ಕರ್ನಾಟಕ

ನಾನು ರೆಸಾರ್ಟ್​ನಿಂದ ಪರಾರಿಯಾಗಲು ಪ್ರಯತ್ನ ಮಾಡಿಲ್ಲ: ಶಾಸಕ ಸಂಗಮೇಶ್​

Pinterest LinkedIn Tumblr


ಬೆಂಗಳೂರು: ನಾನು ರೆಸಾರ್ಟ್​ನಿಂದ ಹೊರಗೆ ಹೋಗುವ ಪ್ರಯತ್ನ ಮಾಡಿಲ್ಲ, ಮಾಧ್ಯಮಗಳಲ್ಲಿ ತಪ್ಪು ಸುದ್ದಿ ಹಾಕಬೇಡಿ ಎಂದು ಭದ್ರಾವತಿ ಕ್ಷೇತ್ರದ ಕಾಂಗ್ರೆಸ್​ ಶಾಸಕ ಸಂಗಮೇಶ್ ಹೇಳಿದರು.

ಖಾಸಗೀ ರೆಸಾರ್ಟ್​ನಲ್ಲಿ ಮಂಗಳವಾರ ಮಾಧ್ಯಮದ ಜೊತೆ ಮಾತನಾಡಿದ ಅವರು, ನಾನು ಬಿಜೆಪಿಗೆ ಹೋಗುವವನಲ್ಲ, ನಾನು ಕಾಂಗ್ರೆಸ್​ನಲ್ಲಿಯೇ ಇದ್ದೇನೆ, ಇರ್ತೇನೆ ಎಂದು ಅವರು ತಿಳಿಸಿದರು.

ಇನ್ನು ಕ್ಷೇತ್ರದ ಜನರಿಗೆ ಸಮಸ್ಯೆಯಾಗದಂತೆ ವ್ಯವಸ್ಥೆ ಮಾಡಿದ್ದೇನೆ ನಮ್ಮ ಪಕ್ಷದ ಸೂಚನೆಯಂತೆ ಇಲ್ಲಿ ಉಳಿಯಬೇಕಿದೆ ಈ ಪರಿಸ್ಥಿತಿಗೆ ಕಾರಣ ಬಿಜೆಪಿ ನಾಯಕರು ಎಂದರು.

ಅಲ್ಲದೇ ಸರ್ಕಾರ ಯಾವುದೇ ಸಮಸ್ಯೆಯಿಲ್ಲದೆ ಹೋಗುತ್ತಿತ್ತು ಅದನ್ನ ಈ ಪರಿಸ್ಥಿತಿಗೆ ತಂದಿದ್ದು ಬಿಜೆಪಿಯವರು ನನಗೆ ಬಿಜೆಪಿಯಿಂದ ಯಾವುದೇ ಕರೆ ಬಂದಿಲ್ಲ, ಗುರುವಾರ ಬೆಳಿಗ್ಗೆ ೯ ಗಂಟೆ ವರೆಗೆ ಇಲ್ಲಿಯೇ ಇರ್ತೇವೆ ಎಂದು ಭದ್ರಾವತಿ ಕಾಂಗ್ರೆಸ್​ ಶಾಸಕ ಸಂಗಮೇಶ್ ಸ್ಪಷ್ಟಪಡಿಸಿದ್ದಾರೆ.

ಮಧ್ಯಾಹ್ನ ಶಾಸಕ ಸಂಗಮೇಶ್ ಅವರು ರೆಸಾರ್ಟ್​ನಿಂದ ಎಸ್ಕೇಪ್​ ಆಗಲು ಪ್ರಯತ್ನ ಮಾಡಿದ್ದಾರೆ ಎಂದು ಮಾಧ್ಯಮದಲ್ಲಿ ಸುದ್ದಿ ಪ್ರಸಾರವಾಗಿತ್ತು. ಈ ಹಿನ್ನಲೆಯಲ್ಲಿ ಭದ್ರಾವತಿ ಕಾಂಗ್ರೆಸ್​ ಶಾಸಕ ಸಂಗಮೇಶ್ ಅವರು ಮೇಲಿನ ಹೇಳಿಕೆ ನೀಡಿದ್ದಾರೆ.

Comments are closed.