
ಬೆಂಗಳೂರು: ರಾಜೀನಾಮೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಾ.ಸುಧಾಕರ್, ನಮ್ಮ ಪಕ್ಷದ ಬಗ್ಗೆ ನಮ್ಮಿಬ್ಬರಿಗೆ ಅಸಮಾಧಾನವಿಲ್ಲ. ನಮ್ಮ ನಾಯಕರ ಬಗ್ಗೆಯೂ ಕೋಪವಿಲ್ಲ. ಪಕ್ಷದ ಸಿದ್ಧಾಂತವನ್ನ ಒಪ್ಪಿಕೊಂಡಿದ್ದವರು. ಸಿದ್ದರಾಮಯ್ಯನವರೇ ನಮ್ಮ ನಾಯಕರು. ನಾನು ಎಲ್ಲೇ ಇರಲಿ ಅವರು ನನ್ನ ಆದರ್ಶ ವ್ಯಕ್ತಿ. ಅವರಿಂದ ಸಾಕಷ್ಟು ಕಲಿತಿದ್ದೇನೆ. ರಾಜಕೀಯ, ಬದುಕಿನಲ್ಲೂ ಆದರ್ಶವಿಟ್ಟುಕೊಂಡಿದ್ದೇನೆ. ನಾನು ಎಲ್ಲಿದ್ದರೂ ಅವರೇ ನನ್ನ ಆದರ್ಶ ಎಂದು ಸಿದ್ದರಾಮಯ್ಯರನ್ನ ಸುಧಾಕರ್ ಹೊಗಳಿದ್ದಾರೆ.
ಅಲ್ಲದೇ, ಮಾಜಿ ಸಿಎಂ ನನಗೆ ಅತ್ಯಂತ ಆತ್ಮೀಯರು. ನನ್ನ ಮನಸ್ಸು ಪರಿವರ್ತನೆ ಮಾಡಲು ನೋಡಿದ್ರು. ನಾನು ವೈಯುಕ್ತಿಕ ಕಾರಣಗಳನ್ನ ಅವರಿಗೆ ತಿಳಿಸಿದ್ದೇನೆ. ಕಠಿಣವಾದ ತೀರ್ಮಾನದ ಬಗ್ಗೆ ಅವರಿಗೆ ತಿಳಿಸಿದ್ದೇನೆ ಎಂದಿದ್ದಾರೆ.
ಕ್ಷೇತ್ರದ ಅಭಿವೃದ್ಧಿಗಾಗಿ ನಾನು ರಾಜಕೀಯಕ್ಕೆ ಬಂದವನು. 13 ತಿಂಗಳು ಯಾವ ಅಭಿವೃದ್ಧಿಯನ್ನೂ ಮಾಡೋಕೆ ಆಗಲಿಲ್ಲ. ಜನರಿಗೆ ಕೊಟ್ಟ ಭರವಸೆ ಈಡೇರಿಸೋಕೆ ಆಗಲಿಲ್ಲ. ಹಾಗಾಗಿಯೇ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಡಾ.ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ.
ನಾವು ಬಾಂಬೆಗೂ ಹೋಗಲ್ಲ. ದೆಹಲಿಗೂ ನಾವು ತೆರಳುವುದಿಲ್ಲ. ಉತ್ತಮ ಹುದ್ದೆ ಬಿಟ್ಟು ರಾಜಕೀಯಕ್ಕೆ ಬಂದವನು. ಕಠಿಣವಾದ ತೀರ್ಮಾನದ ಬಗ್ಗೆ ಅವರಿಗೆ ತಿಳಿಸಿದ್ದೇನೆ. ನಾನು ಕಿಂಡರ್ ಗಾರ್ಡನ್ ಸ್ಟೂಡೆಂಟ್ ಅಲ್ಲ. ಯಾರ ಒತ್ತಡಕ್ಕೂ ನಾನು ಮಣಿದಿಲ್ಲ. ಸ್ವಇಚ್ಛೆಯಿಂದಲೇ ರಾಜೀನಾಮೆ ನೀಡಿದ್ದೇನೆ. ಬೇರೆಯವರಿಗೆ ಒತ್ತಡವಿದೆ ಅನ್ನೋದನ್ನ ನಂಬಲ್ಲ ಎಂದಿದ್ದಾರೆ.
Comments are closed.