ಕರ್ನಾಟಕ

ಸರ್ಕಾರ ಉಳಿಸಲು ಕೊನೆ ಅಸ್ತ್ರ

Pinterest LinkedIn Tumblr


ಬೆಂಗಳೂರು: ಸಚಿವ ಸಂಪುಟ ಸಭೆಯಲ್ಲಿ ದೋಸ್ತಿ ಸರ್ಕಾರ ಉಳಿಸಿಕೊಳ್ಳಲು ಜೆಡಿಎಸ್- ಕಾಂಗ್ರೆಸ್‌ ನಾಯಕರು ಕೊನೆಯ ಅಸ್ತ್ರ ಪ್ರಯೋಗಿಸಲು ನಿರ್ಧರಿಸಿದ್ದಾರೆ.

ಮುಂಬೈನಿಂದ ಬಂದು ಅತೃಪ್ತ ಶಾಸಕರು ರಾಜೀನಾಮೆ ನೀಡುವ ಮುನ್ನ ವಿಪ್ ನೀಡಲು ನಿರ್ಧರಿಸಿದ್ದು, ವಿಪ್ ನೀಡಿದ ನಂತರವೇ ರೆಬೆಲ್ಸ್ ರಾಜೀನಾಮೆ ನೀಡಬೇಕು.

ಈ ಮೊದಲು ಅತೃಪ್ತರು ನೀಡಿದ ರಾಜೀನಾಮೆ ಅನೂರ್ಜಿತವಾಗಿದ್ದ ಕಾರಣ, ಮತ್ತೊಮ್ಮೆ ಕ್ರಮ ಬದ್ಧವಾಗಿ ಶಾಸಕರು ರಾಜೀನಾಮೆ ನೀಡಬೇಕು. ಹೀಗಾಗಿ ಸ್ಪೀಕರ್ ರಮೇಶ್‌ ಕುಮಾರ್‌ರನ್ನ ಶಾಸಕರು ಭೇಟಿಯಾಗಿ ರಾಜೀನಾಮೆ ಸಲ್ಲಿಸಬೇಕಾಗಿದೆ. ಆದ್ರೆ ಇದಕ್ಕೂ ಮುನ್ನ ವಿಪ್ ನೀಡಿದ್ರೆ, ವಿಪ್ ಪಡೆದ ಶಾಸಕರು ರಾಜೀನಾಮೆ ನೀಡಿದ್ರೆ ಸೇಫ್ ಆಗಿರಲ್ಲ. ಅವರನ್ನ ಆರಾಮಾಗಿ ಅನರ್ಹ ಮಾಡಬಹುದು ಎಂಬುದು ದೋಸ್ತಿಗಳ ಪ್ಲಾನ್ ಆಗಿದೆ.

ಅತೃಪ್ತರ ಮೇಲೆ ತೂಗುಗತ್ತಿ ಇಟ್ಟ ಸರ್ಕಾರ, ವಿಪ್ ಪಾಲಿಸಬೇಕು ಇಲ್ಲದೇ ಅನರ್ಹತೆ ಮಾಡಬಹುದು ಎಂಬ ಅಸ್ತ್ರ ಪ್ರಯೋಗಿಸಲು ದೋಸ್ತಿ ಸರ್ಕಾರ ಮುಂದಾಗಿದೆ.

ಅಲ್ಲದೇ, ರಮೇಶ್ ಜಾರಕಿಹೊಳಿ ಮತ್ತು ಮಹೇಶ್ ಕುಮಟಳ್ಳಿ ಕೇಸ್ ಇನ್ನೂ ಗಂಭೀರವಾಗಿದ್ದು, ಇಬ್ಬರ ಮೇಲೂ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕೇಸ್ ಇದೆ. ಫೆಬ್ರವರಿಯಲ್ಲಿ ಇಬ್ಬರ ವಿರುದ್ಧ ದೂರು ಸಲ್ಲಿಸಲಾಗಿದ್ದು, ಪ್ರಕರಣ ತನಿಖೆ ನಡೆಯುತ್ತಿರುವಾಗ ರಾಜೀನಾಮೆ ಅಂಗೀಕಾರ ಸಾಧ್ಯವಿಲ್ಲ. ಹೀಗಾಗಿ ಇಬ್ಬರನ್ನೂ ಅನರ್ಹಗೊಳಿಸಬಹುದಾಗಿದೆ.

Comments are closed.