ಲಿ ನನ್ನ ವೈಯಕ್ತಿಕ ಅಭಿಪ್ರಾಯವೆಂದರೆ , ಉಳಿದ ಶಾಸಕರದ್ದು ಕೂಡ ಇತ್ಯರ್ಥ ಮಾಡುತ್ತಾರೆ ಅಂತ ಇತ್ತು, ಆದರೆ ಪಕ್ಷಪಾತ ಆಗ್ತಿದೆ. ಇದು ಸರಿಯಲ್ಲ, ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಕುತಂತ್ರದ ರಾಜಕಾರಣ ಮಾಡ್ತಿದ್ದಾರೆ ಎಂದು ಸ್ಪೀಕರ್ ವಿರುದ್ದ ಹರಿಹಾಯ್ದರು.

ಇನ್ನೂ ಇದೇ ವೇಳೆಯಲ್ಲಿ ಮಾತನಾಡಿದ ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ ನಾನು ಕೂಡಾ ಸಚಿವಾಕಾಂಕ್ಷಿ ಆಗಿದ್ದೇನೆ. ಆದರೆ ಪಕ್ಷದ ಹೈಕಮಾಂಡ್ ನನಗೆ ಸ್ಥಾನವನ್ನು ನೀಡಿದ್ರೆ ಜವಾಬ್ದಾರಿಯಿಂದ ನಿಭಾಯಿಸುವೆ ಎಂದು ಹೇಳಿದರು.

Comments are closed.