ಕರ್ನಾಟಕ

ಬೆಂಗಳುರು ಮಾರುತಿ ಸೇವಾ ನಗರದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ; ದಂಪತಿ, ಮಗು ಸೇರಿದಂತೆ 5 ಸಾವು

Pinterest LinkedIn Tumblr

ಬೆಂಗಳೂರು: ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಸೇರಿದಂತೆ ಎರಡು ಕಟ್ಟಡಗಳು ಕುಸಿದು ದಂಪತಿ, ಮಗು ಸೇರಿದಂತೆ ಐವರು ಸಾವನ್ನಪ್ಪಿ ಏಳು ಮಂದಿ ಗಾಯಗೊಂಡಿರುವ ಘಟನೆ ಪೂರ್ವ ಬೆಂಗಳುರು ಮಾರುತಿ ಸೇವಾ ನಗರದಲ್ಲಿ ಬುಧವಾರ ಮುಂಜಾನೆ ನಡೆದಿದೆ.

ಮೃತರನ್ನು ನಾರಾಯಣ(26), ನಿರ್ಮಲಾ(20), ಅನುಷ್ಕಾ(3), ಶಂಭು ಕುಮಾರ್ (27) ಹಾಗೂ ಖಗನ್ ಸರ್ಕಾರ್ (48) ಎಂದು ಗುರುತಿಸಲಾಗಿದೆ.

ಗಾಯಾಳುಗಳನ್ನು ಅಗ್ನಿಶಾಮಕ ಮತ್ತು ತುರ್ತು ಸೇವೆ ದಳ ರಕ್ಷಿಸಿ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮುಂಜಾನೆ 2.15 ರ ಸುಮಾರಿಗೆ ನಿರ್ಮಾಣ ಹಂತದಲ್ಲಿದ್ದ ಬಹುಮಹಡಿ ಕಟ್ಟಡ ಮತ್ತು ಅದರ ಪಕ್ಕದಲ್ಲಿರುವ ಮತ್ತೊಂದು ಕಟ್ಟಡ ಕುಸಿದಿದೆ ಎಂದು ಪೋಲೀಸರು ಹೇ:ಳಿದ್ದಾರೆ.

ಕಟ್ಟಡದಲ್ಲಿ ಕಾವಲುಗಾರರು ಹಾಗೂ ಅವರ ಕುಟುಂಬ, ಕಾರ್ಮಿಕರ ಸಮೂಹ ವಾಸವಿತ್ತು.ಇನ್ನೊಬ್ಬ ವಾಚ್ ಮ್ಯಾನ್ ಕುಟುಂಬವೂ ಕಟ್ಟಡದ ನೆಲಮಹಡಿಯಲ್ಲಿ ವಾಸವಿತ್ತು. ಅವರು ಕಟ್ಟಡದ ಅವಶೇಷಗಳಡಿ ಸಿಕ್ಕಿಕೊಂಡಿದ್ದಾರೆ.

ಮುಂಜಾನೆ 2.20 ರ ಸುಮಾರಿಗೆ ಮಾಹಿತಿ ಪಡೆದ ನಂತರ ಅಗ್ನಿಶಾಮಕ ಮತ್ತು ತುರ್ತು ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಕಲ್ಲು, ಮಣ್ಣುಗಳ ಅಡಿಯಲ್ಲಿ ಸಿಕ್ಕಿದ್ದ ಮೃತ ವ್ಯಕ್ತಿಯ ದೇಹವನ್ನು ಹೊರತೆಗೆದಿದ್ದು ಗಾಯಾಳುಗಳನ್ನು ರಕ್ಷಣೆ ಮಾಡಿದ್ದಾರೆ.ಘಟನೆಯ ನಂತರ, ಉಪಮುಖ್ಯಮಂತ್ರಿ ಜಿ ಪರಮೇಶ್ವರ, ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮತ್ತು ವಾರ್ಡ್ ಸಂಖ್ಯೆ 59 ಕಾರ್ಪೊರೇಟರ್ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

ನಿರ್ಮಾಣ ಹಂತದ ಕಟ್ಟಡವು ಬಿಬಿಎಂಪಿಯ ಕಾನೂನನ್ನು ಉಲ್ಲಂಘಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.ಈ ಕಾರಣಕ್ಕೆ ಕಟ್ಟಡ ಮಾಲೀಕರು ಹಾಗೂ ಗುತ್ತಿಗೆದಾರರ ಮೇಲೆ ಕ್ರಮ ಜರುಗಿಸಲು ಮೇಯರ್ ಪೊಲೀಸರಿಗೆ ಸೂಚಿಸಿದ್ದಾರೆ.

Comments are closed.