ಕರ್ನಾಟಕ

‘ವಿಶ್ವಾಸ ಮತಯಾಚನೆಗೆ ಕಾಲದ ನಿರ್ಬಂಧ ಇಲ್ಲ’: ಸಿದ್ದರಾಮಯ್ಯ

Pinterest LinkedIn Tumblr

ಬೆಂಗಳೂರು: ಶುಕ್ರವಾರ ಮಧ್ಯಾಹ್ನ ಸದನ ಮುಗಿತಿತ್ತು ಆದರೆ ವಿಶೇಷ ಪ್ರಕರಣ ಆಗಿರುವುದರಿಂದ ಶಾಸಕರು ಕೂತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದ ಕಲಾಪದಲ್ಲಿ ಹೇಳಿದರು.

ವಿಧಾನಸೌಧದಲ್ಲಿ ಶುಕ್ರವಾರ ಮಾತನಾಡಿದ ಅವರು, ಇನ್ನೂ ನಮ್ಮ ಶಾಸಕರು ಮಾತನಾಡುವ ಲಿಸ್ಟ್ ಇದೆ, ಸದಸ್ಯರ ಹಕ್ಕುಗಳನ್ನು ಮೊಟಕು ಸಾಧ್ಯವಿಲ್ಲ, ವಿಶ್ವಾಸ ಮತಯಾಚನೆ ಮುಗಿಸಲು ಸಮಯದ ನಿರ್ಬಂಧ ಇಲ್ಲ ಎಂದು ಅವರು ತಿಳಿಸಿದರು.

ಇನ್ನು ವಾಜಪೇಯಿ ಕೂಡ 9 ದಿನ ತೆಗೆದುಕೊಂಡ ನಿದರ್ಶನ ಇದೆ, ಸೋಮವಾರ ಎಷ್ಟೇ ಸಮಯ ಆಗಲಿ, ಮುಖ್ಯವಾದವರು ಮಾತನಾಡಲು ಅವಕಾಶ ಕೊಡಿ, ವಿರೋಧ ಪಕ್ಷದವರು ಮಾತನಾಡಲಿ, ನಂತರ ಸಿಎಂ ಕೂಡ ಮಾತನಾಡುತ್ತಾರೆ ಅದರ ನಂತರ ಮತ ಹಾಕಲಾಗುತ್ತದೆ ಎಂದರು.

ಸದ್ಯ ನಾವೇನು ಓಡಿ ಹೋಗಲ್ಲ, ಸದನದ ಕಲಾಪ ಅಂತಿಮ ಆಗುತ್ತದೆ, ವಿರೋಧ ಪಕ್ಷದವರಿಗೆ ಬೇಗ ಮುಗಿಸಲು ಬಯಸುತ್ತಿದ್ದಾರೆ. ನಮಗೂ ಮುಗಿಸಬೇಕೆಂಬ ಭಾವನೆ ಇದೆ ಎಂದು ಕಾಂಗ್ರೆಸ್​ ಮುಖಂಡ ಸಿದ್ದರಾಮಯ್ಯ ಅವರು ನುಡಿದರು.

Comments are closed.