ಕರ್ನಾಟಕ

ಕುಮಾರಸ್ವಾಮಿ ಜಿಲ್ಲಾಧಿಕಾರಿಗಳಿಗೆ ಕೊಟ್ಟ ಖಡಕ್​ ಸೂಚನೆಗಳಿವು..!

Pinterest LinkedIn Tumblr


ಬೆಂಗಳೂರು: ಮೊದಲ ದಿನದ ಜಿಲ್ಲಾಧಿಕಾರಿಗಳ ಜೊತೆಗಿನ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಸಭೆ ಮುಕ್ತಾಯಗೊಂಡಿದೆ. ಸಭೆಯಲ್ಲಿ ಹಲವು ಮಹತ್ವದ ವಿಷಯಗಳ ಬಗ್ಗೆ ಗಂಭೀರವಾಗಿ ಸಮಲೋಚನೆ ನಡೆಸಲಾಗಿದೆ.

ವಿಧಾನಸೌಧದಲ್ಲಿ ಬುಧವಾರ ನಡೆದ ಸಭೆಯಲ್ಲಿ ಪ್ರಮುಖವಾಗಿ ವಿಧವೆ ವೇತನಕ್ಕೆ ಸಂಬಂಧಿಸಿದಂತೆ ಈಗ ಇರುವ ಮಾನದಂಡಗಳನ್ನು ಸರಿಪಡಿಸಬೇಕು. ಅಲ್ಲದೇ ವಿಧವೆ ವೇತನ ಬಗ್ಗೆ ಸಾಕಷ್ಟು ದೂರುಗಳು ಬರ್ತಿವೆ. ಹೀಗಾಗಿ ಇದಕ್ಕೆ ಸರಿಯಾದ ಮಾನದಂಡಗಳನ್ನು ಮಾಡಬೇಕು. ಈಗಿರುವ ಮಾನದಂಡಗಳನ್ನು ಸಡಿಲಿಸಬೇಕು ಎಂದು ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಅಲ್ಲದೇ ಈಗಾಗಲೇ ನಿವೃತ್ತಿ ಆದ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ವಿಧವೆ ವೇತನ ತಲುಪಿಸುವ ಕೆಲಸ ಉತ್ತಮವಾದುದ್ದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಜಯಮಾಲ ಅವರು ಸಿಎಂ, ಡಿಸಿಎಂ ಹಾಗೂ ಜಿಲ್ಲಾಧಿಕಾರಿಗಳಿಗೆ ಸಲಹೆ ಕೊಟ್ಟಿದ್ದಾರೆ. ಇದಕ್ಕೆ ಸಿಎಂ ಕೂಡ ಒಪ್ಪಿಗೆ ಸೂಚಿಸಿದ್ದಾರೆ.

ಕಂದಾಯ ಇಲಾಖೆಯಲ್ಲಿರುವ ಕೇಸ್​ಗಳ ಬಗ್ಗೆ ಚರ್ಚೆ ಕೂಡ ನಡೆಸಲಾಗಿದೆ. ಕಂದಾಯ ಇಲಾಖೆಯಲ್ಲಿ ಇನ್ನೂ 1ಲಕ್ಷದ 52ಸಾವಿರ ಕೇಸ್​ಗಳು ಬಾಕಿ ಇವೆ. ಹೀಗಾಗಿ ಈ ಪ್ರಕರಣಗಳನ್ನು ಇತ್ಯರ್ಥ ಗೊಳಿಸುವಂತೆ ಸೂಚಿಸಲಾಗಿದೆ. ತೆಲಂಗಾಣದಲ್ಲಿ ಅದಲಾತ್ ಮಾದರಿ ರೀತಿ ರಾಜ್ಯದಲ್ಲೂ ಮಾಡಿ ಪ್ರಕರಣ ಇತ್ಯರ್ಥಕ್ಕೆ ಸಿಎಂ ಒಲವು ತೋರಿಸಿದ್ದಾರೆ.

ಸರ್ಕಾರಿ ಗೋಮಾಳ ಭೂಮಿಯನ್ನು ಒತ್ತುವರಿ ಮಾಡಿಕೊಂಡ ಬಗ್ಗೆ ಸಿಎಂ ಅಧಿಕಾರಿಗಳೊಟ್ಟಿಗೆ ಗಂಭೀರ ಚರ್ಚೆ ನಡೆಸಿ, ಸರ್ಕಾರಿ ಗೋಮಾಳ ಜಮೀನು ದೊಡ್ಡ ದೊಡ್ಡ ವ್ಯಕ್ತಿಗಳಿಂದ ಒತ್ತುವರಿ ಆಗುತ್ತಿದೆ. ನಕಲಿ ದಾಖಲೆ ಸೃಷ್ಠಿಸಿ ಒತ್ತುವರಿ ಮಾಡುತ್ತಿದ್ದಾರೆ. ಇದರ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುಬೇಕು ಎಂದು ಸಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ.

Comments are closed.