ಕರ್ನಾಟಕ

ಕುಂಕುಮ ಇಟ್ಟುಕೊಳ್ಳಲು ನನಗೆ ಭಯ: ಸಿದ್ದರಾಮಯ್ಯ

Pinterest LinkedIn Tumblr


ಬಾಗಲಕೋಟೆ: ಹಣೆಗೆ ನಾಮ ಇಟ್ಟುಕೊಳ್ಳುವುದಕ್ಕೆ ನನಗೆ ಭಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬಾದಾಮಿಯ ಚಿಮ್ಮನಕಟ್ಟಿ ಗ್ರಾಮದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಕೆ ಗುದ್ದಲಿ ಪೂಜೆ ನೆರವೇರಿಸಿದ ಸಂದರ್ಭದಲ್ಲಿ ಸಿದ್ದರಾಮಯ್ಯಗೆ ಕುಂಕುಮ ಇಡಲು ಅರ್ಚಕರು ಮುಂದಾದರು.

ಆಗ ಸಿದ್ದರಾಮಯ್ಯ ಅವರನ್ನು ತಡೆ, ಬೇಡಪ್ಪ ಬೇ, ನನಗೆ ಕುಂಕುಮ ಇಟ್ಟುಕೊಳ್ಳುವುದಕ್ಕೆ ಭಯ ಎಂದು ಹೇಳಿದರು.

ಈಗ ಸಿದ್ದರಾಮಯ್ಯ ಮತ್ತೊಂದು ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ.

ಈ ಹಿಂದೆ ಬಾದಾಮಿ ಕ್ಷೇತಕ್ಕೆ ಭೇಟಿ ನೀಡಿದ್ದ ಸಿದ್ದರಾಮಯ್ಯ, ಕೆಂಪು ನಾಮ ಹಾಕಿದವರನ್ನು ಕಂಡರೆ ನನಗೆ ಭಯ ಎಂದು ಹೇಳಿಕೆ ನೀಡಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು.

ಬಿಜೆಪಿ ನಾಯಕರು, ಹಿಂದೂ ಪರ ಕಾರ್ಯಕರ್ತರು ಉದ್ದದ ನಾಮ ಬಳಿದುಕೊಂಡು ನಾನೂ ಹಿಂದೂ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕಿದ್ದರು.

Comments are closed.