
ಹುಡುಗಿಯರು ಹುಡುಗರೊಂದಿಗೆ ಡೇಟಿಂಗ್ ಗೆ ಹೋಗಲು ಕಾರಣವೇನು ಎಂಬುವುದಕ್ಕೆ ಆನ್ ಲೈನ್ ಮಾಡಿದ ಸಮೀಕ್ಷೆಯಲ್ಲಿ ಅಚ್ಚರಿಯ ಉತ್ತರವೊಂದು ಹೊರಬಿದ್ದಿದೆ. ಹುಡುಗಿಯರು ತಮ್ಮ ಪ್ರಿಯಕರನನ್ನು ಅರ್ಥಮಾಡಿಕೊಳ್ಳಲು ಅಥವಾ ರೊಮ್ಯಾಂಟಿಕ್ ಆಗಿ ಸಮಯವನ್ನು ಕಳೆಯಲು ಡೇಟಿಂಗ್ಗೆ ಹೋಗುವುದಿಲ್ಲವಂತೆ. ಹಾಗಾದರೆ ಅಷ್ಟಕ್ಕೂ ಹುಡುಗಿಯರು ಹುಡುಗರೊಂದಿಗೆ ಡೇಟಿಂಗ್ ಹೋಗಲು ಕಾರಣವೇನು ಎಂದು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ಈ ಕೆಳಗಿನ ಸ್ಟೋರಿ ಓದಿ.
ಹಿಂದಿನ ಕಾಲದಲ್ಲಿ ಹುಡುಗಿಯರು ತಾವು ಇಷ್ಟಪಡುವ ಹುಡುಗನಿಗೆ ಪ್ರೇಮ ನಿವೇದನೆ ಮಾಡುವುದಕ್ಕೂ ಸಹ ಭಯ ಪಡುತ್ತಿದ್ದರು. ತಾವೇ ಮುಂದೆಹೋಗಿ ಪ್ರೀತಿಸುತ್ತಿರುವ ವಿಷಯ ಹೇಳಿಕೊಂಡರೆ ಏನು ತಿಳಿದುಕೊಳ್ಳುತ್ತಾರೋ ಎಂದು ಹೇಳಿಕೊಳ್ಳಲು ಹಿಂಜರಿಯುತ್ತಾರೆ.
ಆದರೆ ಇಂದಿನ ಕಾಲದಲ್ಲಿ ಪ್ರೀತಿಯನ್ನು ಹೇಳಿಕೊಳ್ಳುವ ವಿಚಾರದಲ್ಲಿ ಹುಡುಗ-ಹುಡುಗಿ ಎಂ ಭೇದವಿಲ್ಲ. ತಮ್ಮ ಅನಿಸಿಕೆ ಇಚ್ಛೆಗಳನ್ನು ಹಿಂದೆ ಮುಂದೆ ಯೋಚಿಸದೆ ಹೇಳಿಕೊಳ್ಳುವ ಮಟ್ಟಿಗೆ ಹುಡುಗಿಯರ ಮನಸ್ಥಿತಿ ಬದಲಾಗಿದೆ.
ಹಿಂದೆ ಹುಡುಗ ಹುಡುಗಿಯರು ತಾವು ಇಷ್ಟಪಡುವವರನ್ನು ಕದ್ದುಮುಚ್ಚಿ ಪ್ರೀತಿ ಮಾಡುತ್ತಿದ್ದರು, ಆದರೆ ಇದು ಹಳೆಯ ಕಾಲವಲ್ಲ. ಪ್ರೀತಿಯೆಂದ ಮೇಲೆ ಡೇಟಿಂಗ್ ಕಾಮನ್ ಆಗಿದ್ದು, ಇತ್ತೀಚೆಗೆ ಡೇಟಿಂಗ್ ಬಗೆಗೆ ಅಧ್ಯಯನ ನಡೆಸಿರುವ ಸಂಸ್ಥೆಯೊಂದು ಅಚ್ಚರಿಯ ಸಂಗತಿಯನ್ನು ಹೊರಹಾಕಿದೆ.
ಇಂದಿನ ಪೀಳಿಗೆಯ ಡೇಟಿಂಗ್ ಹೋಗುವ ಯುವತಿಯರು 4ರಲ್ಲಿ ಒಬ್ಬರು ಯುವತಿಯರು ತಮ್ಮ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳಲೆಂದು ಹೋಗುವುದಿಲ್ಲ. ಬಾಯ್ಫ್ರೆಂಡ್ ಜೊತೆ ಡೇಟಿಂಗ್ ಹೋದರೆ ಖರ್ಚಿಲ್ಲದೆ ಒಳ್ಳೆಯ ಊಟ ಸಿಗುತ್ತದೆ ಎಂಬ ಕಾರಣಕ್ಕೆ ಡೇಟಿಂಗ್ ಹೋಗುತ್ತಾರೆ ಎಂಬ ಕುತೂಹಲಕಾರಿ ಸಂಗತಿಯನ್ನು ಆನ್ಲೈನ್ ಮೂಲಕ ಮಾಡಲಾದ ಅಧ್ಯಯನವೊಂದರಲ್ಲಿ ಈ ಮಾಹಿತಿ ಬಹಿರಂಗಗೊಂಡಿದೆ.
ಕ್ಯಾಲಿಫೋರ್ನಿಯ ಮೂಲದ ಅಜುಸಾ ಪೆಸಿಫಿಕ್ ಯುನಿವರ್ಸಿಟಿ ಮತ್ತು ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯ- ಮೆರ್ಸೆಡ್ ನಡೆಸಿದ ಆನ್ಲೈನ್ ಸಮೀಕ್ಷೆಯಲ್ಲಿಶೇ. 22ರಿಂದ 33ರಷ್ಟು ಯುವತಿಯರು ತಾವು ಖರ್ಚಿಲ್ಲದೆ ಉಚಿತ ಊಟಕ್ಕಾಗಿ ಡೇಟಿಂಗ್ ಮಾಡುವುದಾಗಿ ಒಪ್ಪಿಕೊಂಡಿದ್ದಾರೆ. ಎಂಬ ಅಚ್ಚರಿಯ ವಿಷಯ ತಿಳಿದುಬಂದಿದೆ.
ಇವರು ನಡೆಸಿದ ಮೊದಲ ಸಮೀಕ್ಷೆಯಲ್ಲಿ 820 ಮಹಿಳೆಯರನ್ನು ಬಳಸಿಕೊಂಡು ಅಧ್ಯಯನ ನಡೆಸಲಾಯಿತು ಈ ಗುಂಪಿನ ಶೇ. 23ರಷ್ಟು ಮಹಿಳೆಯರು ತಾವು ಫುಡ್ಗಾಗಿಯೇ ಡೇಟಿಂಗ್ಗೆ ಒಪ್ಪಿಕೊಂಡಿದ್ದಾಗಿ ಒಪ್ಪಿಕೊಂಡಿದ್ಧಾರೆ. ಇನ್ನೂ ಸಮೀಕ್ಷೆ 2 ರಲ್ಲಿ 357 ಮಹಿಳೆಯರನ್ನು ಬಳಸಲಾಗಿದ್ದು, ಇದರಲ್ಲಿಯೂ ಸಹ ಶೇ. 33ರಷ್ಟು ಮಹಿಳೆಯರು ಫುಡ್ಗಾಗಿ ಡೇಟಿಂಗ್ ಮಾಡಿರುವುದಾಗಿ ಸ್ವತಃ ಅವರೆ ಒಪ್ಪಿಕೊಂಡಿದ್ದಾರೆ.
Comments are closed.