ಕರ್ನಾಟಕ

ಸಹೋದರನ ಅನರ್ಹ ಮಾಡಿದ್ದಕ್ಕೆ ಬಾಲಚಂದ್ರ ಜಾರಕಿಹೊಳಿ ಹೇಳಿದ್ದೇನು..?

Pinterest LinkedIn Tumblr


ಬೆಂಗಳೂರು: ಅಣ್ಣ ರಮೇಶ್ ಜಾರಕಿಹೊಳಿ ಸೇರಿ ಮೂವರನ್ನ ಅನರ್ಹ ಮಾಡಿದ್ದಕ್ಕೆ ಬಾಲಚಂದ್ರ ಜಾರಕಿಹೊಳಿ ಬೇಸರ ವ್ಯಕ್ತಪಡಿಸಿದ್ದಾರೆ.

ಸಭಾಧ್ಯಕ್ಷರು ರಮೇಶ್ ಕುಮಾರ್ ಇವತ್ತು ಮೂವರನ್ನ ಅನರ್ಹ ಮಾಡಿದ್ದಾರೆ. ಆರ್ ಶಂಕರ್ ರಮೇಶ್ ಜಾರಕಿಹೊಳಿ ಹಾಗೂ ಮಹೇಶ್ ಕುಮಟಹಳ್ಳಿಯನ್ನ ಅನರ್ಹ ಮಾಡಿದ್ದಾರೆ. 2010ರಲ್ಲಿ ನನ್ನನ್ನ ಸೇರಿ16 ಜನರನ್ನ ಅನರ್ಹ ಮಾಡಿದ್ರು. ಇವತ್ತು ಸ್ಪೀಕರ್ ಮೂವರು ಶಾಸಕರನ್ನ ಅನರ್ಹ ಮಾಡಿದ್ದಾರೆ. ಇದು ರಾಜಕೀಯ ಪ್ರೇರೇಪಿತವಾದುದು ಎಂದು ಬಾಲಚಂದ್ರ ಜಾರಕಿಹೊಳಿ ಆರೋಪಿಸಿದ್ದಾರೆ.

ಎಲ್ಲ ಶಾಸಕರ ಬಗ್ಗೆ ನಿರ್ಧಾರ ಕೈಗೊಳ್ಳಬೇಕಿತ್ತು. ಆದ್ರೆ ಕೇವಲ ಮೂವರು ಶಾಸಕರನ್ನ ಮಾತ್ರ ಅನರ್ಹ ಗೊಳಿಸಿದ್ದಾರೆ. ಅಂದ್ರೆ ಇಲ್ಲಿ ಉಳಿದವರಿಗೆ ಬೆದರಿಕೆ ಹಾಕಲು ಅನರ್ಹಗೊಳಿಸಿದ್ದಾರೆ ಅನ್ನೋದು ಸ್ಪಷ್ಟವಾಗಿದೆ. ಉಳಿದ ಶಾಸಕರಿಗೆ ವಾಪಸ್ ಬರುವಂತೆ ಈ ಆದೇಶ ಹೊರಡಿಸಿದ್ದಾರೆ. ಅನರ್ಹಗೊಳಿಸುವ ಭಯ ಹುಟ್ಟಿಸಿ ಉಳಿದ ಶಾಸಕರನ್ನ ಸೆಳೆಯುವುದು ಇಲ್ಲಿ ಸ್ಪಷ್ಟವಾಗಿದೆ. ಸುಪ್ರೀಂ ಕೋರ್ಟ್ ಈ ಬಗ್ಗೆ ತೀರ್ಮಾನ ತಗೆದುಕೊಳ್ಳಬೇಕು ಎಂದು ಬಾಲಚಂದ್ರ ಜಾರಕಿಹೊಳಿ ಆಗ್ರಹಿಸಿದ್ದಾರೆ.

ನನ್ನ ನೋಡಲಿಕ್ಕೆ ಸಾವಿರ ಜನ ಪೊಲೀಸರೊಂದಿಗೆ ಬಂದಿದ್ರು ಅಂತಾರೆ. 13 ಜನ ಶಾಸಕರು ಪೊಲೀಸರೊಂದಿಗೆ ಬರದೇ ಇದ್ದಿದ್ರೆ ಸುಧಾಕರರಿಗೆ ಆದಂತೆ ಆಗುತ್ತಿತ್ತು. ಇನ್ನೂ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ನೀಡಿತ್ತು. ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

Comments are closed.