ಕರ್ನಾಟಕ

ಸಿಸಿಟಿವಿಯಲ್ಲಿ ಬಯಲಾಯ್ತು ಪಬ್​ನಿಂದ ಕೆಳಗೆ ಬಿದ್ದ ಇಬ್ಬರ ಸಾವಿನ ರಹಸ್ಯ!

Pinterest LinkedIn Tumblr

ಬೆಂಗಳೂರು: ಪಬ್​ನಿಂದ ಆಯತಪ್ಪಿ ಬಿದ್ದ ಇಬ್ಬರ ಸಾವಿನ ರಹಸ್ಯ 14 ಸೆಕೆಂಡ್ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪವನ್ ಹಾಗೂ ವೇದ ಇಬ್ಬರೂ ಕುಡಿದು ಒಬ್ಬರ ಮೇಲೆ ಒಬ್ಬರು ಹೆಗಲ ಮೇಲೆ ಕೈ ಹಾಕಿಕೊಂಡು ಪಬ್​ನಿಂದ ಹೊರಗೆ ಬರುತ್ತಾರೆ.

ಈ ವೇಳೆ ಮೆಟ್ಟಿಲು ಇಳಿಯುವಾಗ ವೇದ ಆಯತಪ್ಪಿ ಜಾರಿ ಮುಂದೆ ಇದ್ದ ಪವನ್ ಮೇಲೆ ಬೀಳುತ್ತಾಳೆ. ಈ ವೇಳೆ ಪವನ್​​ ಆಯತಪ್ಪಿ ಕಿಟಕಿ ಮೇಲೆ ಬಿದ್ದು ಕೆಳಗಡೆ ಬಿದ್ದಿದ್ದಾನೆ. ಪವನ್ ಹಿಂದೆಯೇ ವೇದ ಸಹ ಕೆಳಗೆ ಬಿದ್ದು ಸಾವನ್ನಪ್ಪಿದ್ದಾಳೆ.

ಚರ್ಚ್​ ಸ್ಟ್ರೀಟ್​ನ ಆ್ಯಶ್​ ಬಿಯರ್​ ಪಬ್​ಗೆ ವಾರಾಂತ್ಯದ ಮೋಜಿಗೆಂದು ತೆರಳಿದ್ದ ಪವನ್ ಅತ್ತಾವರ್, ವೇದಾ, ಕಟ್ಟಡದಿಂದ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ. ಇವರು ಐಬಿಎಂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಪಬ್​ನ ಕೊನೆಯ ಅಂತಸ್ತಿನಲ್ಲಿ ಪಾರ್ಟಿ ಮಾಡುತ್ತಿದ್ದ ವೇಳೆ, ಆಯತಪ್ಪಿ ಬಿದ್ದು ಇಬ್ಬರೂ ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಪವನ್ ಹಾಗೂ ವೇದಾ ತಲೆಯ ಭಾಗಕ್ಕೆ ಗಂಭೀರವಾಗಿ ಗಾಯವಾಗಿ ತೀವ್ರ ರಕ್ತಸ್ರಾವವಾಗಿತ್ತು. ಇದೇ ವೇಳೆ ನೂತನ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಅವರು ಚರ್ಚ್ ಸ್ಟ್ರೀಟ್ ರೋಡಲ್ಲಿ ನೈಟ್ ರೌಂಡ್ಸ್ ನಲ್ಲಿದ್ದರು. ಇದೇ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಹೋಗಿ ನೋಡಿದಾಗ ಇಬ್ಬರ ಪರಸ್ಥಿತಿ ಗಂಭೀರವಗೈತ್ತು. ಇಬ್ಬರನ್ನ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಬ್ಬರೂ ಅದಾಗಲೇ ಮೃತಪಟ್ಟಿದ್ದರು. ಜೋಡಿ ಕಟ್ಟಡದಿಂದ ಕೆಳಗೆ ಬೀಳುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

Comments are closed.