ಕರ್ನಾಟಕ

ರಾಜ್ಯ ಬಿಜೆಪಿಗೆ ಶಾ ಭರ್ಜರಿ ಸರ್ಜರಿ! ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕಟೀಲು! ರಾಜ್ಯಪಾಲರಾಗಿ ಯಡಿಯೂರಪ್ಪ!!

Pinterest LinkedIn Tumblr

ರಾಜ್ಯದಲ್ಲಿ ಬಿಜೆಪಿಯನ್ನು ತಳಮಟ್ಟದಿಂದ ಹೊಸತಾಗಿ ಕಟ್ಟಿ ನಿಲ್ಲಿಸಲು ಹೈಕಮಾಂಡ್ ಪಣತೊಟ್ಟಂತಿದೆ. ಸಮ್ಮಿಶ್ರ ಸರ್ಕಾರವನ್ನು ಯಶಸ್ವಿಯಾಗಿ ಉರುಳಿಸಿ ಹೊಸ ಸರ್ಕಾರ ರಚನೆಯ ಹುಮ್ಮಸ್ಸಿನಲ್ಲಿದ್ದ ಬಿಎಸ್​ವೈ ಪಡೆಗೆ ಸಿಎಂ ಕ್ಯಾಂಡಿಡೇಟ್​ ಬದಲಾಯಿಸುವ ಮೂಲಕ ಶಾಕ್​ ನೀಡಿದ್ದು ಈಗ ಹೈಕಮಾಂಡ್​ ರಾಜ್ಯಾಧ್ಯಕ್ಷ ಸ್ಥಾನದಿಂದಲೂ ಬಿಎಸ್​ವೈರನ್ನು ಹೊರಗಿಡಲಿದೆ. ಬಿಜೆಪಿ ಮುಂದಿನ ಪ್ಲ್ಯಾನ್​ ಏನು ಇಲ್ಲಿದೆ ಡಿಟೇಲ್ಸ್​.

ಹೌದು ಅದಾಗಲೇ ವೈಟ್ ಸಫಾರಿಯೊಂದಿಗೆ ಪ್ರಮಾಣ ವಚನಕ್ಕೆ ಸಜ್ಜಾಗಿದ್ದ ಬಿಎಸ್​ವೈಗೆ ಹೈಕಮಾಂಡ್​​ ಸಖತ್ ಶಾಕ್​ ನೀಡಿದೆ. ಅಚ್ಚರಿಯ ಬೆಳವಣಿಗೆಯಲ್ಲಿ ಶಾಸಕ ಮಾಧುಸ್ವಾಮಿಯನ್ನು ಸಿಎಂ ಮಾಡಲು ಹೊರಟಿದೆ. ಅಷ್ಟೇ ಅಲ್ಲ ಈ ಬೆಳವಣಿಗೆಯಿಂದ ನೊಂದಿರುವ ಬಿಎಸ್​ವೈಗೆ ರಾಜ್ಯಪಾಲ ಸ್ಥಾನ ನೀಡಿ ಮನವೊಲಿಸಲಾಗುತ್ತದೆ.

ಇನ್ನು ಬಿಎಸ್​ವೈ ರಾಜ್ಯಪಾಲರಾಗಿ ನಿಯುಕ್ತರಾದರೇ ಖಾಲಿಯಾಗುವ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕರಾವಳಿಗೆ ಪ್ರಾಧಾನ್ಯತೆ ನೀಡಲು ಚಿಂತನೆ ನಡೆಸಿರುವ ಬಿಜೆಪಿ ರಾಜ್ಯಾಧ್ಯಕ್ಷರ ಹೊಣೆಗಾರಿಕೆಯನ್ನು ನಳಿನ್ ಕುಮಾರ್ ಕಟೀಲು ಹೆಗಲೇರಿಸಲು ನಿರ್ಧರಿಸಿದೆ.

ಆದರೆ ಇದ್ಯಾವುದಕ್ಕೂ ಬಿಎಸ್​ವೈ ಒಪ್ಪದೇ ತಮ್ಮನ್ನೇ ಸಿಎಂ ಮಾಡಬೇಕೆಂದು ಆಗ್ರಹಿಸಿದ್ದಾರೆ. 6 ತಿಂಗಳಾದ್ರೂ ನಾನು ಸಿಎಂ ಆಗಿರುತ್ತೇನೆ. ಆಮೇಲೆ ನಿಮಗೆ ಬೇಕಾದವರನ್ನು ಆಯ್ಕೆ ಮಾಡಿ ಎಂದು ಬಿಎಸ್​ವೈ ಹೈಕಮಾಂಡ್​ಗೆ ಒತ್ತಾಯಿಸಿದ್ದಾರೆ. ಆದರೆ ಇದಕ್ಕೆ ಒಪ್ಪದ ಹೈಕಮಾಂಡ್ ನಿಮ್ಮನ್ನು ಮಹಾರಾಷ್ಟ್ರದ ರಾಜ್ಯಪಾಲರನ್ನಾಗಿ ನೇಮಿಸುತ್ತೇವೆ. ನಿಮ್ಮ ಪುತ್ರನಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುತ್ತೇನೆ ಎಂದು ಮನವೊಲಿಸಿದೆ.

ಆದರೆ ಇದಕ್ಕೆ ಬಿಎಸ್​ವೈ ಒಪ್ಪಿಲ್ಲ. ಹೀಗಾಗಿ ಬಿಎಸ್​ವೈ ತಂಡಕ್ಕೆ ಖಡಕ್​ ಎಚ್ಚರಿಕೆ ನೀಡಿರುವ ಹೈಕಮಾಂಡ್​ ಅತೃಪ್ತರನ್ನು ಇಟ್ಟುಕೊಂಡು ಸರ್ಕಾರ ರಚಿಸುವುದು ಅಷ್ಟು ಸುಲಭದ ಕೆಲಸವಲ್ಲ. ನಮ್ಮ ಪ್ರಸ್ತಾಪ ನಿಮಗೆ ಒಪ್ಪಿಯಾಗದೇ ಇದ್ದರೇ ಚುನಾವಣೆಗೆ ಹೋಗೋಣ ಎಂದು ಸ್ಪಷ್ಟವಾಗಿ ಆದೇಶಿಸಿದೆ ಎನ್ನಲಾಗುತ್ತಿದೆ. ಹೀಗಾಗಿ ಕಮಲ ಪಾಳಯದಲ್ಲಿ ಇದೀಗ ತಲ್ಲಣ ಆರಂಭಗೊಂಡಿದೆ.

Comments are closed.