ಮನೋರಂಜನೆ

47ರ ಹರೆಯದಲ್ಲೂ ಬಿಕನಿ ತೊಟ್ಟ ಬಾಲಿವುಡ್ ಚೆಲುವೆ!!

Pinterest LinkedIn Tumblr

ಬಾಲಿವುಡ್ ನಟಿ ಕಮ್ ಫ್ಯಾಷನ್ ಡಿಸೈನರ್ ಮತ್ತು ಟಿವಿ ನಿರೂಪಕಿ ಮಂದಿರಾ ಬೇಡಿ ಬಿಕಿನಿ ತೊಟ್ಟು ಹಾಟ್ ಆಗಿ ಕಾಣಿಸಿಕೊಳ್ಳುವ ಮೂಲಕ ಫೋಟೋಗೆ ಪೋಸ್ ನೀಡಿದ್ದಾರೆ. ಇನ್ನೂ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದ್ದು, ಅಭಿಮಾನಿಗಳು ಮಂದಿರಾ ಬೇಡಿಗೆ ಫುಲ್ ಫಿದಾ ಆಗಿದ್ದಾರೆ.

ಸದ್ಯ ಫುಲ್ ರಿಲ್ಯಾಕ್ಸ್ ಮೂಡ್ ನಲ್ಲಿರುವ ಮಂದಿರಾ, ಮಾಲ್ಡೀವ್ಸ್ ನ ಸಮುದ್ರ ತೀರದಲ್ಲಿ ರಜೆಯನ್ನು ಎಂಜಾಯ್ ಮಾಡುತ್ತಿದ್ದಾರೆ. 47ರ ಹರೆಯದಲ್ಲಿಯೂ ಕೆಂಪು ಬಣ್ಣದ ಬಿಕಿನಿ ಧರಿಸಿ ಫಿಟ್ ಅಂಡ್ ಫೈನ್ ಆಗಿರುವ ಮಂದಿರ ಫಿಟ್ ನೆಸ್ ಗೆ ಅಭಿಮಾನಿಗಳಷ್ಟೇ ಅಲ್ಲದೆ ಬಾಲಿವುಡ್ ನ ಕೆಲವು ನಟಿಯರು ಸಹ ಮಂದಿರಾ ಫಿಟ್ ನೆಸ್ ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೂ ಸೋಷಿಯಲ್ ಮೀಡಿಯಾದಲ್ಲಿ ಫೋಟೋವನ್ನು ಶೇರ್ ಮಾಡಿಕೊಂಡಿರುವ ಮಂದಿರ “ಈ ಸಮಯವನ್ನು ಹೆಚ್ಚು ಎಂಜಾಯ್ ಮಾಡುತ್ತಿದ್ದೇನೆ, ಬಿಸಿಲು, ನೀಲಿ ಸಮುದ್ರ, ನನಗೆ ತುಂಬಾ ಇಷ್ಟವಾದ ಸ್ಥಳ” ಎಂದೆಲ್ಲ ಬರೆದುಕೊಂಡಿದ್ದಾರೆ. ಸದ್ಯ ಟಾಲಿವುಡ್ ನಟ ಪ್ರಭಾಸ್ ಅಭಿನಯದ ‘ಸಾಹೋ’ ಚಿತ್ರದಲ್ಲಿ ಮಂದಿರ ಬಣ್ಣಹಚ್ಚಿದ್ದು, ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲೂ ಅಭಿನಯಿಸಲಿದ್ದಾರೆ.

Comments are closed.