ಕರ್ನಾಟಕ

ಜೂ.12 ರಂದು ನಡೆಯಲಿರುವ ಸಂಪುಟ ವಿಸ್ತರಣೆಯಲ್ಲಿ ಯಾರಿಗೆ ಸಿಗಲಿದೆ ಮಂತ್ರಿ ಪಟ್ಟ ಗೊತ್ತಾ…? ಇಲ್ಲಿ ನೋಡಿ…

Pinterest LinkedIn Tumblr

ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಖಾಲಿ ಇರುವ ಮೂರು ಸ್ಥಾನಗಳಿಗೂ ಸಚಿವರನ್ನು ನೇಮಿಸಲು ಜೂ.12 ರಂದು ಸಂಪುಟ ವಿಸ್ತರಣೆ ನಡೆಯಲಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದು ರಾಜ್ಯಪಾಲ ವಿ.ಆರ್.ವಾಲಾ ಅವರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆಗೆ ಸಮಯ ನೀಡುವಂತೆ ಮನವಿ ಮಾಡಿದ್ದಾರೆ.

ಮುಂದೂಡಿಕೆ ಆಗುತ್ತಲೇ ಬಂದಿದ್ದ ಸಚಿವ ಸಂಪುಟ ವಿಸ್ತರಣೆ ಕಾರ್ಯ ನಿಗದಿ ಆಗಿದ್ದು ಬುಧವಾರ ಜೂನ್ 12 ರಂದು ಸಂಪುಟ ವಿಸ್ತರಣೆಗೆ ಟೈಮ್ ಫಿಕ್ಸ್ ಮಾಡಲಾಗಿದೆ. ಮೂವರು ಶಾಸಕರಿಗೆ ರಾಜಭವನದಲ್ಲಿ ರಾಜ್ಯಪಾಲರು ಪ್ರಮಾಣ ವಚನ ಬೋಧಿಸಲಿದ್ದಾರೆ. ಮೂವರು ಸಚಿವರು ಯಾರು ಎಂದು ಗೌಪ್ಯತೆ ಕಾಪಾಡಿಕೊಳ್ಳಲಾಗಿದ್ದು, ಮೂಲಗಳ ಪ್ರಕಾರ ರಾಮಲಿಂಗಾ ರೆಡ್ಡಿ, ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ ಮತ್ತು ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಅವರು ಸಚಿವರಾಗುವ ಸಾಧ್ಯತೆ ಹೆಚ್ಚಿದೆ.

ಮೂರು ಸಚಿವ ಸ್ಥಾನ ಖಾಲಿ ಇದೆ ಮೂರು ಸಚಿವ ಸ್ಥಾನಗಳು ಸದ್ಯಕ್ಕೆ ಖಾಲಿ ಇದ್ದು, ಅವುಗಳ ಜೊತೆಗೆ ಈಗಿರುವ ಕೆಲವರನ್ನು ರಾಜೀನಾಮೆ ಕೊಡಿಸಿ ಆ ಸ್ಥಾನಕ್ಕೆ ಅತೃಪ್ತರನ್ನು ಸಾಹಸ ಕೂಡ ನಡೆಸಲಾಗಿತ್ತು. ಹಾಗಾಗಿ ಯಾವ ಅತೃಪ್ತರಿಗೆ ಸಂಪುಟದಲ್ಲಿ ಸ್ಥಾನ ಸಿಗಲಿದೆ ಎಂಬುದು ಬುಧವಾರದಂದು ಗೊತ್ತಾಗಲಿದೆ.

ಕಾಂಗ್ರೆಸ್ ಶಾಸಕ ಬಿ,ಸಿ ಪಾಟೀಲ್ ಗೆ ಸಚಿವ ಸ್ಥಾನ ನೀಡಲಾಗುತ್ತೆಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಬಿ.ಸಿ ಪಾಟೀಲ್ ಗೆ ಸ್ಥಾನ ನೀಡಿದರೇ ಮತ್ತೆ ಅಸಮಾಧಾನ ಭುಗಿಲೇಳಬಹುದು ಎಂಬ ಕಾರಣದಿಂದಾಗಿ ಬಿ,ಸಿ ಪಾಟೀಲ್ ಅವರನ್ನು ಕೈ ಬಿಡಲಾಗಿದೆ.

Comments are closed.