
ಅತೃಪ್ತಿಯಿಂದ ಮುಂಬೈ ಸೇರಿರೋ ಶಾಸಕರೆಲ್ಲ ಅನರ್ಹರಾಗಬೇಕು ಎಂಬುದು ಬಿಜೆಪಿಗರ ಆಸೆ. ಅದಕ್ಕಾಗಿಯೇ ಬಿಜೆಪಿ ಅವರನ್ನು ಮಿಸ್ಗೈಡ್ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್, ಗುರುವಾರದ ವಿಶ್ವಾಸಮತದಲ್ಲಿ ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ. ಅತೃಪ್ತ ಶಾಸಕರು ನಮ್ಮವರೇ. ಅವರ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು. ಬಿಜೆಪಿ ನಮ್ಮ ಶಾಸಕರೆಲ್ಲ ಅನರ್ಹರಾಗಲಿ ಎಂದು ಈ ರೀತಿ ವರ್ತಿಸುತ್ತಿದೆ. ಅತೃಪ್ತ ಶಾಸಕರೆಲ್ಲ ಒಂದೊಮ್ಮೆ ಅನರ್ಹರಾದರೇ ಸುಮ್ಮನೇ ಅವರ ರಾಜಕೀಯ ಭವಿಷ್ಯ ಕಳೆದುಕೊಳ್ಳುತ್ತಾರೆ. ಇದಕ್ಕಾಗಿಯೇ ಬಿಜೆಪಿ ಈ ರೀತಿ ಪ್ಲ್ಯಾನ್ ಮಾಡುತ್ತಿದೆ.
ಇದೆಲ್ಲ ನಮ್ಮ ಅತೃಪ್ತ ಶಾಸಕರಿಗೆ ಅರಿವಾಗುತ್ತಿಲ್ಲ. ಹೀಗಾಗಿ ವಾಸ್ತವವನ್ನು ಅವರಿಗೆ ಅರಿವು ಮಾಡಿಸುವ ಪ್ರಯತ್ನ ಮಾಡುತ್ತೇವೆ. ಬಿಜೆಪಿ ಷಡ್ಯಂತ್ರ ನಡೆಸುತ್ತಿದೆ. ಇದಕ್ಕೂ ಅವರಿಗೂ ಏನು ಸಂಬಂಧವಿಲ್ಲ ಅನ್ನೋದಾದರೇ ಎಂಟಿಬಿ ನಾಗರಾಜ್ ಜೊತೆ ಆರ್.ಅಶೋಕ್ ಯಾಕೆ ಮುಂಬೈಗೆ ತೆರಳಬೇಕಿತ್ತು ಎಂದು ಪ್ರಶ್ನಿಸಿದ್ದಾರೆ.
Comments are closed.