
ಬೆಂಗಳೂರು (ಜೂ. 24): ಈ ಬಾರಿಯ ವಿಶ್ವಕಪ್ನಲ್ಲಿ ಇಂಜುರಿಗೆ ತುತ್ತಾಗಿ ಟೂರ್ನಿಯಿಂದ ಹೊರ ನಡೆಯುತ್ತಿರುವ ಸಂಖ್ಯೆ ಏರುತ್ತಲೆ ಇದೆ. ಇದಕ್ಕೆ ಹೊಸ ಸೇರ್ಪಡೆ ವೆಸ್ಟ್ ಇಂಡೀಸ್ ತಂಡದ ಸ್ಟಾರ್ ಆಲ್ರೌಂಡರ್ ಆಟಗಾರ ಆ್ಯಂಡ್ರೋ ರಸೆಲ್.
ರಸೆಲ್ ಮೊಣಕಾಲು ನೋವಿನಿಂದ ಬಳಲುತ್ತಿರುವ ಕಾರಣ ವಿಶ್ವಕಪ್ನಿಂದಲೇ ಹೊರಗುಳಿಯ ಬೇಕಾಗಿ ಬಂದಿದೆ. ಇವರು ಬದಲು ಮತ್ತೊಬ್ಬ ಆಟಗಾರ ಸುನೀಲ್ ಅಂಬ್ರಿಸ್ರನ್ನು ಆಯ್ಕೆ ಮಾಡಲಾಗಿದೆ ಎಂದು ಐಸಿಸಿ ತಿಳಿಸಿದೆ.
ಪ್ರಮುಖ ಹಂತದಲ್ಲೇ ರಸೆಲ್ ತಂಡ ಬಿಟ್ಟಿರುವುದು ವೆಸ್ಟ್ ಇಂಡೀಸ್ಗೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಅಲ್ಲದೆ ರಸೆಲ್ಗೆ ಮೊಣಕಾಲು ನೋವಿದ್ದರು ಕಳೆದ ಕೆಲ ಪಂದ್ಯಗಳಿಂದ ಆಡುತ್ತಲೇ ಇದ್ದಾರೆ. ಪಂದ್ಯದ ಮಧ್ಯೆ ಕೆಲ ಓವರ್ ಬೌಲಿಂಗ್ ಮಾಡಿ ಬಳಿಕ ನೋವು ತಾಳಲಾರದೆ ಮೈದಾನದಿಂದ ಹೊರ ನಡೆದ ಪ್ರಸಂಗವೂ ನಡೆದಿತ್ತು.
ರಸೆಲ್ ಬದಲು ಸ್ಥಾನ ಪಡೆದುಕೊಂಡಿರುವ 26 ವರ್ಷ ಪ್ರಾಯದ ಅಂಬ್ರಿಸ್ 6 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ ಒಂದು ಅರ್ಧಶತಕ ಬಾರಿಸಿದ್ದಾರೆ.
ವೆಸ್ಟ್ ಇಂಡೀಸ್ ಸದ್ಯ ಆಡಿರುವ 6 ಪಂದ್ಯಗಳ ಪೈಕಿ ಕೇವಲ ಒಂದರಲ್ಲಿ ಮಾತ್ರ ಗೆದ್ದಿದೆ. 4 ಪಂದ್ಯಗಳಲ್ಲಿ ಸೋಲುಂಡಿದ್ದು, ಒಂದು ರದ್ದಾಗಿದೆ. ಹೀಗಾಗಿ 3 ಅಂಕದೊಂದಿಗೆ 8ನೇ ಸ್ಥಾನದಲ್ಲಿದೆ.
ಈಗಾಗಲೇ ವಿಶ್ವಕಪ್ನಲ್ಲಾದ ಇಂಜುರಿಯಿಂದಾಗಿ ಶಿಖರ್ ಧವನ್, ಡೇಲ್ ಸ್ಟೇನ್ ಸೇರಿದಂತೆ ಪ್ರಮುಖ ಸ್ಟಾರ್ ಆಟಗಾರರು ಟೂರ್ನಿಂದ ಹೊರಗುಳಿದಿದ್ದಾರೆ.
Comments are closed.