
ಚಾಮರಾಜನಗರ : ನಾಳೆ ನಡೆಯುವ ವಿಶ್ವಾಸ ಮತ ಯಾಚನೆಗೆ ನಾನು ಹೋಗುವುದಿಲ್ಲ ಎಂದು ಹೇಳುವ ಮೂಲಕ ಬಿಎಸ್ಪಿ ಶಾಸಕ ಎನ್. ಮಹೇಶ್ ಮೈತ್ರಿ ಸರ್ಕಾರಕ್ಕೆ ಬಿಗ್ ಶಾಕ್ ನೀಡಿದ್ದಾರೆ.
ಯಾವುದೇ ಕಾರಣಕ್ಕೂ ಅಸೆಂಬ್ಲಿಗೆ ಹೋಗುವುದಿಲ್ಲ
ಕೊಳ್ಳೇಗಾಲದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಖಾಸಗಿ ಕೆಲಸದಿಂದ ನಾನು ಎರಡು ದಿನ ಕಲಾಪಕ್ಕೆ ಭಾಗವಹಿಸುವುದಿಲ್ಲ, ಇನ್ನೆರಡು ದಿನ ನಾನು ಯಾವುದೇ ಕಾರಣಕ್ಕೂ ಅಸೆಂಬ್ಲಿಗೆ ಹೋಗುವುದಿಲ್ಲ, ನನ್ನ ಕ್ಷೇತ್ರದ ಜನರ ಮಧ್ಯದಲ್ಲಿದ್ದು, ಜನರ ಕೆಲಸ ಮಾಡುವೆ ಎಂದು ಎನ್.ಮಹೇಶ್ ತಿಳಿಸಿದ್ದಾರೆ.
ಎನ್.ಮಹೇಶ್ ಗೆ ಮಾಯಾವತಿ ಸೂಚನೆ
ಸಮ್ಮಿಶ್ರ ಸರ್ಕಾರದ ವಿಶ್ವಾಸ ಮತ ಯಾಚನೆ ವೇಳೆ ತಟಸ್ಥವಾಗಿರುವಂತೆ ಎನ್.ಮಹೇಶ್ ಗೆ ಮಾಯಾವತಿ ಸೂಚನೆ ನೀಡಿದ್ದು ಹೀಗಾಗಿ ವಿಶ್ವಾಸ ಮತಯಾಚನೆ ಹೋಗುವುದಿಲ್ಲ ಎಂದು ಸ್ವತಹ ಎನ್. ಮಹೇಶ್ ತಿಳಿಸಿದ್ದಾರೆ ಇದರಿಂದ ಮೈತ್ರಿ ನಾಯಕರಿಗೆ ಬಿಗ್ ಶಾಕ್ ನೀಡಿದಂತಾಗಿದೆ.
Comments are closed.