
ದಾವಣಗೆರೆ: ತಾಯಿಯ ಬಗ್ಗೆ ಆದರ್ಶ ಮಾತುಗಳನ್ನಾಡುವ ಆಧುನಿಕ ಕಾಲದಲ್ಲೂ ತಾಯಿಯನ್ನು ನಡು ನೀರಲ್ಲೇ ಕೈಬಿಡುವ ಸಾಕಷ್ಟು ಮಂದಿ ನಮ್ಮ ನಡುವೆ ಇರುವುದು ದುರದೃಷ್ಟವೇ ಸರಿ. ಇಂತಹದ್ದೇ ಘಟನೆಯೊಂದು ದಾವಣಗೆರೆಯಲ್ಲಿ ನಡೆದಿದೆ.
ಪುತ್ರಿಯರು ವಯಸ್ಸಾದ ತಾಯಿಯನ್ನು ರಸ್ತೆಯಲ್ಲಿಯೇ ಬಿಟ್ಟು ಹೋಗಿರುವ ಆತಂಕಕಾರಿ ಘಟನೆ ದಾವಣಗೆರೆಯ ವಿನೋಭನಗರದಲ್ಲಿ ನಡೆದಿದೆ. ಆಟೋದಲ್ಲಿ ಕರೆತಂದು ಬಿಟ್ಟು ಹೋದರೆಂದು 65 ವರ್ಷದ ವೃದ್ಧೆ ಶಾಂತಮ್ಮ ಸ್ಥಳೀಯರ ಬಳಿ ತನ್ನ ಅಳಲನ್ನು ತೋಡಿಕೊಂಡಿದ್ದಾಳೆ. ಬಳಿಕ ಸ್ಥಳೀಯರು ಆಕೆಗೆ ದೇವಸ್ಥಾನದಲ್ಲಿ ಆಶ್ರಯ ನೀಡಿದ್ದಾರೆ.
ಈ ಬಗ್ಗೆ ಸ್ಥಳೀಯರು ಬಡಾವಣೆ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದಾಗ, ಸ್ಥಳಕ್ಕೆ ಆಗಮಿಸಿದ ಪೊಲೀಸರ ಬಳಿ ವೃದ್ಧೆ ಶಾಂತಮ್ಮ ತನ್ನನ್ನು ವೃದ್ಧಾಶ್ರಮಕ್ಕೆ ಕಳುಹಿಸುವಂತೆ ಅವರ ವಿನಂತಿ ಮಾಡಿಕೊಂಡಿದ್ದಾಳೆ. ಇತ್ತ ಜನರು ಸೇರುತ್ತಿದ್ದಂತೆ ಎಚ್ಚೆತ್ತು ಸ್ಥಳಕ್ಕೆ ಬಂದ ಆಕೆಯ ಮಗಳು ಗೌರಮ್ಮಳಿಗೆ ಪೊಲೀಸರು ಬುದ್ಧಿವಾದ ಹೇಳಿದ್ದಾರೆ. ಬಳಿಕ ಮಗಳು ಆಟೋದಲ್ಲಿ ತಾಯಿಯನ್ನು ವಾಪಸ್ಸು ಕರೆದೊಯ್ದಿದ್ದಾಳೆ.
Comments are closed.