
ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಲಾಗಿದ್ದು, ಹಲವು ಪೊಲೀಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಲಾಗಿದೆ.
ರವಿ ಡಿ ಚನ್ನಣ್ಣನವರ್ ಸಿಐಡಿ ಎಸ್ಪಿ ಆಗಿ ವರ್ಗಾವಣೆಯಾಗಿದ್ದಾರೆ. ಸೌಮೆಂದು ಮುಖರ್ಜಿ ,ಬೆಂಗಳೂರಿನ ಇಂಟರ್ನಲ್ ಸೆಕ್ಯುರಿಟಿ ಐ ಜಿ ಪಿ ಅಗಿ ವರ್ಗಾವಣೆಯಾಗಿದ್ದು, ಶ್ರಿ ರಾಘವೇಂದ್ರ ಸುಹಾಸ್, ಸದರನ್ ರೇಂಜ್ ಐಜಿಪಿ ಅಗಿ ವರ್ಗಾವಣೆಯಾಗಿದ್ದಾರೆ.
ಇನ್ನು ರವಿಕಾಂತೇ ಗೌಡರು ಸಿಸಿಬಿ ಮುಖ್ಯಸ್ಥರಾಗಿ ವರ್ಗಾವಣೆಯಾದರೆ, ಅಮಿತ್ ಸಿಂಗ್ , ಸಿವಿಲ್ ಡಿಫೆನ್ಸ್ ಮತ್ತು ಹೋಮ್ ಗಾರ್ಡ್ ವಿಭಾಗದ ಎಸ್ ಪಿ ಆಗಿ ವರ್ಗಾವಣೆಯಾಗಿದ್ದಾರೆ. ರಾಮ್ ನಿವಾಸ್ ಸೆಪಟ್ ಎಸಿಬಿ ಎಸ್ಪಿಯಾಗಿ ವರ್ಗಾವಣೆಯಾಗಿದ್ದು, ಎಂ ಎನ್ ಅನುಚೇತ್ ರೈಲ್ವೆ ಎಸ್ ಪಿ ಆಗಿ ಟ್ರಾನ್ಸ್ಫರ್ ಆಗಿದ್ದಾರೆ.
ಬಿ ರಮೇಶ್ ಬೆಂಗಳೂರು ಪಶ್ಚಿಮ ವಿಭಾಗ ಡಿಸಿಪಿ ಆಗಿ ವರ್ಗಾವಣೆಯಾದರೆ, ಡಾ, ಭೀಮಾಶಂಕರ್ ಎಸ್ ಗುಳೇದ್ ಬೆಂಗಳೂರು ಈಶಾನ್ಯ ವಿಭಾಗ ಡಿಸಿಪಿ ಆಗಿ ವರ್ಗಾವಣೆಯಾಗಿದ್ದಾರೆ ಮತ್ತು ಸಿ ಬಿ ರಿಶ್ಯಂತ್ ಮೈಸೂರು ಎಸ್ ಪಿ ಆಗಿ ವರ್ಗಾವಣೆಯಾಗಿದ್ದಾರೆ.
ಮಹಮದ್ ಸುಜೀತಾ ಕೆಜಿಎಫ್ಗೆ ಎಸ್ ಪಿ ಆಗಿ ವರ್ಗಾವಣೆಯಾಗಿದ್ದು, ಟಿಪಿ ಶಿವಕುಮಾರ್ , ಬೆಂಗಳೂರು ಗ್ರಾಮಾಂತರ ಎಸ್ ಪಿ ಆಗಿ ಟ್ರಾನ್ಸ್ಫರ್ ಆಗಿದ್ದಾರೆ. ಎನ್ ವಿಷ್ಣುವರ್ಧನ್ ಬೆಂಗಳೂರು ಅಡಳಿತ ಡಿಸಿಪಿ ಅಗಿ ವರ್ಗಾವಣೆಯಾದರೆ, ಕಲಾ ಕೃಷ್ಣ ಸ್ವಾಮಿ ಏಫ್ ಎಸ್ ಎಲ್ ನಿರ್ದೇಶಕರಾಗಿ ವರ್ಗಾವಣೆಯಾಗಿದ್ದಾರೆ.
Comments are closed.