ಕರ್ನಾಟಕ

ರಿವರ್ಸ್ ಆಫರೇಶನ್?! ಇಂದು ವಿಶ್ವಾಸಮತದ ಪರ ಮತ ಹಾಕ್ತಾರಾ ಬಿಜೆಪಿಗರು?

Pinterest LinkedIn Tumblr


ಮೈತ್ರಿ ಸರ್ಕಾರ ಉಳಿಯುತ್ತಾ ಉರುಳುತ್ತಾ ಎಂಬ ಗೊಂದಲಗಳ ಮಧ್ಯೆ ಇಂದು ವಿಶ್ವಾಸ ಮತಯಾಚನೆ ಇದ್ದು, ರಾಜ್ಯದ ಜನತೆ ಏನಾಗುತ್ತದೆಯೋ ಎಂಬ ಕುತೂಹಲದಿಂದ ಕಾಯುತ್ತಿದ್ದಾರೆ. ಇನ್ನೊಂದೆಡೆ ವಿಶ್ವಾಸಮತ ಯಾಚನೆಯ ಕೊನೆಯ ಕ್ಷಣದಲ್ಲಿ ಬಿಜೆಪಿಗೆ ಕುಮಾರಸ್ವಾಮಿ ರಿವರ್ಸ್ ಆಪರೇಷನ್ ಮಾಡಿದ್ರಾ? ಎನ್ನುವ ಪ್ರಶ್ನೆಗಳು ಪ್ರಾರಂಭವಾಗಿದೆ.

ಹೌದು ಇದೀಗಾ ಬಾಗಲಕೋಟೆಯ ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ಹೊಸ ಬಾಂಬ್ ಸಿಡಿಸಿದ್ದಾರೆ. ಅಷ್ಟಕ್ಕೂ ಆತ ಹೇಳಿದ ವಿಷಯವಾದರೂ ಏನು ಎಂದು ತಿಳಿದುಕೊಳ್ಳುವ ಕುತೂಹಲವಿದ್ದರೆ ಈ ಕೆಳಗಿನ ಸ್ಟೋರಿ ಓದಿ..

ಇಂದು ಬಿಜೆಪಿಯವರು ನಾಲ್ಕೈದು ಜನ ಬಂದು ನಮಗೆ ಬೆಂಬಲಿಸಬಹುದು ಎಂದು ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ಹೇಳಿಕೆ ಸದ್ಯ ರಾಜ್ಯ ರಾಜಕೀಯದಲ್ಲಿ ಎಲ್ಲರಿಗೂ ಕುತೂಹಲ ಮೂಡಿಸಿದೆ.

ಅಲ್ಲದೆ ಬಿಜೆಪಿಯವರೇ ಬಂದು ನಮ್ಮ ಪರ ಕೈ ಎತ್ತಿ ಓಟ್ ಹಾಕಬಹುದು. ಎಂಬುವುದಾಗಿ ಸ್ವತಃ ಸಿಎಂ ಕುಮಾರಸ್ವಾಮಿಯವರು ಆಪರೇಷನ್ ಮಾಡಿದ್ದೀವಿ ಎಂದು ಹೇಳಿರುವ ಮಾತನ್ನು ಉಲ್ಲೇಖಿಸಿ ವಿಶ್ವಾಸ ಮತ ಯಾಚನೆ ವೇಳೆ ಬಿಜೆಪಿಯವರಿಂದಲೂ ಬೆಂಬಲ ಸಿಗಬಹುದೆಂದು ರಾಯರೆಡ್ಡಿ ತಿಳಿಸಿದ್ದಾರೆ.

ವಿಶ್ವಾಸ ಮತ ಯಾಚನೆ ವೇಳೆ ಏನು ಬೇಕಾದರೂ ಆಗಬಹುದು. ವಿಶ್ವಾಸ ಮಾತಯಾಚನೆಗಾಗಿ ಸಿಎಂ ಕುಮಾರಸ್ವಾಮಿ ಸಹ ಪ್ರಯತ್ನ ಮಾಡಿರಬಹುದು. ಅಲ್ಲದೆ ಬಿಜೆಪಿಯಿಂದಲೂ ಬೆಂಬಲ ಸಿಗಬಹುದು ಇಲ್ಲವೆ ನಮ್ಮವರೇ ಬಂದು ಬೆಂಬಲವನ್ನೂ ನೀಡಬಹುದು. ವಿಶ್ವಾಸ ಮತಯಾಚನೆ ವೇಳೆ ಏನಾಗಲಿದೆ ಎನ್ನುವುದು ಯಾರಿಗೂ ಗೊತ್ತಿಲ್ಲ . ಏನೇ ಆಗಲಿ ಏನಾಗಲಿದೆ ಎನ್ನುವುದನ್ನು ಕಾದು ನೋಡಿ ಎಂದು ಹೇಳಿದ ರಾಯರೆಡ್ಡಿ ಮಾತುಗಳು ಕೊನೆ ಕ್ಷಣಗಳಲ್ಲಿ ಎಲ್ಲರಲ್ಲಿಯೂ ಮತ್ತಷ್ಟು ಕುತೂಹಲ ಕೆರಳಿಸಿದೆ.

Comments are closed.