ಕರ್ನಾಟಕ

ರಾಷ್ಟ್ರಪತಿ ಆಡಳಿತ ಜಾರಿ ಸಾಧ್ಯತೆ..?!: ರಮೇಶ್ ಕುಮಾರ್

Pinterest LinkedIn Tumblr


ಬೆಂಗಳೂರು: ದೊಮ್ಮಲೂರು ನಿವಾಸದಲ್ಲಿ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್, ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಎದುರಾಗುವ ಸಂಭವವಿದೆ ಎಂದಿದ್ದಾರೆ. ಅಲ್ಲದೇ ಈ ತಿಂಗಳ ಅಂತ್ಯದಲ್ಲಿ ಸರ್ಕಾರ ರಚನೆಯಾಗದಿದ್ದಲ್ಲಿ, ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಬರುವ ಸಾಧ್ಯತೆ ಇದೆ ಎಂದಿದ್ದಾರೆ.

ಇದೇ ತಿಂಗಳ ಅಂತ್ಯದೊಳಗೆ ಸರ್ಕಾರ ರಚನೆಯಾಗಿಲ್ಲ ಅಂದ್ರೆ, ಫೈನಾನ್ಸ್ ಬಿಲ್ ಪಾಸಾಗೋದಿಲ್ಲ. ತದನಂತರ ಟ್ರೆಶರಿಯಿಂದ ಒಂದು ರೂಪಾಯಿ ಕೂಡ ಡ್ರಾ ಮಾಡಕ್ಕೆ ಆಗೋದಿಲ್ಲ. ರಾಜ್ಯದ ಇತಿಹಾಸದಲ್ಲಿ ಇದೇ ಪ್ರಪ್ರಥಮ ಬಾರಿಗೆ ಇಂತಹ ಬಿಕ್ಕಟ್ಟು ಎದುರಾಗಿದೆ. ಒಂದು ವೇಳೆ ಹೀಗಾದಲ್ಲಿ, ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುವ ಸಂಭವವಿದೆ. ಸರ್ಕಾರಿ ಉದ್ಯೋಗಿಗಳಿಗೂ ಸಂಬಳ ನೀಡಲು ಹಣವಿರುವುದಿಲ್ಲ ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಬಿಜೆಪಿ ಮತ್ತು ಕಾಂಗ್ರೆಸ್ ಪರವಾಗಿ ನಾಯಕರು ಬಂದು ನಿನ್ನೆ ಮಾತನಾಡಿದ್ದಾರೆ. ಬಿಜೆಪಿಯವರು ಯಾವಾಗ ಸರ್ಕಾರದ ರಚನೆ ಮಾಡ್ತಾರೋ, ಅವರಿಗೆ ಬಿಟ್ಟಿದ್ದು. ಆದ್ರೆ, 31ರ ಒಳಗೆ ಸರ್ಕಾರ ರಚನೆ ಮಾಡಬೇಕು. ಇಲ್ಲದಿದ್ದರೆ ಹಣಕಾಸು ವಿಚಾರದಲ್ಲಿ ತೀವ್ರ ರೀತಿಯಾದ ಸಮಸ್ಯೆ ಎದುರಾಗುತ್ತೆ. ಸರ್ಕಾರ ರಚನೆಯಾಗಿ ವಿಧಾನಸಭೆ ಮತ್ತು ಪರಿಷತ್‌ನಲ್ಲಿ ಬಿಲ್ ಪಾಸಾಗಬೇಕು. ಏನು ಮಾಡ್ತಾರೋ ಆ ದೇವರಿಗೆ ಗೊತ್ತು. ನನ್ನ ಎಲ್ಲ ಕೆಲಸಗಳನ್ನು ನಾನು ನಿಯತ್ತಿನಿಂದ ಮುಗಿಸಿದ್ದೇನೆ ಎಂದಿದ್ದಾರೆ.

ಇನ್ನು ಶಾಸಕರ ರಾಜೀನಾಮೆ ವಿಚಾರದ ಬಗ್ಗೆ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್, ಪದೇಪದೇ ನೊಟೀಸ್ ಕೊಡೋಕೆ ನಂಗೆ ಬೇರೆ ಕೆಲಸ ಇಲ್ವಾ? ಒಮ್ಮೆ ಕೊಡಲಾಗಿದೆ. ಅವರು ಬಂದಿಲ್ಲ ಅಂದ್ರೆ ನಾನೇನು ಮಾಡಲಿ. ವಕೀಲರನ್ನು ಕಳಿಸಿದ್ರು. ಮತ್ತೆ ನೊಟೀಸ್ ನೀಡೋ ಪ್ರಮೇಯ ಇಲ್ಲ. ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ನಾನೇನೂ ಮಾತಾಡೋದಿಲ್ಲ ಎಂದು ಖಡಾಖಂಡಿತವಾಗಿ ಸ್ಪೀಕರ್ ಹೇಳಿಕೆ ಕೊಟ್ಟಿದ್ದಾರೆ.

ಒಂದೆಡೆ ಈ ತಿಂಗಳ ಕೊನೆಯಲ್ಲಿ ಬಿಜೆಪಿ ಸರ್ಕಾರ ರಚನೆಯಾಗದಿದ್ದಲ್ಲಿ ರಾಷ್ಟ್ರಪತಿ ಆಡಳಿತ ಬರುತ್ತದೆಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದು, ಸ್ಪೀಕರ್ ಅತೃಪ್ತ ಶಾಸಕರ ರಾಜೀನಾಮೆ ಅಂಗೀಕರಿಸುತ್ತಾರೋ ಇಲ್ಲವೋ, ಅವರನ್ನ ಅನರ್ಹ ಮಾಡಬಹುದೇನೋ ಎಂಬ ಗೊಂದಲದಲ್ಲಿ, ಸ್ಪೀಕರ್ ನಿರ್ಧಾರವನ್ನ ಅವಲಂಬಿಸಿ ಸರ್ಕಾರ ರಚಿಸಬೇಕೆಂದು ಬಿಜೆಪಿಯವರು ಕಾದು ಕುಳಿತಿದ್ದಾರೆ.

Comments are closed.